ನವದೆಹಲಿ: ಡ್ರಗ್ಸ್ ಪ್ರಕರಣದಲ್ಲಿ ಜೈಲು ಪಾಲಾಗಿರುವ ಪುತ್ರ ಆರ್ಯನ್ ಖಾನ್(Aryan Khan)ಗೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್(Shah Rukh Khan) ಮನಿ ಆರ್ಡರ್ ಮಾಡಿದ್ದಾರೆ. ಹೌದು, ಎನ್‌ಸಿಬಿ(NCB)ಯಿಂದ ಬಂಧಿತನಾಗಿರುವ ಮಗ ಆರ್ಯನ್ ಖಾನ್ ಗೆ ಕ್ಯಾಂಟೀನ್ ಊಟಕ್ಕೆಂದು ಶಾರುಖ್ 4,500 ರೂ. ಮನಿ ಆರ್ಡರ್ ಮಾಡಿದ್ದಾರೆಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಮುಂಬೈನ ಕರಾವಳಿ ತೀರದಲ್ಲಿ ಕ್ರೂಸ್ ಹಡಗೊಂದರಲ್ಲಿ ನಡೆದಿದ್ದ ಡ್ರಗ್ಸ್ ರೇವ್ ಪಾರ್ಟಿ (Drugs Rave Party) ಪ್ರಕರಣಕ್ಕೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳು ಅಕ್ಟೋಬರ್ 2ರಂದು ಆರ್ಯನ್ ಖಾನ್ (Aryan Khan)ನನ್ನು ಬಂಧಿಸಿದ್ದರು. ಮೊದಲು ಎನ್​ಸಿಬಿ ಕಸ್ಟಡಿಯಲ್ಲಿದ್ದ ಆರ್ಯನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದುವರೆಗೂ ಅನೇಕ ಬಾರಿ ಜಾಮೀನು ಅರ್ಜಿ ವಿಚಾರಣೆ‌ ನಡೆದರೂ ಪ್ರಯೋಜನವಾಗಿಲ್ಲ. ಪ್ರತಿ ಬಾರಿಯೂ ಜಾಮೀನು ನಿರಾಕರಿಸಿರುವುದರಿಂದ ಆರ್ಯನ್ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಅಕ್ಟೋಬರ್ 20ರವರೆಗೆ ಜೈಲಿನಲ್ಲಿರುವಂತೆ ಮುಂಬೈನ ವಿಶೇಷ ನ್ಯಾಯಾಲಯವು ಆದೇಶಿಸಿದ್ದು, ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.   


ಇದನ್ನೂ ಓದಿ: ನಾನೊಬ್ಬ ಒಳ್ಳೆಯ ತಂದೆಯಲ್ಲ ಎಂದು Shah Rukh Khan ಬಹಳ ಹಿಂದೆಯೇ ಹೇಳಿದ್ದೇಕೆ ?  


ಆರ್ಯನ್ ಪ್ರಸ್ತುತ ಮುಂಬೈನ ಆರ್ಥರ್ ಜೈಲಿನಲ್ಲಿ(Arthur Road jail)ದ್ದಾರೆ. ವರದಿಗಳ ಪ್ರಕಾರ ಆರ್ಯನ್ ಗೆ ಜೈಲಿನ ಖೈದಿ ನಂಬರ್ 956 ನೀಡಲಾಗಿದೆ. ಜೈಲಿನ ಒಳಗಿನಿಂದಲೇ ವಿಡಿಯೋ ಕಾಲ್ ಮೂಲಕ ತಮ್ಮ ತಂದೆ ಶಾರುಖ್ ಖಾನ್ ಮತ್ತು ತಾಯಿ ಗೌರಿ ಖಾನ್ ಜೊತೆಗೆ ಮಾತನಾಡಿದ್ದಾರೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆಂದು ವರದಿಯಾಗಿದೆ.


ಆರ್ಯನ್ ಮತ್ತು ಇತರ ಇಬ್ಬರ ಜಾಮೀನು ಅರ್ಜಿಯ ಆದೇಶವನ್ನು ಮುಂದೂಡಿರುವುದರಿಂದ ಶಾರುಖ್ ಪುತ್ರನಿಗೆ ಜೈಲೇ ಗತಿಯಾಗಿದೆ. ಕೊರೊನಾ ಮಾರ್ಗಸೂಚಿ ಹಿನ್ನೆಲೆ ಪುತ್ರನ ಭೇಟಿಗೆ ಪೋಷಕರಿಗೆ ಅನುಮತಿ ನೀಡಿಲ್ಲವಂತೆ. ಹೀಗಾಗಿ ವಿಡಿಯೋ ಕಾಲ್(Video Call) ಮೂಲಕ ಆತ ತನ್ನ ಪೋಷಕರ ಜೊತೆ ಮಾತನಾಡಿದ್ದಾನೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ: Shah Rukh Khan Viral Video : ಆರ್ಯನ್ ಖಾನ್ ಜೈಲಿಗೆ ಹೋದ ನಂತರ ಶಾರುಖ್ ಖಾನ್ ಭಾವನಾತ್ಮಕ Video Viral : ಇಲ್ಲಿದೆ ನೋಡಿ ವಿಡಿಯೋ


ಸದ್ಯ ಜೈಲಿನ ಕ್ಯಾಂಟೀನಲ್ಲಿ ತಯಾರಿಸುವ ಆಹಾರವನ್ನೇ ಆರ್ಯನ್ ಗೆ ನೀಡಲಾಗುತ್ತಿದೆ. ಹೊರಗಿನ ಊಟಕ್ಕೆ ಇಲ್ಲಿ ಅನುಮತಿ ಇಲ್ಲ. ಕ್ಯಾಂಟೀನ್ ಶುಲ್ಕ ಪಾವತಿಸುವವರಿಗೆ ಅಗತ್ಯ ಮಾನದಂಡಗಳ ಪ್ರಕಾರ ಗುಣಮಟ್ಟದ ಆಹಾರ ನೀಡಲಾಗುತ್ತದಂತೆ. ಹೀಗಾಗಿ ಜೈಲಿನಲ್ಲಿರುವ ಕ್ಯಾಂಟೀನ್ ಊಟಕ್ಕೆಂದು ಮಗನಿಗೆ ಶಾರುಖ್ ಖಾನ್ 4,500 ರೂ. ಮನಿ ಆರ್ಡರ್(Money Order) ಮಾಡಿದ್ದಾರೆಂದು ತಿಳಿದುಬಂದಿದೆ.     


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