Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್

Ileana D'Cruz On Trolls : ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಇತ್ತೀಚೆಗೆ ತಾಯಿಯಾಗಿದ್ದಾರೆ. ‘ದೇವದಾಸು’ ಚಿತ್ರದ ಮೂಲಕ ನಾಯಕಿಯಾಗಿ ಸಿನಿ ಕರಿಯರ್‌ ಶುರು ಮಾಡಿದರು. ಆ ನಂತರ ಈ ನಟಿ ಹಿಂತಿರುಗಿ ನೋಡಲೇ ಇಲ್ಲ. 

Written by - Chetana Devarmani | Last Updated : Mar 20, 2024, 08:38 AM IST
  • ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್
  • "ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.."
  • ನಟಿ ಇಲಿಯಾನಾ ಡಿ ಕ್ರೂಸ್ ಹೇಳಿಕೆ
Ileana D'Cruz: "ನನ್ನನ್ನು ಟೀಕಿಸಿ.. ನನ್ನ ಬಾಯ್‌ಫ್ರೆಂಡ್‌ʼನ್ನು ಟೀಕಿಸಿದರೆ ನಾನು ಸಹಿಸುವುದಿಲ್ಲ.." - ಇಲಿಯಾನಾ ಡಿ ಕ್ರೂಸ್ title=

Ileana D'Cruz: ಗೋವಾ ಬ್ಯೂಟಿ ಇಲಿಯಾನಾ ಡಿ ಕ್ರೂಸ್ ಇತ್ತೀಚೆಗೆ ತಾಯಿಯಾಗಿದ್ದಾರೆ. ‘ದೇವದಾಸು’ ಚಿತ್ರದ ಮೂಲಕ ನಾಯಕಿಯಾಗಿ ಸಿನಿ ಕರಿಯರ್‌ ಶುರು ಮಾಡಿದರು. ಆ ನಂತರ ಈ ನಟಿ ಹಿಂತಿರುಗಿ ನೋಡಲೇ ಇಲ್ಲ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮಹೇಶ್ ಬಾಬು ಅಭಿನಯದ ಬ್ಲಾಕ್ ಬಸ್ಟರ್ 'ಪೋಕಿರಿ' ಚಿತ್ರದ ಮೂಲಕ ಇಲಿಯಾನಾ ಟಾಪ್ ಹೀರೋಯಿನ್ ಆದರು. ಆ ನಂತರ ತೆಲುಗಿನ ಎಲ್ಲ ಟಾಪ್ ಹೀರೋಗಳ ಜೊತೆ ನಟಿಸಿ ಜನರ ಮನಗೆದ್ದರು ಇನ್ನೊಂದೆಡೆ ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿ ನಟಿಸುತ್ತಲೇ ಹಿಂದಿಯಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ಅಲ್ಲಿಯೂ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಅವರು ಇತ್ತೀಚೆಗೆ ತಮ್ಮ ಬಾಯ್‌ಫ್ರೆಂಡ್ ಮೈಕೆಲ್ ಅವರನ್ನು ಪರಿಚಯಿಸಿದ್ದಾರೆ. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗುವಿನ ತಂದೆ ಯಾರೆಂಬ ಕುತೂಹಲಕ್ಕೆ ಇಲಿಯಾನಾ ತೆರೆ ಎಳೆದಿದ್ದರು.  

ಇಲಿಯಾನಾ ಮದುವೆಗೂ ಮುನ್ನವೇ ಮುವಿಗೆ ಜನ್ಮ ನೀಡಿದ್ದಾರೆ ಎಂಬ ವದಂತಿ ಇದೆ. ಇದೇ ಕಾರಣಕ್ಕೆ ಅವರನ್ನು ಹಲವರು ಟ್ರೋಲ್‌ ಕೂಡ ಮಾಡಿದ್ದರು. ಇಲಿಯಾನಾ ಜೊತೆಗೆ ಅವರ ಪತಿಯನ್ನು ಸಹ ಜನರು ಟ್ರೋಲ್‌ ಮಾಡಿದ್ದರು. ಇದೇ ವಿಚಾರವಾಗಿ ಮಾತನಾಡಿರುವ ಇಲಿಯಾನಾ, ಸಾಮಾಜಿಕ ಜಾಲತಾಣಗಳಲ್ಲಿ ಪತಿ ಮೈಕೆಲ್ ಅವರನ್ನು ಟೀಕಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಶೀಘ್ರದಲ್ಲೇ ದಾಂಪತ್ಯಕ್ಕೆ ಹೆಜ್ಜೆಹಾಕಲು ಸಜ್ಜಾದ ಮಿಲ್ಕಿ ಬ್ಯೂಟಿ: ಮದುವೆ ಯಾವಾಗ ಗೊತ್ತೇ? 

ನಾನು ಪಬ್ಲಿಕ್ ಡೊಮೈನ್ ನಲ್ಲಿರುವುದರಿಂದ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಲೈಟ್ ಆಗಿಯೇ ತೆಗೆದುಕೊಳ್ಳುತ್ತೇನೆ. ಆದರೆ ಅವರು ನನ್ನ ಮಗುವಿನ ತಂದೆ. ಮೈಕೆಲ್ ಅವರಿಗೆ ಇದೆಲ್ಲ ಸಹಿಸಲಾಗಲಿಲ್ಲ. ನಾನು ಗರ್ಭಿಣಿಯಾಗಿದ್ದಾಗ ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಅವರ ಜೊತೆಗೆ ನನ್ನ ತಾಯಿಯೂ ತನ್ನ ಕಣ್ಣಿನಂತೆ ಕಾಪಾಡಿದ್ದಾಳೆ ಎಂದು ಹೇಳಿದ್ದಾರೆ. ನನ್ನ ಪತಿ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ. ನಾನು ನಟಿಸಿದ ಚಿತ್ರದ ಹಾಡುಗಳ ಪಲ್ಲವಿಗಳನ್ನೂ ಗುನುಗುತ್ತಾರೆ. ಆತನ ಒಳ್ಳೆಯತನಕ್ಕೆ ಇದಕ್ಕಿಂತ ಉತ್ತಮ ಪುರಾವೆ ಬೇರೊಂದಿಲ್ಲ ಎಂದಿದ್ದಾರೆ. 

ಮೈಕೆಲ್‌ಗಿಂತ ಮೊದಲು ಇಲಿಯಾನಾ ವಿದೇಶಿ ಛಾಯಾಗ್ರಾಹಕನೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಸಂಬಂಧ ಮುರಿದು ಬಿದ್ದ ಬಳಿಕ ಮೈಕೆಲ್ ಅವರನ್ನು ಇಲಿಯಾನಾ ಪ್ರೀತಿಸಿದರು. ಅವರ ಪ್ರೀತಿಯ ಸಂಕೇತವಾಗಿ ಒಂದು ಮಗು ಕೂಡ ಜನಿಸಿತು. ತೆಲುಗಿನಲ್ಲಿ ರವಿತೇಜ ಅಭಿನಯದ 'ಅಮರ್ ಅಕ್ಬರ್ ಆಂಟೋನಿ' ಚಿತ್ರದಲ್ಲಿ ಇಲಿಯಾನಾ ಕೊನೆಯದಾಗಿ ನಟಿಸಿದ್ದರು.  

ಇದನ್ನೂ ಓದಿ:  Arundhathi Nair: ಸಾವು ಬದುಕಿನ ನಡುವೆ ಹೋರಾಡುತ್ತಿರುವ ಖ್ಯಾತ ನಟಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News