Ashwatthama: ಬಾಲಿವುಡ್ ಹೀರೋಗೆ ಸಚಿನ್ ರವಿ ಆಕ್ಷನ್ ಕಟ್: ʻಅಶ್ವತ್ಥಾಮʼನಾದ ಶಾಹಿದ್ ಕಪೂರ್!!
Shahid Kapoor In Ashwatthama: ಕನ್ನಡದ ಹೆಸರಾಂತ ಡೈರೆಕ್ಟರ್ ಸಚಿನ್ ರವಿ ಮೊದಲ ಬಾರಿಗೆ ಬಾಲಿವುಡ್ನಲ್ಲಿ ‘ಅಶ್ವತ್ಥಾಮ’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದರಲ್ಲಿ ನಟ ಶಾಹಿದ್ ಕಪೂರ್ ಅಶ್ವತ್ಥಾಮನಾಗಿ ಅಬ್ಬರಿಸಲಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Sachin Ravi And Shahid Kapoor Combo In Ashwatthama: ಸ್ಯಾಂಡಲ್‌ವುಡ್ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಖ್ಯಾತ ಡೈರೆಕ್ಟರ್ ಸಚಿನ್ ರವಿ ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್‌ಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡದ ನಿರ್ದೇಶಕ ಸಚಿನ್ ಹಾಗೂ ಹಿಂದಿ ಚಿತ್ರರಂಗದ ಹೀರೋ ಶಾಹಿದ್ ಕಪೂರ್ ಕಾಂಬೋ ‘ಅಶ್ವತ್ಥಾಮ’ನ ಕಥೆ ಹೇಳಲು ರೆಡಿಯಾಗಿದ್ದಾರೆ. ಈ ವಿಚಾರವನ್ನು ಮಂಗಳವಾರ ಮುಂಬೈನಲ್ಲಿ ನಡೆದ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಹೊರಬಂದಿದೆ.
ಡೈರೆಕ್ಟರ್ ಸಚಿನ್ ರವಿ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದಲ್ಲಿ ‘ಅಶ್ವತ್ಥಾಮ’ನ ಪಾತ್ರವನ್ನು ಶಾಹಿದ್ ಕಪೂರ್ ಹೀರೊ ನಿರ್ವಹಿಸಲಿದ್ದಾರೆ. ಅಶ್ವತ್ಥಾಮ ಒಬ್ಬ ಗ್ರೇಟ್ ವಾರಿಯರ್ ಆಗಿದ್ದು, ಆತ ಏಳು ಚಿರಂಜೀವಿಗಳಲ್ಲಿ ಒಬ್ಬ ಅನ್ನೋದು ಕೂಡ ನಂಬಿಕೆಯಿದೆ. ಹಾಗೆಯೇ ಅಶ್ವತ್ಥಾಮನಿಗೆ ಸಾವೇ ಇಲ್ಲ ಅನ್ನೋದು ಚಿರಂಜೀವಿಯ ಅರ್ಥ ಎನ್ನಬಹುದು. ಸದ್ಯ ಶಾಹಿದ್ ಕಪೂರ್ ಅಶ್ವತ್ಥಾಮನಾಗಿಯೇ ಅಬ್ಬರಿಸಲಿದ್ದಾರೆ.
ಇದನ್ನೂ ಓದಿ: Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್
ಅಶ್ವತ್ಥಾಮ ಚಿತ್ರಕಥೆ ಬಗ್ಗೆ ಮಾತನಾಡಿರುವ ಸಚಿನ್ ರವಿ “ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ” ಎಂದಿದ್ದಾರೆ.
ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ!
ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್ನೈನ್ಮಂಟ್ ಕಂಪನಿ ಅಡಿಯಲ್ಲಿ ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ. ಇದರ ಇಂಟ್ರೆಸ್ಟಿಂಗ್ ವಿಷಯವೇನೆಂದರೆ ಅಶ್ವತ್ಥಾಮ ಹಿಂದಿಯಲ್ಲಿ ನಿರ್ಮಾಣವಾಗ್ತಿದ್ದು, ಆದರೆ ಈ ಸಿನಿಮಾ ಕನ್ನಡಕ್ಕೂ ಡಬ್ ಆಗ್ತಿದೆ. ನಿರ್ದೇಶಕ ಸಚಿನ್ ರವಿ ಮಹಾಭಾರತದ ಈ ಅಶ್ವತ್ಥಾಮ ಕಥೆಯನ್ನು ಕನ್ನಡದಲ್ಲಿಯೇ ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶವನ್ನ ಕನ್ನಡಿಗರಿಗೆ ಕೂಡ ನೀಡಿದ್ದಾರೆ. ಈ ಚಿತ್ರವನ್ನು ಕನ್ನಡದ ಜೊತೆಯಲ್ಲಿ ತೆಲುಗು, ತಮಿಳು, ಮಲಯಾಳಂನಲ್ಲಿಯೂ ರಾರಾಜಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.