ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ!

Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.. 

Written by - Savita M B | Last Updated : Mar 20, 2024, 07:58 AM IST
  • ಟಾಲಿವುಡ್ ನ ಸೂಪರ್ ಜೋಡಿ ನಾಗ ಚೈತನ್ಯ-ಸಮಂತಾ ಅನಿರೀಕ್ಷಿತವಾಗಿ 2021 ರಲ್ಲಿ ವಿಚ್ಛೇದನ ಪಡೆದು ದೂರವಾದರು.
  • ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಡಿವೋರ್ಸ್ ಬಗ್ಗೆ ಹಲವಾರು ವದಂತಿಗಳು ಹಬ್ಬಿದ್ದವು.
  • ನಿಜವಾಗಿ ಅವರಿಬ್ಬರ ಮಧ್ಯೆ ಏನಾಯಿತು ಎಂಬುದು ದೊಡ್ಡ ಸಸ್ಪೆನ್ಸ್ ಆಗಿದೆ.
ವಿಚ್ಛೇದನದ ನಂತರ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಮಂತಾ-ನಾಗ ಚೈತನ್ಯ!  title=

Samantha-Naga Chaitanya: ಟಾಲಿವುಡ್ ನ ಸೂಪರ್ ಜೋಡಿ ನಾಗ ಚೈತನ್ಯ-ಸಮಂತಾ ಅನಿರೀಕ್ಷಿತವಾಗಿ 2021 ರಲ್ಲಿ ವಿಚ್ಛೇದನ ಪಡೆದು ದೂರವಾದರು.. ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರ ಡಿವೋರ್ಸ್ ಬಗ್ಗೆ ಹಲವಾರು ವದಂತಿಗಳು ಹಬ್ಬಿದ್ದವು.. ಆದರೆ ಅವು ಸತ್ಯದಿಂದ ದೂರವಾಗಿದ್ದವು.. ಆದರೆ ನಿಜವಾಗಿ ಅವರಿಬ್ಬರ ಮಧ್ಯೆ ಏನಾಯಿತು ಎಂಬುದು ದೊಡ್ಡ ಸಸ್ಪೆನ್ಸ್ ಆಗಿದೆ.   

ವಿಚ್ಛೇದನದ ಎರಡು ವರ್ಷಗಳ ನಂತರ ಸಮಂತಾ-ನಾಗ ಚೈತನ್ಯ ಎಲೆಲಿಯೂ ಒಬ್ಬರಿಗೊಬ್ಬರು ಒಂದೇ ಕಡೆ ಭೇಟಿಯಾಗಿರಲಿಲ್ಲ.. ಇಬ್ಬರೂ ತಮ್ಮ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಸದ್ಯ ಈ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದೆ.. ಅಮೆಜಾನ್ ಪ್ರೈಮ್ ಮುಂಬೈನಲ್ಲಿ ಪ್ರಮೋಷನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ರೈಮ್ ಒರಿಜಿನಲ್ಸ್ ಪ್ರಾಜೆಕ್ಟ್‌ಗಳ ಭಾಗವಾಗಿದ್ದ ನಟರು ಮತ್ತು ತಂತ್ರಜ್ಞರು ಈ ಮೆಗಾ ಈವೆಂಟ್‌ನಲ್ಲಿ ಭಾಗವಹಿಸಿದ್ದರು. ನಿರ್ದೇಶಕ ನಿರ್ಮಾಪಕ ಕರಣ್ ಜೋಹರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 

ಇದನ್ನೂ ಓದಿ-ಮಹಿಳಾಪ್ರಧಾನ ʼತಪಸ್ಸಿʼ ಸಿನಿಮಾದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್..!

ಸಿಟಾಡೆಲ್ ಸಿರೀಸ್‌ನಲ್ಲಿ ಸಮಂತಾ ನಟಿಸುತ್ತಿರುವುದು ಗೊತ್ತೇ ಇದೆ. ಇದರ ನಿರ್ದೇಶಕರಾದ ರಾಜ್ ಮತ್ತು ಡಿಕೆ, ನಾಯಕ ವರುಣ್ ಧವನ್ ಮತ್ತು ಸಮಂತಾ, ಕರಣ್ ಜೋಹರ್ ಅವರನ್ನು ಆಹ್ವಾನಿಸಲಾಗಿತ್ತು..

ಅದೇ ರೀತಿ ನಾಗ ಚೈತನ್ಯ ಅವರು ದೂತ ಕ್ರೈಮ್ ಥ್ರಿಲ್ಲರ್ ಸಿರೀಸ್‌ನಲ್ಲಿ ನಟಿಸಿದ್ದಾರೆ.. ಕಳೆದ ವರ್ಷ ಬಿಡುಗಡೆಯಾದ ಈ ಸರಣಿ ದೊಡ್ಡ ಯಶಸ್ಸು ಕಂಡಿತ್ತು. ಇದನ್ನು ವಿಕ್ರಮ್ ಕೆ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸದ್ಯದಲ್ಲೇ ದೂತಾ 2 ಸಹ ಅನೌನ್ಸ್ ಆಗಲಿದೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಅಮೇಜಾನ್ ಪ್ರೈಮ್ ಕಾರ್ಯಕ್ರಮಕ್ಕೆ ನಾಗ ಚೈತನ್ಯ ಅವರನ್ನು ಆಹ್ವಾನಿಸಲಾಗಿತ್ತು. ನಾಗ ಚೈತನ್ಯ ಮಾತನಾಡಿದರು. ಹೀಗಾಗಿ ಸಮಂತಾ-ನಾಗ ಚೈತನ್ಯ ಪ್ರಧಾನ ಪ್ರಮೋಷನ್ ಕಾರ್ಯಕ್ರಮದ ಭಾಗವಾದರು. 

ಇದನ್ನೂ ಓದಿ-The Rulers : ಸಂವಿಧಾನದ ಮಹತ್ವ ಸಾರುತ್ತದೆ ಈ ಸಿನಿಮಾ , "ದಿ ರೂಲರ್ಸ್" ಚಿತ್ರದ ಟ್ರೈಲರ್ ಬಿಡುಗಡೆ

‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News