Samantha Ruth Prabhu : ಜನಪ್ರಿಯ ನಟಿ ಸಮಂತಾ ರುತ್ ಪ್ರಭು ಅವರ ಇತ್ತೀಚಿನ ಯಶೋದಾ ಚಿತ್ರ ಕಠಿಣ ಸಾಹಸ ದೃಶ್ಯಗಳನ್ನು ಒಳಗೊಂಡಿದೆ. ಸಮಂತಾ ರುತ್ ಪ್ರಭು ತಮ್ಮ ಇತ್ತೀಚಿನ ಸಿನಿಮಾ ಯಶೋದಾದಲ್ಲಿ ತನ್ನ ಅಭಿನಯದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಈ ಚಿತ್ರದಲ್ಲಿ ನಟಿ ತಮ್ಮ ಆಕ್ಷನ್ ಸೀಕ್ವೆನ್ಸ್‌ನಿಂದ ಎಲ್ಲರ ಮನಗೆಲ್ಲುತ್ತಿದ್ದಾರೆ. ಯಶೋದಾ ಆಕ್ಷನ್ ಸೀಕ್ವೆನ್ಸ್‌ ಹಿಂದಿನ ಬಿಗ್‌ ಸೀಕ್ರೇಟ್‌ ಅನ್ನು ಇದೀಗ ಖುದ್ದು ಸಮಂತಾ ಅವರೇ ರಿವೀಲ್‌ ಮಾಡಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಯಶೋದಾ ಆಕ್ಷನ್ ಸೀಕ್ವೆನ್ಸ್‌ಗಳ ತೆರೆಮರೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಮೂಗು ಚುಚ್ಚಿಸಿಕೊಂಡ ಹರಿಪ್ರಿಯಾ, ಮದ್ವೆ ಬಗ್ಗೆ ಕೊಡ್ತಾರಾ ಗುಡ್‌ ನ್ಯೂಸ್?‌


BTS ವಿಡಿಯೋದಲ್ಲಿ ತನ್ನ ಪೂರ್ವಸಿದ್ಧತೆಯ ಬಗ್ಗೆ ತೆರೆದಿಟ್ಟಿದ್ದಾರೆ. ಚಿತ್ರೀಕರಣಕ್ಕಾಗಿ ಕಠಿಣವಾದ ವರ್ಕೌಟ್‌ ಮಾಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಜಿಮ್‌ನಲ್ಲಿ ದೇಹ ದಂಡಿಸುವ ಜೊತೆಗೆ ಕಠಿಣ ಕಸರತ್ತು ಕೂಡ ಮಾಡಿದ್ದಾರೆ. ಯಶೋದಾ ಬಿಡುಗಡೆಯೊಂದಿಗೆ ಸಮಂತಾ ಸಾಕಷ್ಟು ಜನ ಮೆಚ್ಚುಗೆ ಗಳಿಸಿದರು. ನಟಿ ಅತ್ಯಂತ ಸೂಕ್ಷ್ಮವಾದ ಆದರೆ ಉಗ್ರವಾದ ಪಾತ್ರವನ್ನು ನೀಡು ಕುಡಿದಷ್ಟು ಸಲೀಸಾಗಿ ನಿಭಾಯಿಸಿದ್ದಾರೆ.


 



 


ಹರಿ-ಹರೀಶ್ ನಿರ್ದೇಶನದ ಚಿತ್ರದಲ್ಲಿ ಭ್ರಷ್ಟ ವೈದ್ಯಕೀಯ ಪ್ರಪಂಚದ ರಹಸ್ಯಗಳನ್ನು ಬಿಚ್ಚಿಡುವ ಬಾಡಿಗೆ ತಾಯಿಯಾಗಿ ಸಮಂತಾ ನಟಿಸಿದ್ದಾರೆ. ಸಮಂತಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಲನಚಿತ್ರ ಮತ್ತು ಅಭಿನಯವನ್ನು ಮೆಚ್ಚಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.


ಇದನ್ನೂ ಓದಿ : ಒಂದು ಕಿಸ್‌ನಿಂದ ಶುರುವಾಗಿದ್ದಂತೆ ದೀಪಿಕಾ - ರಣವೀರ್‌ ಪ್ರೇಮ ಕಹಾನಿ


ಇತ್ತೀಚೆಗೆ ಸಮಂತಾ ಮೈಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯೊಂದಿಗಿನ ತನ್ನ ಹೋರಾಟವನ್ನು ಬಹಿರಂಗಪಡಿಸಿದಾಗ ಅಭಿಮಾನಿಗಳು ಮತ್ತು ಚಿತ್ರರಂಗದ ಬಂಧುಗಳು ಆಘಾತಕ್ಕೊಳಗಾಗಿದ್ದರು. ಸಮಂತಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.