ಪ್ರೀತಿಸಿ ಮದುವೆಯಾದ ಸ್ಯಾಂಡಲ್‌ವುಡ್‌ ಟಾಪ್ ನಟ-ನಟಿಯರು ಇವರು!

ಕನ್ನಡ ಸಿನಿರಂಗದಲ್ಲಿ ಸಾಕಷ್ಟು ಜೋಡಿಗಳು ಪ್ರೀತಿಸಿ ಮದುವೆ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೆ ಹಳೇ ಜೋಡಿಗಳ ತರಹವೇ ಹೊಸ ಜೋಡಿಗಳು ಸಹ ಸಿನಿರಂಗದಲ್ಲಿ ಪ್ರೀತಿಸಿ ಮದುವೆಯಾಗಿ ಮಿಂಚುತ್ತೀವೆ. 

Written by - Zee Kannada News Desk | Last Updated : Mar 2, 2023, 04:05 PM IST
  • ಶಂಕರ್ ನಾಗ್ -ಆರುಂಧತಿ
  • ವಸಿಷ್ಠ ಸಿಂಹ-ಹರಿಪ್ರಿಯಾ
  • ವಿಷ್ಣುವರ್ಧನ್- ಭಾರತಿ
ಪ್ರೀತಿಸಿ ಮದುವೆಯಾದ ಸ್ಯಾಂಡಲ್‌ವುಡ್‌ ಟಾಪ್ ನಟ-ನಟಿಯರು ಇವರು! title=

ಶಂಕರ್ ನಾಗ್ -ಆರುಂಧತಿ
ಕನ್ನಡ ಚಿತ್ರಪ್ರೇಮಿಗಳ ಮನಃಪಟಲದಲ್ಲಿ ಅಚ್ಚಳಿಯದ ಮುದ್ರೆಯನ್ನೊತ್ತಿರುವ ಶಂಕರ ನಾಗ್ ಹಾಗೂ ಆರುಂಧತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆಗಿನ್ನೂ ಶಂಕರ್ ನಾಗ್ ಅವರಿಗೆ 19 ವರ್ಷ. 1974ರಲ್ಲಿ ಇವರಿಬ್ಬರು ಭೇಟಿಯಾಗಿದ್ದರು. ಬಳಿಕ ಆರು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 1980ರಲ್ಲಿ ವಿವಾಹವಾದರು.  ಶಂಕರ ನಾಗ್ ಹಾಗೂ ಆರುಂಧತಿ 'ನೋಡಿ ಸ್ವಾಮಿ ನಾವಿರೋದೇ ಹೀಗೆ, ಪರಮೇಶಿ ಪ್ರೇಮ ಪ್ರಸಂಗ, ಆಕ್ಸಿಡೆಂಟ್ ಸಿನಿಮಾಗಲ್ಲಿ ಒಟ್ಟಿಗೆ ನಟಿಸಿದ್ದರು. 

ವಿಷ್ಣುವರ್ಧನ್- ಭಾರತಿ
ಸಾಹಸ ಸಿಂಹ ವಿಷ್ಣುವರ್ಧನ್ ಹಾಗೂ ನಟಿ ಭಾರತಿ ಅವರ ಜೋಡಿ ಕನ್ನಡ ಚಿತ್ರರಂಗದ ಫೇಮಸ್ ಜೋಡಿಗಲ್ಲೊಂದು. ವಿಷ್ಣು ಹಾಗೂ ಭಾರತಿ ಜೋಡಿ 1975ರ ಫೆಬ್ರವರಿ 27ರಂದು ಪ್ರೀತಿಸಿ ಮದುವೆಯಾಗಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ  ತಮ್ಮ ಲವ್ ಸ್ಟೋರಿ ಬಗ್ಗೆ ಭಾರತಿ ವಿಷ್ಣುವರ್ಧನ್ ಹೇಳಿಕೊಂಡಿದ್ದರು. ವಿಷ್ಣುದಾದ ಆಗತಾನೆ ವಂಶವೃಕ್ಷ ಎಂಬ ಸಿನಿಮಾ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಭಾರತಿಯವರೊಂದಿಗೆ ಮಾತನಾಡಬೇಕೆಂಬ ಅಭಿಲಾಷೆ ಹೊಂದಿದ್ದರಂತೆ. ಆದರೆ, ವಿಷ್ಣುದಾದಾ ಬೆಂಗಳೂರಿನಲ್ಲಿ ಹಾಗೂ ಭಾರತಿ ಮದ್ರಾಸ್ ನಲ್ಲಿದ್ದರು. ಹಾಗಾಗಿ ವಿಷ್ಣುವರ್ಧನ್ ಬೆಂಗಳೂರಿನ ಪ್ಯಾಲೇಸ್ ಹೋಟೆಲ್ ಗೆ ಬಂದು ಭಾರತಿಯವರೊಂದಿಗೆ ಮಾತಾನಾಡುತ್ತಿದ್ದರಂತೆ. ಮದುವೆಗೂ ಮುಂಚೆ ಇವರಿಬ್ಬರು ಒಂದೇ ರೂಪ, ಎರಡು ಗುಣ, ದೇವರ ಗುಡಿ ಸಿನಿಮಾದಲ್ಲಿ ನಟಿಸಿದ್ದರು. ವಿವಾಹದ ಬಳಿಕ ರಹಸ್ಯ ರಾತ್ರಿ, ಬಂಗಾರದ ಜಿಂಕೆ, ಮಕ್ಕಳ ಭಾಗ್ಯ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದರು.  

