`ಕಾಂತಾರ` ಲೀಲಾಗೆ ನಾನು ಪೊಲೀಸ್ ಆಫೀಸರ್ ಮಗಳು ಅನ್ನೋ ಗರ್ವ ಸ್ವಲ್ಪವೂ ಇಲ್ಲ....!
ಸಪ್ತಮಿ ಗೌಡ ಅಂದ್ರೆ ತಕ್ಷಣ ನೆನಪಾಗೋದು ಮೂಗು ಬೊಟ್ಟು ಮತ್ತು ಸಿಂಗಾರ ಸಿರಿಯೇ ಹಾಡು.ಈ ಹಾಡನ್ನ ಎಷ್ಟು ಕೇಳಿದರೂ ನೋಡಿದರೂ ಮತ್ತೇ ಮತ್ತೇ ನೋಡೋ ಆಸೆ,ಕೇಳೋ ಆಸೆ ಎಲ್ಲರಿಗೂ ಇದೆ.
ಸಪ್ತಮಿ ಗೌಡ ಅಂದ್ರೆ ತಕ್ಷಣ ನೆನಪಾಗೋದು ಮೂಗು ಬೊಟ್ಟು ಮತ್ತು ಸಿಂಗಾರ ಸಿರಿಯೇ ಹಾಡು.ಈ ಹಾಡನ್ನ ಎಷ್ಟು ಕೇಳಿದರೂ ನೋಡಿದರೂ ಮತ್ತೇ ಮತ್ತೇ ನೋಡೋ ಆಸೆ,ಕೇಳೋ ಆಸೆ ಎಲ್ಲರಿಗೂ ಇದೆ.ಹಾಗೆಯೇ ಸಪ್ತಮಿ ಗೌಡ ಕಾಂತಾರ ಸಿನಿಮಾದಲ್ಲಿ ಲೀಲಾ ಅನ್ನೋ ಪಾತ್ರ ಮಾಡೋ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.ಇದೀಗ ಬಹುಬೇಡಿಕೆಯ ನಟಿ ಆಗಿದ್ದಾರೆ.
ಬ್ಯಾಕ್ ಟು ಬ್ಯಾಕ್ ಬೇಜಾನ್ ಆಫರ್ ಗಳು ಇವರಿಗೆ ಬರುತ್ತಲೇ ಇವೆ.ಆದ್ರೆ ಸಪ್ತಮಿ ಗೌಡ ನೇರವಾಗಿ ತಮ್ಮ ಫ್ಯಾನ್ಸ್ ಜೊತೆ ಕಾಂಟೆಕ್ಟ್ ನಲ್ಲಿ ಇರುತ್ತಾರೆ.ಅಂದ್ರೆ ತಮ್ಮ ವರ್ಕೌಟ್ ವಿಡಿಯೋ ಆಗಿರ್ಬೋದು ಯಾವುದೇ ಇದ್ದರೂ ಅದನ್ನ ಸೋಶಿಯಲ್ ಮೀಡಿಯಾಗಳಲ್ಲಿ ಹಾಕೋ ಮೂಲಕ ಅಭಿಮಾನಿಗಳ ರೆಸ್ಪಾನ್ಸ್ ಹೇಗಿರುತ್ತೆ,ಪ್ರೀತಿ ಹೇಗೆ ಕೊಡ್ತಾರೆ ಅನ್ನೋದನ್ನ ನೋಡುತ್ತಲೇ ಇರುತ್ತಾರೆ.ಇದು ಎಲ್ಲರಿಗೂ ಖುಷಿ ಕೊಟ್ಟಿದೆ.ಅಷ್ಟೇ ಅಲ್ಲ ತಾವು ಒಬ್ಬ ಪೊಲೀಸ್ ಆಫೀಸರ್ ಮಗಳು ಅನ್ನೋ ಗರ್ವ ಇವರಿಗೆ ಸ್ವಲ್ಪವೂ ಇಲ್ಲ ಅನ್ನೋದನ್ನ ಇವರನ್ನ ಹತ್ತಿರದಿಂದ ಬಲ್ಲವರು ಹೇಳಿಕೊಳ್ಳುತ್ತಾರೆ.
ಇದನ್ನೂ ಓದಿ-ಪ್ರೀತಿಸಿ ಮದುವೆಯಾದ ಸ್ಯಾಂಡಲ್‌ವುಡ್ ಟಾಪ್ ನಟ-ನಟಿಯರು ಇವರು!
ಸಪ್ತಮಿ ಗೌಡ ಕನ್ನಡ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರೋ ನಟಿ. ಇವರು 2020ರಲ್ಲಿ ತೆರೆಕಂಡ ಧನಂಜಯ್ ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬೆಂಗಳೂರಿನವರಾದ ಸಪ್ತಮಿ ಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಸುಪುತ್ರಿ. ಇತ್ತೀಚಿಗೆ ಮಾಲ್ಡೀವ್ಸ್ನಲ್ಲಿ ಮಾಡ್ರನ್ ಲುಕ್ನಲ್ಲಿ ಸಪ್ತಮಿ ಗೌಡ ಕಂಗೊಳಿಸುತ್ತಿದ್ದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು.ಫೋಟೋ ನೋಡಿದ ನೆಟ್ಟಿಗರು ಲೈಕ್ ಜೊತೆ ಕಾಂತಾರ ಚೆಲುವೆ ಸಖತ್ ಬ್ಯೂಟಿ ಅಂತ ಕಮೆಂಟ್ ಕೂಡ ಮಾಡಿದ್ದರು.
ಇದನ್ನೂ ಓದಿ-Tatsama Tadbhava movie: ‘ತತ್ಸಮ ತದ್ಭವ’ ಚಿತ್ರಕ್ಕೆ ಅರವಿಂದ್ ಅಯ್ಯರ್ ಎಂಟ್ರಿ ಫಿಕ್ಸ್!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.