ನವದೆಹಲಿ : ಸೂಪರ್ಸ್ಟಾರ್ ಶಾರುಖ್ ಖಾನ್ (Sharukh Khan) ತನ್ನ ಮಕ್ಕಳಾದ ಆರ್ಯನ್ ಖಾನ್, ಅಬ್ರಾಮ್ ಖಾನ್ ಮತ್ತು ಸುಹಾನಾ ಬಗ್ಗೆ ಅನೇಕ ಪ್ರಸಂಗಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕಿರಿಯ ಪುತ್ರ ಅಬ್ರಾಮ್ ಬಗ್ಗೆ ಪ್ರಸ್ತಾಪಿಸಿದ ಶಾರುಖ್ , ಮಕ್ಕಳ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡುವ ಅನೇಕ ಪ್ರಶ್ನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಒಂದು ದಿನ ಶಾರುಖ್ ಪುತ್ರ ಅಬ್ರಾಮ್ ನನ್ನು ತಮ್ಮ ಬಲಿ ಕರೆದರು, ಆತ ತಂದೆಯ ಮಾತಿಗೆ ಕಿವಿಗೊಡದೆ ಹೋಗಿರುವುದನ್ನು ನೋಡಿ ಅವರ ಮನಸ್ಸಿನಲ್ಲಿ ಹಲವು ಬಗೆಗಿನ ಪ್ರಶ್ನೆಗಳು ಮೂಡಿತ್ತಂತೆ.
'ನಾನು ಒಳ್ಳೆಯ ತಂದೆಯಲ್ಲ'
ಶಾರುಖ್ ಖಾನ್ (Sharukh Khan) ಒಮ್ಮೆ ಮಾಧ್ಯಮದೊಂದಿಗೆ ಮಾತನಾಡುತ್ತಾ, 'ನಾನು ಒಂದು ದಿನ ಅಬ್ರಾಮ್ ನನ್ನು ಕರೆದು, ನನ್ನ ಹತ್ತಿರ ಕುಳಿತುಕೊಳ್ಳಲು ಹೇಳಿದೆ. ಆದರೆ ಆತನ ನನ್ನ ಮಾತಿಗೆ ಕಿವಿಗೊಡದೆ ಅಲ್ಲಿಂದ ಹೊರಟುಹೋದ. ಹಾಗಾಗಿ ನಾನು ಒಳ್ಳೆಯ ತಂದೆಯಲ್ಲವೇ ಎಂಬ ಆಲೋಚನೆಗಳು ನನ್ನನ್ನು ಕಾಡಲು ಆರಂಭಿಸಿತು. ನಾನು ಮಕ್ಕಳನ್ನು ಸರಿಯಾಗಿ ಪ್ರೀತಿಸಲಿಲ್ಲವೇ? ಸಿನಿಮಾಗೆ ಹೆಚ್ಚಿನ ಸಮಯವನ್ನು ನೀಡುತ್ತೇನೆಯೇ? ಮಕ್ಕಳಿಗೆ ಸಮಯ ನೀಡಲು ನನಗೆ ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆಗಳು ತಲೆಯಲ್ಲಿ ಮೂಡಿತ್ತು ಎಂದಿದ್ದರು.
ಇದನ್ನೂ ಓದಿ : ಬಬ್ಬರ್ ಶೇರ್ ಜೊತೆ ಗಜಕೇಸರಿ..! ಅಸಲಿ ಸಿಂಹಕ್ಕೆ ಕೈಯ್ಯಾರೇ ಆಹಾರ ತಿನ್ನಿಸುತ್ತಿರುವ Rocking star ಇಲ್ಲಿದೆ VIDEO
ಇನ್ನೊಂದು ಸಂದರ್ಶನದಲ್ಲಿ (Sharukh Khan interview) ಶಾರುಖ್ ಖಾನ್ ತಮ್ಮ ಮಕ್ಕಳ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಡಿಎನ್ಎಗೆ ನೀಡಿದ ಸಂದರ್ಶನದಲ್ಲಿ, ಶಾರುಖ್ ತಾನು ಪ್ರೋಟೆಕ್ಟಿವ್ ತಂದೆಯಲ್ಲ ಎಂದು ಹೇಳಿದ್ದಾರೆ. ನೋಡುವವರಿಗೆ ಹಾಗೆ ಕಾಣಿಸಬಹುದು, ಆದರೆ, ವಾಸ್ತವವಾಗಿ ಹಾಗಲ್ಲ ಎಂದಿದ್ದರು.
ಅಬ್ರಾಮ್ ನವಾಜ್ ಮೇಲೆ ಪುತ್ರನ ಕೋಪ :
ನನ್ನ ಸಿನೆಮಾದಲ್ಲಿ (cinema) ಫೈಟಿಂಗ್ ದೃಶ್ಯವನ್ನು ನೋಡಿದರೆ ಅಬ್ರಾಮ್ ಅದನ್ನು ನಿಜವೆಂದು ಭಾವಿಸುತ್ತಾನೆ. ನಂತರ, ಅವರನ್ನು ಭೇಟಿಯಾದಾಗ, ಅವರನ್ನು ಇಷ್ಟಪಡುವುದಿಲ್ಲ ಎಂದಿದ್ದಾನೆ. ದಿಲ್ವಾಲೇ ಸಿನೆಮಾ ವೀಕ್ಷಿಸಿದ ನಂತರ ಕಾಜೋಲ್ (Kajol) ಜೊತೆ ಅಬ್ರಾಮ್ ಈರೀತಿ ನಡೆದುಕೊಂಡಿದ್ದನಂತೆ. ಇನ್ನು 'ರಯೀಸ್' ಸಿನೆಮಾದಲ್ಲಿ ನವಾಜ್ ಅವರನ್ನು ನೋಡಿ, ನಂತರ ಕೋಪಗೊಳ್ಳಲು ಆರಂಭಿಸಿದ್ದನಂತೆ.
ಇದನ್ನೂ ಓದಿ : Kiccha Sudeep : ಕೋಟಿಗೊಬ್ಬ-3 ಸಿನಿಮಾ ಪ್ರದರ್ಶನ ಲೇಟ್ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿಚ್ಚ ಸುದೀಪ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