"ಜವಾನ್" ಆಗಿ ಬರಲಿದ್ದಾರೆ ನಟ ಶಾರುಖ್ ಖಾನ್..!

ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ.ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.

Written by - YASHODHA POOJARI | Edited by - Manjunath N | Last Updated : Jun 4, 2022, 12:35 AM IST
  • ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ.
  • ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.
"ಜವಾನ್" ಆಗಿ ಬರಲಿದ್ದಾರೆ ನಟ ಶಾರುಖ್ ಖಾನ್..! title=

ಮುಂಬೈ: ಹಲವು ಕಾರಣಕ್ಕೆ ಸದ್ದು ಮತ್ತು ಸುದ್ದಿಯಲ್ಲಿರುವ ಸ್ಟಾರ್ ಕಾಂಬಿನೇಷನ್ ವೊಂದು ಇದೀಗ ಅಧಿಕೃತವಾಗಿದೆ.ಅಂದರೆ, ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ತಮಿಳಿನ ಸ್ಟಾರ್ ನಿರ್ದೇಶಕ ಅಟ್ಲಿ, 'ಜವಾನ್' ಸಿನಿಮಾ ಮೂಲಕ ಕೈ ಜೋಡಿಸಿದ್ದಾರೆ.

ಅಟ್ಲಿ ಸಿನಿಮಾ ಅಂದ್ರೆ ಅಲ್ಲಿ ಕಮರ್ಷಿಯಲ್ ಅಂಶಗಳೇ ಹೈಲೈಟ್. ಇದೀಗ ಶಾರುಖ್ ಮೇಲೆ ಆ ಪ್ರಯೋಗಕ್ಕೆ ಮುಂದಾಗಿದ್ದಾರೆ ನಿರ್ದೇಶಕ ಅಟ್ಲಿ. ಈವರೆಗೂ ಹಿಂದಿಯಲ್ಲಿ ಮಾತ್ರ ತೆರೆಕಾಣುತ್ತಿದ್ದ ಶಾರುಖ್ ಸಿನಿಮಾ, ಇದೀಗ ಅಟ್ಲಿ ಆ್ಯಕ್ಷನ್ ಕಟ್ ಹೇಳಲಿರುವ ಜವಾನ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗುತ್ತಿದೆ ಎಂಬುದು ವಿಶೇಷ. ಹಿಂದಿಯ ಜತೆಗೆ ತೆಲುಗು, ತಮಿಳು, ಕನ್ನಡ, ಮಲಯಾಳಂನಲ್ಲಿಯೂ ಈ ಸಿನಿಮಾ ಸಿದ್ಧವಾಗುತ್ತಿದೆ. 

ಇದನ್ನೂ ಓದಿ: 'ಸಚಿವ ನಾಗೇಶ್ ಅವರ ಮನೆ ಮೇಲಿನ ದಾಳಿ ಹೇಡಿತನದ ಸಂಕೇತ' 

ರಾಜಾ ರಾಣಿ, ತೇರಿ, ಮೆರ್ಸೆಲ್, ಬಿಗಿಲ್ ಸಿನಿಮಾಗಳ ಮೂಲಕವೇ ಕಾಲಿವುಡ್ ನಲ್ಲಿ ಹವಾ ಕ್ರಿಯೆಟ್ ಮಾಡಿರುವ ಅಟ್ಲಿ, ಶಾರುಖ್ ಜತೆ ಸಿನಿಮಾ ಮಾಡಲಿದ್ದಾರೆ ಎಂದಾಗಲೇ ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿತ್ತು. ಇದೀಗ ಚಿತ್ರದ ಮೊದಲ ಲುಕ್ ಮತ್ತಷ್ಟು ಕೌತುಕ ಸೃಷ್ಟಿಸಿದೆ.ಬಿಡುಗಡೆ ಆಗಿರುವ ಕಿರು ಟೀಸರ್ ನಲ್ಲಿ ಶಾರುಖ್ ಅವರ ರಗಡ್ ಲುಕ್ ಮೋಡಿ ಮಾಡುತ್ತಿದೆ.