ಅಂಬರೀಶ್ -ಸುಮಲತಾ
ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಕನ್ನಡ ಚಿತ್ರರಂಗದ ಅತ್ಯಂತ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಆಂಧ್ರಪ್ರದೇಶದಲ್ಲಿ ಹುಟ್ಟಿ, ಚನ್ನೈನಲ್ಲಿ ಬೆಳೆದ ಸುಮಲತಾ, 1991ರ ಡಿಸೆಂಬರ್ 8ರಂದು  ಅಂಬರೀಶ್ ಜೊತೆ ಸಪ್ತಪದಿ ತುಳಿದರು. ಸುಮಲತಾ ಹಾಗೂ ಅಂಬಿ 'ಆಹುತಿ' ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಭೇಟಿಯಾಗಿದ್ದರಂತೆ. ಬಳಿಕ ಇವರಿಬ್ಬರ ನಡುವೆ ಉಂಟಾದ ಸ್ನೇಹ ಪ್ರೀತಿಗೆ ತಿರುಗಿತ್ತು.  ಸುಮಲತಾ ಅವರನ್ನು ಮದುವೆಯಾಗುವಾಗ ಅಂಬಿಗೆ 39 ವರ್ಷವಾಗಿತ್ತು. ಈ ಜೋಡಿ 'ಆಹುತಿ, ನವದೆಹಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. 

ಇದನ್ನೂ ಓದಿ-ಸಾಂಗ್ಸ್‌ ಇಲ್ಲದಿದ್ದರೂ ಸೂಪರ್‌ ಹಿಟ್‌ ಆದ ಕನ್ನಡ ಸಿನಿಮಾಗಳು ಇವೆ ನೋಡಿ..! 

ದಿಗಂತ್ ಮಂಚಾಲೆ-ಐಂದ್ರಿತಾ ರೇ
ದಿಗಂತ್ ಮಂಚಾಲೆ ಹಾಗೂ ಐಂದ್ರಿತಾ ರೇ ಕೂಡ 9 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ.  ಮನಸಾರೆ, ಪಾರಿಜಾತ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ ನಡುವೆ ಪ್ರೀತಿ ಮೂಡಿತ್ತು. ಬಳಿಕ 2018ರ ಡಿಸೆಂಬರ್ 12ರಂದು ಮದುವೆಯಾಗಿತ್ತು. 

ವಸಿಷ್ಠ ಸಿಂಹ-ಹರಿಪ್ರಿಯಾ
ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ 2023ರ ಜನವರಿ 26ರಂದು ಮದುವೆಯಾಗಿದ್ದಾರೆ. ಇವರಿಬ್ಬರದ್ದು ಕೂಡ ಲವ್ ಮ್ಯಾರೇಜ್. 2022ರ  ಡಿಸೆಂಬರ್ 3ರಂದು ನಟಿ ಹರಿಪ್ರಿಯಾ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 203ರಲ್ಲಿ ಹಸೆಮಣೆ ಏರಿದೆ. ಇವರಿಬ್ಬರು ಆರು ವರ್ಷಗಳಿಂದ ಪರಿಚಿತರಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. 

ಮೇಘನಾ ರಾಜ್- ಚಿರಂಜೀವಿ ಸರ್ಜಾ
ಆಟಗಾರ ಸಿನಿಮಾದಲ್ಲಿ ನಟಿಸಿದ್ದ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಕೂಡ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ಸ್ನೇಹಿತರಾಗಿದ್ದ ಇವರು, 2018ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರಾದಾಯದಂತೆ ಮದುವೆಯಾಗಿತ್ತು. ದುರಾದೃಷ್ಟವಶಾತ್ 2020ರ ಜೂನ್ 7ರಂದು ಚಿರು ಹೃದಯಾಘಾತದಿಂದ ನಿಧನರಾದರು.

ಡಾರ್ಲಿಂಗ್ ಕೃಷ್ಣ -ಮಿಲನಾ ನಾಗರಾಜ್
ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್  ಕನ್ನಡ ಚಿತ್ರರಂಗದ ಲವ್ ಬರ್ಡ್ಸ್. ಮೊದಲ ಬಾರಿ ನಮ್ ದುನಿಯಾ, ನಮ್ ಸ್ಟೈಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, 7 ವರ್ಷಗಳ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾ ಸೂಪರ್ ಹಿಟ್ ಆಗಿದ್ದು, ಇದೇ ಖುಷಿಯಲ್ಲಿ  2021ರ ಫೆಬ್ರವರಿ 14ರಂದು ಅದ್ದೂರಿಯಾಗಿ ವಿವಾಹವಾದರು. ಈ ಜೋಡಿ ಪ್ರೇಮಿಗಳ ದಿನದಂದೇ ವಿವಾಹವಾಗಿತ್ತು. 

ಇದನ್ನೂ ಓದಿ-Rahul Sipligunj : ಆಸ್ಕರ್‌ ಅಂಗಳದಲ್ಲಿ ʼಸ್ಲಂ ಹುಡುಗʼನ ʼನಾಟು ನಾಟುʼ ಪರ್ಫಾರ್ಮೆನ್ಸ್..! ಸಾಧನೆ ಅಂದ್ರೆ ಇದೇನಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News