Shruti Haasan without Makeup : ನಟಿ ಶೃತಿ ಹಾಸನ್ ಪೋಸ್ಟ್ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಮೇಕಪ್ ಇಲ್ಲದ ಶೃತಿ ಫೋಟೋ ನೋಡಿದ ಅವರ ಫ್ಯಾನ್ಸ್‌ ಕಂಗಾಲಾಗಿದ್ದಾರೆ. ಕಮಲ್‌ ಹಾಸನ್‌ ಪುತ್ರಿಯ ರಿಯಲ್‌ ಅವತಾರ ನೆಟ್ಟಿಗರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದು, ಸಿನಿಮಾದಲ್ಲಿ ಮಿಂಚಿದ್ದ ಶೃತಿ ಇವರೇನಾ ಎನ್ನುತ್ತಿದ್ದಾರೆ. ಆದ್ರೆ ಗ್ಲಾಮರ್‌ ಗೊಂಬೆಯ ಈ ಅವತಾರಕ್ಕೆ ಗಂಭೀರವಾದ ಕಾಣವೊಂದಿದೆ.


COMMERCIAL BREAK
SCROLL TO CONTINUE READING

ಹೌದು... ತನ್ನ ಮಾದಕ ನೋಟದಿಂದಲೇ ಸಿನಿಮಾಗಳಲ್ಲಿ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಂಡು ಸಾಕಷ್ಟು ಸಿನಿರಸಿಕರ ಮನದರಸಿಯಾಗಿರುವ ಶೃತಿ ಹಾಸನ್‌ ಸದ್ಯ ಜ್ವರ ಮತ್ತು ಸೈನಸ್‌ನಿಂದ ಬಳಲುತ್ತಿದ್ದಾಳೆ. ಮುಖ ಊದಿಕೊಂಡಿದ್ದು, ಹಾಗಾಗಿಯೇ ಈ ರೀತಿ ವಿಕಾರವಾಗಿ ಕಾಣಿಸುತ್ತಿದ್ದಾರೆ. ಈ ಕುರಿತು ಸ್ವತಃ ಶೃತಿ ತಮ್ಮ ಸೇಲ್ಫಿ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ತಾವು ಆನಾರೋಗ್ಯದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: ಚಿಕ್ಕಪ್ಪ "ಪುನೀತ್" ಸ್ಕ್ರಿಪ್ಟ್ "ಯುವರಾಜ್ ಕುಮಾರ್ ಗೆ".. ಶೂಟಿಂಗ್ ಯಾವಾಗಿಂದ ಶುರು ಗೊತ್ತಾ...?


ಸದ್ಯ ಶ್ರುತಿ ಹಾಸನ್ ಟಾಲಿವುಡ್‌ ಸ್ಟಾರ್‌, ನಟ ಸಿಂಹ ಬಾಲಯ್ಯ ಅವರ ಜೊತೆ ವೀರ ಸಿಂಹ ರೆಡ್ಡಿಯಲ್ಲಿ ನಟಿಸಿದ್ದಾರೆ. ಅಲ್ಲದೆ, ಚಿರಂಜೀವಿ ಅವರ ಜೊತೆಯಲ್ಲಿ ವಾಲ್ಟರ್‌ ವೀರಯ್ಯ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ನಟನೆಯ ಬಹುನೀರಿಕ್ಷಿತ ಸಿನಿಮಾ ಸಲಾರ್‌ನಲ್ಲಿಯೂ ಕೂಡ ಶೃತಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಸಿನಿಮಾಗಳಿಂದ ಶೃತಿ ಸ್ಟಾರ್‌ಡಮ್‌ ದೊರೆತಿಲ್ಲ. ಇದೀಗ ಹಿರಿಯ ನಟರ ಜೊತೆ ತೆರೆ ಹಂಚಿಕೊಂಡಿರುವ ಶೃತಿಗೆ ಲಕ್‌ ಲಭಿಸುತ್ತಾ ಕಾಯ್ದು ನೋಡ್ಬೇಕಿದೆ.


ಇನ್ನು ಶೃತಿ ಸಂತನು ಜೊತೆ ಡೇಟಿಂಗ್‌ ಮಾಡುತ್ತಿದ್ದರು. ಇದರಿಂದ ಆಕೆ ಬೇರೆ ಸಿನಿಮಾಗಳತ್ತ ಗಮನ ಹರಿಸಲಿಲ್ಲ. ಅಲ್ಲದೆ, ಆಕೆಗೆ ಹೆಚ್ಚಿನ ಆಫರ್‌ಗಳು ಬರುತ್ತಿಲ್ಲ. ವಿಜಯ್ ಸೇತುಪತಿ ಜೊತೆ ಮಾಡಿದ ʼಲಾಭʼ ಚಿತ್ರ ಲಾಭವಿಲ್ಲದೆ ಚಿತ್ರಮಂದಿರದಿಂದ ಎತ್ತಂಗಡಿ ಆಯ್ತು. ಹಾಗಾಗಿ ಕಾಲಿವುಡ್ ನಲ್ಲಿ ಶ್ರುತಿ ಹಾಸನ್ ಗೆ ಅವಕಾಶಗಳು ಕಡಿಮೆಯಾದವರು. ಇದೀಗ ತೆಲುಗಿನಲ್ಲಿ ಶೃತಿಗೆ ಬಿಗ್‌ ಆಫರ್‌ಗಳು ಬಂದಿವೆ.


ಇದನ್ನೂ ಓದಿ: ಸಾಹಸಸಿಂಹನ ಕನಸಿನ ಮನೆ "ವಲ್ಮೀಕ".. ವಲ್ಮೀಕ ಅಂದ್ರೆ ಏನು ಗೊತ್ತಾ...?


ರವಿತೇಜ ಅಭಿನಯದ ʼಕ್ರ್ಯಾಕ್ʼ ಚಿತ್ರದ ಮೂಲಕ ಶ್ರುತಿ ಹಾಸನ್ ಗೆ ಹಿಟ್ ಸಿಕ್ಕಿದೆ. ಹಾಗಾಗಿ ಶ್ರುತಿ ಹಾಸನ್ ತೆಲುಗಿನಲ್ಲಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಆದರೆ ಈಗ ಚಿರಂಜೀವಿ ಅವರ ʼವಾಲ್ಟರ್‌ ವೀರಯ್ಯʼ ಮತ್ತು ಬಾಲಯ್ಯ ʼವೀರಸಿಂಹ ರೆಡ್ಡಿʼ ಸಿನಿಮಾಗಳು ಶ್ರುತಿ ಹಾಸನ್ ಅವರ ಭವಿಷ್ಯವನ್ನು ಬದಲಾಯಿಸಲಿವೆ ಎಂದು ಹೇಳಲಾಗಿದೆ. ಈಗಾಗಲೇ ಚಿರು ಮತ್ತು ಬಾಲಯ್ಯ ಸಿನಿಮಾಗಳ ಶೂಟಿಂಗ್‌ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ಧವಾಗಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.