ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುಬೇಡಿಕೆ ನಟಿ ಅದಿತಿ ಪ್ರಭುದೇವ(Aditi Prabhudeva) ಅವರು ಗುಟ್ಟಾಗಿ ಎಂಗೇಜ್​ಮೆಂಟ್​ ಮಾಡಿಕೊಂಡ್ರಾ..? ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅದಿತಿ ಈ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ಹೌದು, ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಅದಿತಿ ಪ್ರಭುದೇವ ಅವರು ತಮ್ಮ ಮದುವೆ ಕುರಿತು ಈ ಹಿಂದೆ ಅನೇಕ ಬಾರಿ ಮಾತನಾಡಿದ್ದರು. ಈಗ ಅದಕ್ಕೆ ಪುಷ್ಠಿ ನೀಡುವಂತೆ ಅವರು ಫೋಟೋವೊಂದನ್ನು ಶೇರ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ತನ್ನ ಪತಿಯಾಗುವ ಹುಡುಗ ತುಂಬಾ ಸರಳವಾಗಿರಬೇಕು, ಕನಿಷ್ಠ 40 ಸಾವಿರ ರೂ. ಆದರೂ ದುಡಿಯಬೇಕು. ನೋಡಲು ಸ್ವಲ್ಪ ಚೆನ್ನಾಗಿದ್ದರೆ ಸಾಕು ಅಂತಾ ನಟಿ ಅದಿತಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇಯಾದ ಹವಾ ಸೃಷ್ಟಿಸಿರುವ ಅದಿತಿ ಕಡಿಮೆ ಸಮಯದಲ್ಲಿಯೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಕ್ರಿಯವಾಗಿರುವ ಅವರು ಅಭಿಮಾನಿಗಳ ಜೊತೆಗೆ ಆಗಾಗ ಲೈವ್ ಬಂದು ಮಾತನಾಡುತ್ತಿರುತ್ತಾರೆ.


ಇದನ್ನೂ ಓದಿ: 56ನೇ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಹೊಂದಿರುವ ಸಲ್ಮಾನ್ ಖಾನ್.. ಇದೇ ಅವರ Fitness secret.!


ಇದೀಗ ಯುವಕರ ಹಾರ್ಟ್ ಬ್ರೇಕ್ ಆಗುವ ರೀತಿಯಲ್ಲಿ ನಟಿ ಅದಿತಿ ಪ್ರಭುದೇವ ಇನ್​ಸ್ಟಾಗ್ರಾಮ್​ ಪೋಸ್ಟ್(Instagram Post) ಮಾಡಿದ್ದಾರೆ. ಕಿರುತೆರೆಯಿಂದ ಬಣ್ಣದ ಲೋಕಕ್ಕೆ ಎಂಟ್ರಿಯಾದ ಈ ಸುಂದರಿ ಈಗ ಹಿರಿತೆರೆಯಲ್ಲಿ ಮಿಂಚುತ್ತಿದ್ದಾರೆ. ಅದಿತಿ ಸೈಲೆಂಟ್​ ಆಗಿ ಎಂಗೇಜ್​ಮೆಂಟ್(Aditi Prabhudeva Engagement)​ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗುತ್ತಿದೆ. ಇದಕ್ಕೆ ನಿದರ್ಶನವೆಂಬಂತೆ ಅವರು ಹುಡಗನೊಬ್ಬನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ‘ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಕ್ಯಾಪ್ಶನ್  ನೀಡಿದ್ದಾರೆ. ಉಂಗುರವನ್ನು ಹೈಲೈಟ್​ ಆಗಿ ತೋರಿಸಿರುವ ಈ ಫೋಟೋ ಸದ್ಯ ಸಖತ್ ವೈರಲ್ ಆಗುತ್ತಿದೆ.


HD Kumaraswamy: ನಿಖಿಲ್ ನಿನಗೆ ರಾಜಕೀಯ ಬೇಡ ಎಂದ ಎಚ್.ಡಿ.ಕುಮಾರಸ್ವಾಮಿ


ಮೂಲಗಳ ಪ್ರಕಾರ ಅದಿತಿ ಅವರು ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ(Engagement) ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನವಿತ್ತು. ದಾವಣಗೆರೆ ಮೂಲದ ಉದ್ಯಮಿಯ ಜೊತೆಗೆ ನಟಿ ಅದಿತಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಎಂಗೇಜ್​ಮೆಂಟ್​ ಆಗಿರುವ ಬಗ್ಗೆ ಅದಿತಿ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದಕ್ಕೆ ಸ್ವತಃ ಅವರೇ ಉತ್ತರಿಸಬೇಕಾಗಿದೆ.  ​


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.