ಈ ಸಿನಿಮಾ ಬಗ್ಗೆ ಹೇಳಿಕೊಳ್ಳುವ ಶಾರುಖ್ ಖಾನ್, ಜವಾನ್ ಸಿನಿಮಾದ ಕಥೆ ಎಲ್ಲ ಕಡೆ ಸಲ್ಲುತ್ತದೆ. ಭಾಷೆಗೂ ಮೀರಿ ಯೂನಿವರ್ಸಲ್ ಕಥೆಯಾಗಿದೆ.ಅಂಥ ಕಥೆ ಹೆಣೆದಿರುವ ಅಟ್ಲಿಗೆ ಧನ್ಯವಾದ ಹೇಳಲೇಬೇಕು. ನನಗೆ ಇದೊಂದು ಹೊಸ ಅನುಭವ.ಮೈನವಿರೇಳಿಸುವ ಆ್ಯಕ್ಷನ್ ಸಿನಿಮಾದ ಹೈಲೆಟ್. ಸದ್ಯ ಬಿಡುಗಡೆ ಆಗಿರುವ ಟೀಸರ್ ಸಣ್ಣ ಝಲಕ್ ಅಷ್ಟೇ ಎಂದಿದ್ದಾರೆ ಶಾರುಖ್.ಇದೇ ವಿಚಾರವಾಗಿ ಮಾತನಾಡುವ ನಿರ್ದೇಶಕ ಅಟ್ಲಿ, ಇದೊಂದು ವಿಶ್ಯುವಲ್ ಟ್ರೀಟ್ ಸಿನಿಮಾ. ಪ್ರೇಕ್ಷಕನಿಗೆ ಹೊಸ ಥರದ ಅನುಭವ ಈ ಸಿನಿಮಾದಲ್ಲಿ ಸಿಗಲಿದೆ. ಆ್ಯಕ್ಷನ್ ಜತೆಗೆ ಕಮರ್ಷಿಯಲ್, ಡ್ರಾಮ, ಎಮೀಷನಲ್ ಕಂಟೆಂಟ್ ಸಿನಿಮಾದಲ್ಲಿ ಇರಲಿದೆ.ಈ ಸಿನಿಮಾವನ್ನು ಸ್ವತಃ ಶಾರುಖ್ ಪ್ರಸೆಂಟ್ ಮಾಡುತ್ತಿರುವುದು ಮತ್ತಷ್ಟು ಖುಷಿ ನೀಡಿದೆ ಎಂದಿದ್ದಾರೆ ಅಟ್ಲಿ.

ಇದನ್ನೂ ಓದಿ: ಗಣಿಗಾರಿಕೆ ಆರೋಪ: ಪತಿ ಮಾಡಿದ ತಪ್ಪಿಗೆ ಪತ್ನಿ ವಿರುದ್ಧ ಪ್ರಕರಣ ದಾಖಲು!

2023ರ ಜೂನ್ 2ಕ್ಕೆ ಬಿಡುಗಡೆ..

ಸದ್ಯ ಪಠಾಣ್ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿರುವ ಶಾರುಖ್, ಅದರ ಜತೆಗೆ ಜವಾನ್ ಚಿತ್ತದ ಕೆಲಸದಲ್ಲಿಯೂ ಭಾಗವಹಿಸಲಿದ್ದಾರೆ.‌ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕವನ್ನೂ ಘೋಷಿಸಿದೆ.2023ರ ಜೂನ್ 2ರಂದು ಈ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಯಾರೆಲ್ಲ ಇರಲಿದ್ದಾರೆ‌ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹೊರಬೀಳಲಿದೆ.ಈ ಚಿತ್ರವನ್ನು ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಙಟರ್ಟೈನ್ ಮೆಂಟ್ ಸಂಸ್ಥೆ ನಿರ್ಮಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News