ಬೆಂಗಳೂರು: ಸಂದೇಶ್​ ಎನ್​ ನಿರ್ಮಾಣದ,ನಟ ಶಿವರಾಜ್​ಕುಮಾರ್ ನಟನೆಯ ʼಘೋಸ್ಟ್ ಸಿನಿಮಾ ಈಗಾಗಲೇ ಬಿಡುಗಡೆ ಸಿದ್ದವಾಗಿದೆ. ಇದರ ಬೆನ್ನಲೇ ಸದ್ಯದಲ್ಲೇ  ಶಿವಣ್ಣ ಹುಟ್ಟು ಹಬ್ಬದ ಪ್ರಯುಕ್ತ ʼಬಿಗ್​ ಡ್ಯಾಡಿʼ ರಿಲೀಸ್‌ ಗೆ ಸಜ್ಜಾಗಿದೆ. 


COMMERCIAL BREAK
SCROLL TO CONTINUE READING

ಕರುನಾಡ ಹ್ಯಾಟ್ರಿಕ್‌ ಹೀರೊ ಶಿವರಾಜ್​ಕುಮಾರ್, ರೈಫಲ್​ ಹಿಡಿದು ಹಿಡಿದಿರುವ ಪೋಷ್ಟರ್‌ ಒಂದು ಅಭಿಮಾನಿಳಲ್ಲಿ ನಿರಿಕ್ಷೆ ಹೆಚ್ಚಿಸಿದೆ. ಇನ್ನು ಪ್ರತಿ ವರ್ಷದಂತೆ ಈ ವರ್ಷವು ಜುಲೈ 12ರಂದು  ಶಿವಣ್ಣ ಬರ್ತಡೆ ಅದ್ದೂರಿಯಾಗಿ ಆಚರಿಸಲು ಅಭಿಮಾನಿಗಳು ತಯಾರಾಗಿದ್ದರೇ, ಇತ್ತ ಫ್ಯಾನ್ಸ್‌ ಗಾಗಿ ಘೋಸ್ಟ್  ಸಿನಿಮಾದ ಚಿತ್ರತಂಡ ಸಜ್ಜಾಗಿದೆ.


ಇದನ್ನೂ ಓದಿ: Yash: ಮಲೇಷ್ಯಾದಲ್ಲಿ ರಾಕಿಭಾಯ್‌ ʼಯಶ್‌ʼಗಾಗಿ ಮುಗಿಬಿದ್ದ ಫ್ಯಾನ್ಸ್‌ ; ಇಲ್ಲಿವೆ ನೋಡಿ ಪೋಟೊಸ್‌


ಇನ್ನು ಹುಟ್ಟು ಹಬ್ಬದ ಪ್ರಯುಕ್ತ ‘ಬಿಗ್​ ಡ್ಯಾಡಿʼ ವಿಡಿಯೋ ಬಿಡುಗಡೆಯಾಗಲಿದೆ. ಘೋಸ್ಟ್ ಸಿನಿಮಾ ಸಂಬಂಧ ಒಂದೊಂದೇ  ತುಣುಕು ಬಿಡುಗಡೆ ಮಾಡಿ ಝಲಕ್ ನೀಡುತ್ತಿದ್ದಾರೆ.  ಶಿವಣ್ಣನ ಚಿತ್ರಕ್ಕಾಗಿ ಕಾಯುತ್ತಿರುವ ಅಭಿಮಾನಿಗಳಲ್ಲಿ ಬಿಗ್​ ಡ್ಯಾಡಿ ಪೋಷ್ಟರ್‌ ಚಿತ್ರದ ಮೇಲಿನ ನೀರಿಕ್ಷೆ ಇನ್ನಷ್ಟು ಹೆಚ್ಚಿಸಿದೆ. ಈ ಚಿತ್ರದ ʼಬಿಗ್​ ಡ್ಯಾಡಿʼ ಪೋಷ್ಟರ್‌ ನ್ನು ನಿರ್ದೇಶಕ ಶ್ರೀನಿ ಪೋಸ್ಟರ್​ ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ: Rajnikant Jailer: ವೀಕ್ಷಣೆಯಲ್ಲಿ ದಾಖಲೆ ಬರೆದ ರಜನಿಕಾಂತ್ ನಟನೆಯ ʼಜೈಲರ್ʼ ಚಿತ್ರದ ಫಸ್ಟ್ ಸಾಂಗ್..!


ಇನ್ನು ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್,ಸತ್ಯಪ್ರಕಾಶ್,ದತ್ತಣ್ಣ,ಪ್ರಶಾಂತ್ ನಾರಾಯಣನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಶಿವರಾಜ್​ಕುಮಾರ್, ರೈಫಲ್​ ಹಿಡಿದಿರುವ ಪೋಷ್ಟರ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.