ಬೆಂಗಳೂರು: ಸ್ಯಾಂಡಲ್ ವುಡ್ ಮಾದಕ ಲೋಕದಲ್ಲಿ ಮತ್ತೊಂದು ಟ್ವೀಸ್ಟ್ ದೊರೆತಿದೆ. ಭಾರೀ ಸದ್ದು ಮಾಡಿದ್ದ ಕನ್ನಡ ಚಿತ್ರರಂಗದ ಡ್ರಗ್ಸ್ ಮಾಫಿಯಾ (Sandal Wood Drugs Mafia)ಕ್ಕೆ ಸಂಬಂಧಿಸಿದಂತೆ ಖ್ಯಾತ ನಟಿ, ನಿರೂಪಕಿ ಅನುಶ್ರೀ (Anchor Anusree)ಯವರನ್ನು ಮಂಗಳೂರಿನಲ್ಲಿ ವಿಚಾರಣೆ ನಡೆಸಲಾಗಿತ್ತು. ಡ್ರಗ್ಸ್ ಮಾಫಿಯಾ (Drugs Mafia)ದ ತನಿಖೆ ನಡೆಸುತ್ತಿದ್ದ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಪೊಲೀಸರು ಅನುಶ್ರೀ ಅವರನ್ನು ಮಂಗಳೂರಿನಲ್ಲಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ ತಾವು ಯಾವುದೇ ರೀತಿಯ ಡ್ರಗ್ಸ್ ಸೇವಿಲ್ಲ, ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲವೆಂದು ನಟಿ ಸ್ಪಷ್ಟನೆ ನೀಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡ್ರಗ್ಸ್ ಧಂಧೆ: ಪ್ರಶಾಂತ್ ಸಂಬರಗಿ ವಿರುದ್ದ ದೂರು ದಾಖಲಿಸಿದ ಜಮೀರ್ ಅಹಮದ್


ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ(CCB Police) ಜಾರ್ಜ್ ಶೀಟ್ ನಲ್ಲಿ ಬೆಚ್ಚಿಬೀಳಿಸುವ ಮಾಹಿತಿಗಳಿವ ಎಂದು ಹೇಳಲಾಗುತ್ತಿದೆ. ಪ್ರಕರಣದ A2 ಆರೋಪಿಯಾಗಿರುವ ಕಿಶೋರ್​ ಅಮನ್​ ಶೆಟ್ಟಿ(Kishore Aman Shetty) ಹೇಳಿಕೆಯನ್ನು ಅದರಲ್ಲಿ ಉಲ್ಲೇಖಿಸಲಾಗಿದೆಯಂತೆ. ಹೀಗಾಗಿ ‘ಅಮಲಿನ ಸುಳಿ’ಯಲ್ಲಿ ನಟಿ ಅನುಶ್ರೀ ಸಿಲುಕಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಅನುಶ್ರೀ ವಿರುದ್ಧ ಕಿಶೋರ್ ಶೆಟ್ಟಿ ಸ್ಫೋಟಕ ಆರೋಪ ಮಾಡಿದ್ದಾರಂತೆ. ನಮ್ಮ ಜೊತೆ ಅನುಶ್ರೀ ಡ್ರಗ್ಸ್ ಸೇವನೆ ಮಾಡುತ್ತಿದ್ದರು, ಡ್ರಗ್ಸ್ ಸೇವನೆ ಮಾತ್ರವಲ್ಲ ಅದನ್ನು ಸಾಗಾಟ ಕೂಡ ಮಾಡುತ್ತಿದ್ದರು ಅಂತಾ ಕಿಶೋರ್ ಶೆಟ್ಟಿ ಆರೋಪ ಮಾಡಿದ್ದಾರಂತೆ. ಹೀಗಾಗಿ ನಟಿ ಅನುಶ್ರೀಗೆ ಸಂಕಷ್ಟ ಎದುರಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.


