ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ

ಡ್ರಗ್ಸ್ ಮಾಫಿಯಾದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡಿರುವುದಕ್ಕೆ ಹಾಗೂ ವಿಚಾರಣೆಗೆ ಹಾಜರಾಗುತ್ತಿರುವ ಬಗ್ಗೆ 'ವಿಚಾರಣೆಗೆ ಹಾಜರಾಗುತ್ತಿದ್ದೇನೆ, ಹಾಗಂತ ನಾನು ಅಪರಾಧಿ ಏನಲ್ಲ. ನನಗೆ ತಿಳಿದಿರುವ ಮಾಹಿತಿಯನ್ನು ತನಿಖೆ ನಡೆಸುತ್ತಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ (CCB)  ಅಧಿಕಾರಿಗಳಿಗೆ ನೀಡುತ್ತೇನೆ' ಎಂದು ಎಂದು‌ ಅನುಶ್ರೀ ಪ್ರತಿಕ್ರಿಯಿಸಿದ್ದಾರೆ.

Last Updated : Sep 25, 2020, 08:37 AM IST
  • ಬೆಂಗಳೂರಿನಲ್ಲಿ ವಾಸ ಇರುವ ಅನುಶ್ರೀ ನಿನ್ನೆ ತಡರಾತ್ರಿಯೇ ವಿಚಾರಣೆಗೆ ಹಾಜರಾಗಲು ಮಂಗಳೂರಿಗೆ ತೆರಳಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
  • ಅನುಶ್ರೀ ಮಂಗಳೂರಿಗೆ ಹೊರಡುತ್ತಿದ್ದಂತೆ ಯಶವಂತಪುರದಲ್ಲಿರುವ ಅವರ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣ
  • ಅನುಶ್ರೀ ಕೆರಿಯರ್ ಗೆ ಧಕ್ಕೆ ತಂದುಬಿಡಬಹುದೇನೋ‌ ಎಂಬ ಆತಂಕದಲ್ಲಿ ಅನುಶ್ರೀ ತಾಯಿ ಹಾಗೂ ಸಹೋದರ
ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿನಲ್ಲಿ ನಿರೂಪಕಿ ಅನುಶ್ರೀ ವಿಚಾರಣೆ title=
Pic Courtesy: Facebook@Anchor Anushree

ಬೆಂಗಳೂರು: ಇತ್ತೀಚೆಗೆ ಭಾರೀ ಸದ್ದು ಮಾಡಿರುವ ಕನ್ನಡ ಚಿತ್ರರಂಗದ ಡ್ರಗ್ಸ್ ಮಾಫಿಯಾ (Sandal Wood Drugs Mafia)ಕ್ಕೆ ಸಂಬಂಧಿಸಿದಂತೆ ಇಂದು ನಟಿ, ನಿರೂಪಕಿ ಅನುಶ್ರೀ (Anchor Anusree) ವಿಚಾರಣೆ ಇಂದು ಮಂಗಳೂರಿನಲ್ಲಿ ನಡೆಯಲಿದೆ.

ಡ್ರಗ್ಸ್ ಮಾಫಿಯಾ (Drugs Mafia)ದ ತನಿಖೆ ನಡೆಸುತ್ತಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ಪೊಲೀಸರು ನಿನ್ನೆ ಅನುಶ್ರೀಗೆ ಇಂದು ಮಂಗಳೂರಿನಲ್ಲಿ ವಿಚಾರಣೆಗೆ ಬರುವಂತೆ ನೊಟೀಸ್ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುತ್ತಿರುವುದನ್ನು ಖಚಿತಪಿಸಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಹಿನ್ನಲೆಯಲ್ಲಿ 15 ನಟ-ನಟಿಯರಿಗೆ ಸಿಸಿಬಿ ನೊಟೀಸ್

ಡ್ರಗ್ಸ್ ಮಾಫಿಯಾದಲ್ಲಿ ತಮ್ಮ ಹೆಸರು ತಳುಕು ಹಾಕಿಕೊಂಡಿರುವುದಕ್ಕೆ ಹಾಗೂ ವಿಚಾರಣೆಗೆ ಹಾಜರಾಗುತ್ತಿರುವ ಬಗ್ಗೆ 'ವಿಚಾರಣೆಗೆ ಹಾಜರಾಗುತ್ತಿದ್ದೇನೆ, ಹಾಗಂತ ನಾನು ಅಪರಾಧಿ ಏನಲ್ಲ. ನನಗೆ ತಿಳಿದಿರುವ ಮಾಹಿತಿಯನ್ನು ತನಿಖೆ ನಡೆಸುತ್ತಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ (CCB)  ಅಧಿಕಾರಿಗಳಿಗೆ ನೀಡುತ್ತೇನೆ' ಎಂದು ಎಂದು‌ ಅನುಶ್ರೀ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸ ಇರುವ ಅನುಶ್ರೀ ನಿನ್ನೆ ತಡರಾತ್ರಿಯೇ ವಿಚಾರಣೆಗೆ ಹಾಜರಾಗಲು ಮಂಗಳೂರಿಗೆ (Mangalore) ತೆರಳಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಅನುಶ್ರೀ (Anusree) ಮಂಗಳೂರಿಗೆ ಹೊರಡುತ್ತಿದ್ದಂತೆ ಯಶವಂತಪುರದಲ್ಲಿರುವ ಅವರ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನುಶ್ರೀ ತಾಯಿ ಹಾಗೂ ಸಹೋದರ ಪ್ರಕರಣ ಮತ್ಯಾವ ತಿರುವು ಪಡೆದುಕೊಳ್ಳುವುದೋ, ಅನುಶ್ರೀ ಕೆರಿಯರ್ ಗೆ ಧಕ್ಕೆ ತಂದುಬಿಡಬಹುದೇನೋ‌ ಎಂಬ ಆತಂಕದಲ್ಲಿದ್ದಾರೆ.

ಡ್ರಗ್ಸ್ ದಂಧೆ ವಿಚಾರಣೆ ನಡುವೆಯೂ ಶೂಟಿಂಗ್ ಗೆ ರೆಡಿಯಾದ ದಿಗಂತ್

Trending News