"ತತ್ಸಮ ತದ್ಭವ" ಚಿತ್ರದ ʼನಿಧಿʼಯಾದ ʼಗಟ್ಟಿಮೇಳʼದ ಮಹತಿ ವೈಷ್ಣವಿ ಭಟ್‌..!

ನಿಮ್ಗೆ ಗೊತ್ತಿರೋ ಹಾಗೇ ʼತತ್ಸಮ ತದ್ಭವʼ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗುತ್ತಿದೆ. ದಿನಕ್ಕೊಬ್ಬರು ಆರ್ಟಿಸ್ಟ್‌ಗಳನ್ನ ಈ ಸಿನಿಮಾದಲ್ಲಿ ಬಳಸಿಕೊಳ್ಳೋ ಬಗ್ಗೆ ಮಾಹಿತಿ ರಿವಿಲ್ ಮಾಡುತ್ತಿದೆ ಚಿತ್ರತಂಡ. ಇದೀಗ "ಗಟ್ಟಿಮೇಳ " ಧಾರಾವಾಹಿ ಹಾಗೂ "ಗುರು ಶಿಷ್ಯರು " ಚಿತ್ರದ ಖ್ಯಾತಿಯ ಮಹತಿ ವೈಷ್ಣವಿ ಭಟ್ "ತತ್ಸಮ ತದ್ಭವ" ಚಿತ್ರದಲ್ಲಿ ನಿಧಿ ಎಂಬ ಬಹು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Written by - Krishna N K | Last Updated : Mar 2, 2023, 03:47 PM IST
  • ʼತತ್ಸಮ ತದ್ಭವʼ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗುತ್ತಿದೆ.
  • ದಿನಕ್ಕೊಬ್ಬರು ಆರ್ಟಿಸ್ಟ್‌ಗಳನ್ನ ಈ ಸಿನಿಮಾಗೆ ಎಂಟ್ರೀ ಕೊಡುತ್ತಿದ್ದಾರೆ.
  • ಇದೀಗ ಗಟ್ಟಿಮೇಳ ಖ್ಯಾತಿ ಮಹತಿ ವೈಷ್ಣವಿ ಭಟ್‌ ಈ ಚಿತ್ರತಂಡ ಸೇರಿದ್ದಾರೆ.
"ತತ್ಸಮ ತದ್ಭವ" ಚಿತ್ರದ ʼನಿಧಿʼಯಾದ ʼಗಟ್ಟಿಮೇಳʼದ ಮಹತಿ ವೈಷ್ಣವಿ ಭಟ್‌..! title=

Tatsama Tadbhava movie : ನಿಮ್ಗೆ ಗೊತ್ತಿರೋ ಹಾಗೇ ʼತತ್ಸಮ ತದ್ಭವʼ ಸಿನಿಮಾ ಹಲವು ವಿಶೇಷಗಳಿಗೆ ಕಾರಣವಾಗುತ್ತಿದೆ. ದಿನಕ್ಕೊಬ್ಬರು ಆರ್ಟಿಸ್ಟ್‌ಗಳನ್ನ ಈ ಸಿನಿಮಾದಲ್ಲಿ ಬಳಸಿಕೊಳ್ಳೋ ಬಗ್ಗೆ ಮಾಹಿತಿ ರಿವಿಲ್ ಮಾಡುತ್ತಿದೆ ಚಿತ್ರತಂಡ. ಇದೀಗ "ಗಟ್ಟಿಮೇಳ " ಧಾರಾವಾಹಿ ಹಾಗೂ "ಗುರು ಶಿಷ್ಯರು " ಚಿತ್ರದ ಖ್ಯಾತಿಯ ಮಹತಿ ವೈಷ್ಣವಿ ಭಟ್ "ತತ್ಸಮ ತದ್ಭವ" ಚಿತ್ರದಲ್ಲಿ ನಿಧಿ ಎಂಬ ಬಹು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ಮಹತಿ ಪ್ರತಿ ಹದಿಹರೆಯದವರಿಗೂ ಅನ್ವಯಿಸುವ ಪಾತ್ರ. ಇದು ಮುಗ್ಧತೆ ಮತ್ತು ಭಾವನೆಗಳ ಮಿಶ್ರಣದ ರೋಲ್‌ ಎಂದರೂ ತಪ್ಪಾಗಲಾರದು. ಈ ಪಾತ್ರ ನಿರ್ವಹಿಸಿದ ಸವಾಲು ತುಂಬಾ ಇಷ್ಟವಾಯಿತು. ಅನ್ನೋದನ್ನ ನಟಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮೇಘನರಾಜ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದ, ಚಿತ್ರತಂಡ ಈಗ ಮಹತಿ ವೈಷ್ಣವಿ ಭಟ್ ಅವರ ಪಾತ್ರ ಪರಿಚಯದ ಪೋಸ್ಟರ್ ಬಿಡುಗಡೆ ಮಾಡಿದೆ. ಮೇಘನಾ ಮತ್ತೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮತ್ತು ಅವರು ವಿಶಾಲ್ ಅತ್ರೇಯ ಅವರ ತತ್ಸಮ ತದ್ಭವ ಎಂಬ ತನಿಖಾ ಕ್ರೈಮ್ ಥ್ರಿಲ್ಲರ್‌ ಸಿನಿಮಾವಾಗಿದೆ.

ಇದನ್ನೂ ಓದಿ: Vedha on Zee5 : ಓಟಿಟಿಯಲ್ಲಿ ಹ್ಯಾಟ್ರಿಕ್ ಹೀರೋ 'ವೇದ' ಹೊಸ ರೆಕಾರ್ಡ್.. ಜೀ5 ಗ್ರ್ಯಾಂಡ್ ಸೆಲೆಬ್ರೇಶನ್..!

ಚಿತ್ರೀಕರಣ ಪೂರ್ಣಗೊಂಡ ನಂತರನಿರ್ಮಾಪಕರು ಚಿತ್ರದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಬಹಿರಂಗಪಡಿಸಿದ್ದಾರೆ. ಕುತೂಹಲಕಾರಿಯಾಗಿ, ಶೀರ್ಷಿಕೆ ಪೋಸ್ಟರ್ ಅನ್ನು ನೂರಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಏಕಕಾಲದಲ್ಲಿ ಅನಾವರಣಗೊಳಿಸಿದ್ದಾರೆ. ಅಷ್ಟೇ ಅಲ್ಲ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡಪರ ಸಂಘಟನೆಗಳೂ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿವೆ.

ಹ್ಯಾಪಿ ನ್ಯೂ ಇಯರ್, ಪ್ರೆಂಚ್ ಬಿರಿಯಾನಿ ಸಿನಿಮಾಗಳನ್ನ ನಿರ್ದೇಶನ ಪನ್ನಗಭರಣ ಅವರು 'ತತ್ಸಮ ತದ್ಭವ' ಚಿತ್ರಕ್ಕೆ ಹಣ ಹಾಕಿದ್ದಾರೆ. ಇವರ ಜೊತೆಗೆ ಸ್ಫೂರ್ತಿ ಅನಿಲ್ ಕೂಡ ಹಣ ಹೂಡಿದ್ದಾರೆ. ಈ ಸಿನಿಮಾಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News