ಕಿಶೋರ್ ಶೆಟ್ಟಿ ಆರೋಪಗಳೇನು..?


ನಟಿ ಅನುಶ್ರೀ(Anchor Anushree)ಗೆ ಡ್ರಗ್ಸ್ ಪೆಡ್ಲರ್ಸ್ ಚೆನ್ನಾಗಿ ಪರಿಚಯವಿದ್ದಾರೆ, ಅವರಿಗೆ ಡ್ರಗ್ಸ್ ತುಂಬಾ ಸುಲಭವಾಗಿ ಸಿಗುತ್ತಿತ್ತು. ಡ್ರಗ್ಸ್ ಎಲ್ಲಿ ಸಿಗುತ್ತದೆ, ಯಾರು ಅದನ್ನು ಪೂರೈಸುತ್ತಾರಂಬುದು ಕೂಡ ಅನುಶ್ರಿಗೆ ಗೊತ್ತಿತ್ತು. ನಮಗೆ Ecstasy ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು. ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಸುಸ್ತಾಗಲ್ಲವೆಂದು ಅನುಶ್ರೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ಕಿಶೋರ್ ಶೆಟ್ಟಿ ಆರೋಪ ಮಾಡಿದ್ದಾರಂತೆ.


ಇದನ್ನೂ ಓದಿ: ರಾಗಿಣಿ ದ್ವಿವೇದಿ 'ಡ್ರಗ್ಸ್ ಹುಡುಗಿ' ಅಂತಾ ಗೊತ್ತಿರಲಿಲ್ಲ: ರಮೇಶ್ ಜಾರಕಿಹೊಳಿ‌


ರಾಜ್ಯದ ಇತಿಹಾಸದಲ್ಲೇ ಇದು ದೊಡ್ಡ ಸ್ಕ್ಯಾಂಡಲ್


ನಮ್ಮ ರಾಜ್ಯದ ಇತಿಹಾಸದಲ್ಲಿಯೇ ಇದು ದೊಡ್ಡ ಸ್ಕ್ಯಾಂಡಲ್ ಅಂತಾ ಬೆಂಗಳೂರಿನಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್(Indrajit Lankesh) ಹೇಳಿದ್ದಾರೆ. ಕರ್ನಾಟಕದ ಡ್ರಗ್ಸ್ ಜಾಲದ ಬಗ್ಗೆ ಮಾತಾಡಿದ್ದೆ. ಹಲವರು ನನ್ನ ಬೆನ್ನು ತಟ್ಟಿದ್ರು, ಟೀಕೆ ಕೂಡ ಮಾಡಿದ್ರು. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್ ಬೆಂಗಳೂರಿಗೆ ಬರುತ್ತಿದೆ. ಡ್ರಗ್ಸ್‌ ಗೆ ಅಷ್ಟು ಬೇಡಿಕೆ ಇರುವುದರಿಂದಲೇ ಬರುತ್ತಿದೆ ಅಂತಾ ಅವರು ಆರೋಪಿಸಿದ್ದಾರೆ.


ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ


ಡ್ರಗ್ಸ್ ಕೇಸ್‌ ಚಾರ್ಜ್‌ಶೀಟ್‌(Drug Case Chargesheet)ನಲ್ಲಿ ಆರೋಪಿ ಕಿಶೋರ್ ಶೆಟ್ಟಿ ನಟಿ ಅನುಶ್ರೀ ಹೆಸರು ಬಾಯಿಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಮಾದಕ ವಸ್ತು ಪ್ರಕರಣದಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ ಅಂತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. FSL ರಿಪೋರ್ಟ್ ಬಂದಿದ್ದು ಗೊತ್ತಿದೆ. ಕಾನೂನು ಅದರ ದಾರಿಯನ್ನು ಕಂಡುಕೊಳ್ಳುತ್ತಿದೆ ಅಂತಾ ಗೃಹ ಸಚಿವರು ತಿಳಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.