Prabhas Marriage : ಪ್ಯಾನ್ ಇಂಡಿಯಾದ ಹೀರೋ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ದೊಡ್ಡಮ್ಮ ಶ್ಯಾಮಲಾದೇವಿ ನಟ ಪ್ರಭಾಸ್ ಮದುವೆಯ ಸ್ಪಷ್ಟತೆ ನೀಡಿದ್ದಾರೆ. ಈ ಹಿಂದೆ ಹಲವು ಬಾರಿ ಪ್ರಭಾಸ್ ಮದುವೆಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದ ಅವರು, ಈ ಬಾರಿ ಪ್ರಭಾಸ್ ಮದುವೆಯ ದಿನಾಂಕವನ್ನು ಖಚಿತಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಟಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಪ್ರಭಾಸ್, 40 ವರ್ಷ ಕಳೆದರೂ ಇನ್ನೂ ಮದುವೆಯಾಗಿಲ್ಲ, ಮದುವೆ ಬಗ್ಗೆ ಕೇಳಿದಾಗ ಏನೇನೋ ಹೇಳಿ ಮಾತು ಮರೆಸುತ್ತಿದ್ದರು. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಅಸಮಾಧಾನವನ್ನು ತಂದಿದೆ.  ಕೃಷ್ಣಂರಾಜ್‌ ಅವರು ಬದುಕಿದ್ದಾಗಲೇ ಪ್ರಭಾಸ್ ಮದುವೆಯಾಗಲು ಬಯಸಿದ್ದರು. ಆದರೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಅದು ಆಗಲಿಲ್ಲ. ಅವರ ಉಪಸ್ಥಿತಿಯಲ್ಲಿ ಪ್ರಭಾಸ್ ಮದುವೆಯಾದರೆ ಒಳ್ಳೆಯದು ಎಂದು ಅಭಿಮಾನಿಗಳೆಲ್ಲ ಭಾವಿಸಿದ್ದರು. ಆದರೆ ಅವರು ಅನಾರೋಗ್ಯದಿಂದ ನಿಧನರಾದರು. 


ಇದನ್ನೂ ಓದಿ : ಅತ್ಯಾಚಾರದ ದೃಶ್ಯಕ್ಕೆ 'ಸೆಕ್ಸ್ ಸೀನ್' ಅಂತ ಹೆಸರಿಟ್ಟ ನೆಟಿಜನ್ಸ್‌ : ನಿಮ್ಗೂ ಅಕ್ಕ-ತಂಗಿ ಇರ್ತಾರೆ ಎಂದ ನಟಿ..!


ಇತ್ತೀಚಿಗೆ ಪ್ರಭಾಸ್ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಂಡು ತನ್ನ ತಂಗಿಯರ ಮದುವೆಯ ನಂತರ ತಾವು ಮದುವೆಯಾಗುವುದಾಗಿ ಹೇಳಿದ್ದರು ಎಂಬ ವರದಿಗಳಿವೆ. ಇದೀಗ ಶ್ಯಾಮಲಾ ದೇವಿ ಮತ್ತೊಮ್ಮೆ ಪ್ರಭಾಸ್ ಮದುವೆ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನವರಾತ್ರಿಯ ಪ್ರಯುಕ್ತ ಪ್ರಭಾಸ್ ಅವರ ದೊಡ್ಡಮ್ಮ ಕೃಷ್ಣಂರಾಜ್ ಅವರ ಪತ್ನಿ ಶ್ಯಾಮಲಾದೇವಿ ವಿಜಯವಾಡ ದುರ್ಗಮ್ಮ ದೇಗುಲಕ್ಕೆ ಬಂದಿದ್ದರು. ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಪ್ರಭಾಸ್ ಮದುವೆ ವಿಚಾರ ಪ್ರಸ್ತಾಪವಾಗಿತ್ತು.


ಇದಕ್ಕೆ ಉತ್ತರಿಸಿದ ಶ್ಯಾಮಲಾ ದೇವಿ, ದುರ್ಗಮ್ಮನ ಆಶೀರ್ವಾದದಿಂದ ಪ್ರಭಾಸ್ ಮದುವೆ ಶೀಘ್ರದಲ್ಲೇ ನಡೆಯಲಿದೆ. ಆದರೆ ಹುಡುಗಿ ಯಾರು? ಮದುವೆಯ ದಿನಾಂಕವನ್ನು ನಾನು ಹೇಳುವುದಿಲ್ಲ. ಆದರೆ ಶೀಘ್ರದಲ್ಲೇ ನಮ್ಮ ಮನೆಯಲ್ಲಿ ಮಂಗಳಕರ ಕಾರ್ಯ ನಡೆಯಲಿದೆ. ಮುಂದಿನ ದಸರಾ ವೇಳೆಗೆ ಪ್ರಭಾಸ್ ಖಂಡಿತವಾಗಿಯೂ ಸಂಸಾರಸ್ಥರಾಗುತ್ತಾರೆ ಎಂದು ಹೇಳಿದ್ದಾರೆ. ಸಧ್ಯ ಶ್ಯಾಮಲಾದೇವಿಯವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


ಇದನ್ನೂ ಓದಿ :  ದೊಡ್ಮನೆಯಲ್ಲಿ ʼಪ್ರೀತಿ-ಸ್ನೇಹʼ ಸಮರ..! ವಿನಯ್ Vs ಸಂಗೀತ, ಕಾರ್ತಿಕ್ ಬೆಂಬಲ ಯಾರಿಗೆ..?


ಸಧ್ಯ ಪ್ರಶಾಂತ್ ನೀಲ್ ನಿರ್ದೇಶನದ ಪ್ರಭಾಸ್‌ ನಟನೆಯ 'ಸಾಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಕಂಪ್ಲೀಟ್ ಆ್ಯಕ್ಷನ್ ಎಂಟರ್‌ಟೈನರ್ ಈ ಸಿನಿಮಾ ಡಿಸೆಂಬರ್ 22 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಲಾರ್ ಜೊತೆ ಪ್ರಭಾಸ್ ಅಭಿನಯದ ಕಲ್ಕಿ ಮತ್ತು ಮಾರುತಿ ನಿರ್ದೇಶನದ ಚಿತ್ರವೂ ಸಹ ಶೂಟಿಂಗ್ ಹಂತದಲ್ಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.