Samantha And Naga Chaitanya : ಟಾಲಿವುಡ್ ಬೆಡಗಿ ಸಮಂತಾ ರುತ್ ಪ್ರಭು ಅವರ ಇತ್ತೀಚಿನ ಚಿತ್ರ ಯಶೋದಾ ಅಭಿಮಾನಿಗಳು ಮತ್ತು ವಿಮರ್ಶಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ. ಇದರ ಮಧ್ಯೆ, ಮಾಜಿ ಪತಿ ನಾಗ ಚೈತನ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಸೇರಿ ದೊಡ್ಡ ಪ್ರಾಜೆಕ್ಟ್ ಒಂದನ್ನು ಮಾಡಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಬಾಲಿವುಡ್ ಲೈಫ್ ಪ್ರಕಾರ, ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡಬಹುದು ಎಂದು ಮೂಲವೊಂದು ತಿಳಿಸಿದೆಯಂತೆ.
ಇದನ್ನೂ ಓದಿ : ಜಿಲೇಬಿ ತಂದುಕೊಟ್ಟಿದ್ದಕ್ಕೆ ಥ್ಯಾಂಕ್ಸ್ - ಸಮಂತಾ ಭಾವುಕ ಪೋಸ್ಟ್
ವಿಚ್ಛೇದನದ ನಂತರ ಇಬ್ಬರೂ ಸ್ಟಾರ್‌ಗಳು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕೆಲವು ದಿನಗಳ ಹಿಂದೆ ನಟಿ ಸಮಂತಾ ಮೈಯೋಸೈಟಿಸ್ ಕಾಯಿಲೆಗೆ ತುತ್ತಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ವಿಚ್ಛೇದನದ ನಂತರವೂ ಫ್ಯಾನ್ಸ್ ಇವರಿಬ್ಬರೂ ಒಂದಾಗುವ ಕ್ಷಣಕ್ಕಾಗಿ ಈಗಲೂ ಹಾತೊರೆಯುತ್ತಿದ್ದಾರೆ. ಸ್ಕ್ರೀನ್ ಮೇಲೆ ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು.
ಸಮಂತಾ ರುತ್ ಪ್ರಭು ಅವರು ಇತ್ತೀಚೆಗೆ ಮೈಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಸುದೀರ್ಘ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಅನಾರೋಗ್ಯವನ್ನು ಗುಣವಾಗಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಟ ಹಂಚಿಕೊಂಡಿದ್ದಾರೆ. ಮಾಜಿ ಪತಿ ನಾಗ ಚೈತನ್ಯ ಮತ್ತು ಅವರ ತಂದೆ ನಾಗಾರ್ಜುನ್ ಅವರು ಸಮಂತಾ ಅವರ ಆರೋಗ್ಯದ ಬಗ್ಗೆ ತಿಳಿದ ನಂತರ ಅವರನ್ನು ಭೇಟಿ ಮಾಡಲು ಯೋಜಿಸಿದ್ದರು ಎಂಬ ವದಂತಿಗಳು ಸಹ ಹರಿದಾಡುತ್ತಿವೆ. ಇದರ ಮಧ್ಯೆ ನಾಗ ಚೈತನ್ಯ ಅವರು ಸಮಂತಾ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು ಎಂದು ವರದಿಯಾಗಿತ್ತು.
ಇದನ್ನೂ ಓದಿ : Raveena Tandon : 48 ನೇ ವಯಸ್ಸಿನಲ್ಲೂ ಕೊಂಚವೂ ಕಡಿಮೆಯಾಗಿಲ್ಲ ರವೀನಾ ಟಂಡನ್ ಬ್ಯೂಟಿ!
ಇದೀಗ ಸಮಂತಾ ಮತ್ತು ನಾಗ ಚೈತನ್ಯ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಒಟ್ಟಿಗೆ ಪ್ರಾಜೆಕ್ಟ್ ಒಂದಕ್ಕೆ ಸಹಿ ಕೂಡ ಹಾಕಿದ್ದರೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ವಿವರ ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಯಾರೂ ಸ್ಪಷ್ಟನೆ ಸಹ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.