Deepika - Ranveer love story: ಒಂದು ಕಿಸ್‌ನಿಂದ ಶುರುವಾಗಿದ್ದಂತೆ ದೀಪಿಕಾ - ರಣವೀರ್‌ ಪ್ರೇಮ ಕಹಾನಿ

Deepika - Ranveer love story: ಬಾಲಿವುಡ್‌ ಕ್ಯೂಟ್‌ ಕಪಲ್‌ಗಳಲ್ಲಿ ದೀಪಿಕಾ ಮತ್ತು ರಣವೀರ್‌ ಜೋಡಿ ಕೂಡ ಒಂದು. ಇವರ ಪ್ರೇಮ ಕಹಾನಿ ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ದೀಪಿಕಾ ಮತ್ತು ರಣವೀರ್‌ ಅವರ ಪ್ರೀತಿ ಶುರುವಾಗಿದ್ದು ಒಂದು ಮುತ್ತಿನಿಂದ ಎಂದರೆ ನೀವು ಆಶ್ಚರ್ಯ ಪಡಬಹುದು. 

Written by - Chetana Devarmani | Last Updated : Nov 14, 2022, 12:04 PM IST
  • ಬಾಲಿವುಡ್‌ ಕ್ಯೂಟ್‌ ಕಪಲ್‌ಗಳಲ್ಲಿ ದೀಪಿಕಾ ಮತ್ತು ರಣವೀರ್‌ ಜೋಡಿ ಕೂಡ ಒಂದು
  • ದೀಪಿಕಾ ಮತ್ತು ರಣವೀರ್‌ ಅವರ ಪ್ರೀತಿ ಶುರುವಾಗಿದ್ದು ಒಂದು ಮುತ್ತಿನಿಂದ
  • ನಾಲ್ಕು ವರ್ಷಗಳ ಪ್ರೀತಿಯ ಬಳಿಕ 2018ರಲ್ಲಿ ವಿವಾಹವಾದರು
Deepika - Ranveer love story: ಒಂದು ಕಿಸ್‌ನಿಂದ ಶುರುವಾಗಿದ್ದಂತೆ ದೀಪಿಕಾ - ರಣವೀರ್‌ ಪ್ರೇಮ ಕಹಾನಿ title=
ದೀಪಿಕಾ ಮತ್ತು ರಣವೀರ್‌

Deepika - Ranveer love story: ಬಾಲಿವುಡ್‌ ಕ್ಯೂಟ್‌ ಕಪಲ್‌ಗಳಲ್ಲಿ ದೀಪಿಕಾ ಮತ್ತು ರಣವೀರ್‌ ಜೋಡಿ ಕೂಡ ಒಂದು. ತಮ್ಮ ಪತ್ನಿ ದೀಪಿಕಾ ಅವರನ್ನ ತುಂಬಾ ಪ್ರೀತಿಸುವ ರಣವೀರ್‌, ಅನೇಕ ಕಾರ್ಯಕ್ರಮಗಳಲ್ಲಿ ಅದನ್ನು ಎಲ್ಲರ ಮುಂದೆಯೇ ಹೇಳಿದ್ದಾರೆ. ಸದಾ ಒಬ್ಬರನ್ನೊಬ್ಬರು ಬೆಂಬಲಿಸುತ್ತ ವೃತ್ತಿಜೀವನಕ್ಕೆ ಸಾಥ್‌ ನೀಡುತ್ತ ಸಾಗುತ್ತಿರುವ ಇವರ ಪ್ರೇಮ ಕಹಾನಿ ತಿಳಿಯಲು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ದೀಪಿಕಾ ಮತ್ತು ರಣವೀರ್‌ ಅವರ ಪ್ರೀತಿ ಶುರುವಾಗಿದ್ದು ಒಂದು ಮುತ್ತಿನಿಂದ ಎಂದರೆ ನೀವು ಆಶ್ಚರ್ಯ ಪಡಬಹುದು. 

2013 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ 'ರಾಮ್ ಲೀಲಾ' ಚಿತ್ರದಲ್ಲಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಇಲ್ಲಿದಂಲೇ ಈ ಸುಂದರ ಜೋಡಿಯ ಪ್ರೇಮಕಥೆ ಶುರುವಾಗಿದ್ದು. ಚಿತ್ರದ ಶೂಟಿಂಗ್‌ಗಾಗಿ ಸಂಜಯ್ ಲೀಲಾ ಬನ್ಸಾಲಿ ಮನೆಯಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಒಂದು ದಿನ ಇಬ್ಬರೂ ಸಂಜಯ್ ಲೀಲಾ ಅವರ ಮನೆಯಲ್ಲಿ ಊಟ ಮಾಡುತ್ತಿದ್ದರು. ಊಟದ ಸಮಯದಲ್ಲಿ ದೀಪಿಕಾಳ ಹಲ್ಲುಗಳಲ್ಲಿ ಏನೋ ಸಿಕ್ಕಿಹಾಕಿಕೊಂಡಿತು. ಅದಕ್ಕೇ ರಣವೀರ್ ಅವಳಿಗೆ 'ದೀಪಿಕಾ ನಿನ್ನ ಹಲ್ಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಿದೆ' ಎಂದು ಹೇಳಿದ್ದರು. ಇದಾದ ನಂತರ ದೀಪಿಕಾ ತುಂಬಾ ಪ್ರೀತಿಯಿಂದ ರಣವೀರ್ ಅವರಿಗೆ 'ನೀವೇ ಹೊರಗೆ ತೆಗೆಯಿರಿ' ಎಂದಿದ್ದರಂತೆ. ಇಲ್ಲಿಂದ ಇಬ್ಬರ ನಡುವೆ ಒಂದು ಬಾಂಧವ್ಯ ಬೆಳೆಯಲು ಶುರುವಾಯಿತು. 

