Shah Rukh Khan Tests Covid Positive: ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ಕೋವಿಡ್ ಪಾಸಿಟಿವ್ ವರದಿ ಬಳಿಕ ಇದೀಗ ಅವರ ತಂದೆ ಮತ್ತು ಬಾಲಿವುಡ್‌ ಸ್ಟಾರ್‌ ನಟ ಶಾರುಖ್ ಖಾನ್‌ ಅವರಿಗೆ ಸಹ ಕೊರೊನಾ ದೃಢಪಟ್ಟಿದೆ.  ವರದಿಗಳ ಪ್ರಕಾರ, ಸೌಮ್ಯ ರೋಗಲಕ್ಷಣಗಳು ಕಂಡುಬಂದಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ʻಬಂಗಾರದ ಮನುಷ್ಯʼ ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದ್ದೆಷ್ಟು? ಅಣ್ಣಾವ್ರು ಪಡೆದ ಸಂಭಾವನೆ ಗೊತ್ತಾ!


ಆದರೂ ನಟ ಶಾರುಖ್ ಖಾನ್‌ ಈ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಈ ಹಿಂದೆ ಅಕ್ಷಯ್‌ ಕುಮಾರ್‌, ಕತ್ರಿನಾ ಕೈಫ್ ಸಹ ಕೋವಿಡ್‌ ಪಾಸಿಟಿವ್‌ ಆಗಿದ್ದರು. 


ಶಾರುಖ್ ಇತ್ತೀಚೆಗೆ 2023 ರಲ್ಲಿ ಮುಂಬರುವ ಬ್ಯಾಕ್-ಟು-ಬ್ಯಾಕ್ ಚಿತ್ರಗಳ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಶಾರುಖ್ ಅಭಿನಯದ ಆಕ್ಷನ್-ಥ್ರಿಲ್ಲರ್ ಮೂವಿ ಜವಾನ್‌ನ ಟೀಸರ್ ಅನ್ನು ಅನಾವರಣಗೊಂಡಿದೆ. ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.


ಇದನ್ನೂ ಓದಿ: IIFA 2022: ಅತ್ಯುತ್ತಮ ನಟಿ ಕೃತಿ, ನಟ ವಿಕ್ಕಿ ಕೌಶಲ್.. ಯಾರಿಗೆ ಯಾವ ಪ್ರಶಸ್ತಿ, ಇಲ್ಲಿದೆ ಕಂಪ್ಲೀಟ್‌ ಲಿಸ್ಟ್


ಶಾರುಖ್ ಅಭಿನಯದ ಜವಾನ್ ಚಿತ್ರದಲ್ಲಿ ದಕ್ಷಿಣದ ನಟಿ ನಯನತಾರಾ ನಟಿಸಿದ್ದಾರೆ. ಈ ಮೊದಲು ಆ ಪಾತ್ರಕ್ಕೆ ಸಮಂತಾ ರುತ್‌ ಪ್ರಭು ಆಯ್ಕೆ ಆಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಅವರು ಅದನ್ನು ನಿರಾಕರಿಸಿದ್ದರು. ಇದೀಗ ಅಟ್ಲಿ ಆ್ಯಕ್ಷನ್ ಕಟ್ ಹೇಳಲಿರುವ ಜವಾನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಹಿಂದಿಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.