ಇದನ್ನೂ ಓದಿ : ರಾಗಿಣಿ ದ್ವಿವೇದಿಯ ‘ಬಿಂಗೊ’ ಸಿನಿಮಾಗೆ ಸಚಿವ ವಿ.ಸೋಮಣ್ಣ ಕ್ಲಾಪ್‌

ಸಂದರ್ಶನವೊಂದರಲ್ಲಿ ಚಿತ್ರದ ತಂಡದ ಸದಸ್ಯರು ಹೇಳುವ ಪ್ರಕಾರ, '2012 ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ರಾಮ್‌ ಲೀಲಾ ಚಿತ್ರದ ಸೆಟ್‌ನಲ್ಲಿ ಅಂಗ್ ಲಗಾ ದೇ ಹಾಡನ್ನು ಚಿತ್ರೀಕರಿಸಬೇಕಿತ್ತು. ಹಾಡಿನ ಕೊನೆಯಲ್ಲಿ ಚುಂಬನದ ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು. ಆಗ ದೀಪಿಕಾ ಮತ್ತು ರಣವೀರ್‌ ಈ ಸೀನ್‌ನಲ್ಲಿ ಎಷ್ಟು ಮುಳುಗಿ ಹೋಗಿದ್ದರೆಂದರೆ ಶೂಟಿಂಗ್ ವೇಳೆ ನಿರ್ದೇಶಕರು ಕಟ್ ಹೇಳಿದರೂ ಇಬ್ಬರೂ ಒಬ್ಬರಿಗೊಬ್ಬರು ಕಿಸ್ ಮಾಡಿಕೊಳ್ಳುತ್ತಲೇ ಇದ್ದರಂತೆ. ಅಂದು ರಾತ್ರಿ 50 ಜನ ಸೆಟ್ ನಲ್ಲಿ ಇದ್ದರು. ಇದನ್ನು ನೋಡಿ ಎಲ್ಲರೂ ಬೆಚ್ಚಿಬಿದ್ದರು, ಈ ಕಿಸ್ ನಂತರವೇ ಇಬ್ಬರ ನಡುವೆ ಒಂದು ಸುಂದರ ಪ್ರೇಮವಿದೆ ಎಂದು ತಿಳಿಯಿತಂತೆ. 

ಆ ಬಳಿಕ ಈ ಪ್ರೇಮ ಕುಡಿಯೊಡೆದು ಇಬ್ಬರೂ ಮದುವೆಯಾದರು. ನಾಲ್ಕು ವರ್ಷಗಳ ಪ್ರೀತಿಯ ಬಳಿಕ ರಣವೀರ್ ಸಿಂಗ್  ಮತ್ತು ದೀಪಿಕಾ ಪಡುಕೋಣೆ 2018ರಲ್ಲಿ ವಿವಾಹವಾದರು. ಇದೀಗ ಭಾರತದ ಅತ್ಯಂತ ಪ್ರಸಿದ್ಧ ಪವರ್ ಜೋಡಿಗಳಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಒಬ್ಬರಾಗಿದ್ದಾರೆ. ಇತ್ತೀಚೆಗಷ್ಟೇ ದೀಪಿಕಾ - ರಣವೀರ್‌ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಇಬ್ಬರೂ ಬೇರೆಯಾಗಲಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು. ಆದರೆ ಎಲ್ಲ ರೂಮರ್‌ಗಳಿಗೆ ಸಾಮಾಜಿಕ ಮಾಧ್ಯಮದ ಪೋಸ್ಟ್  ಮೂಲಕ ಫುಲ್‌ಸ್ಟಾಪ್‌ ಹಾಕಿದರು. 

ಇದನ್ನೂ ಓದಿ :  ವಿದೇಶದಲ್ಲಿ ಜನಿಸಿ ಭಾರತೀಯ ಸಿನಿರಂಗದಲ್ಲಿ ಮಿಂಚುತ್ತಿರುವ ನಟಿಯರು ಇವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News