ಬೆಂಗಳೂರು : ಕನ್ನಡ ಬಿಗ್‌ಬಾಸ್‌ ಸೀಸನ್‌  6ರಲ್ಲಿ ಫಸ್ಟ್‌ ರನ್ನರ್‌ ಆಗಿ ಹೊರಹೊಮ್ಮಿದ ಗಾಯಕ ನವೀನ್‌ ಸಜ್ಜು ತಮ್ಮ ವಿಭಿನ್ನ ಗಾನ ಶಕ್ತಿಯಿಂದ ಸಾಕಷ್ಟು ಹಾಡುಗಳಿಗೆ ಕಂಠ ನೀಡಿ.. ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲು ಜನಪದ ಹಾಡುಗಳನ್ನು ನವೀನ್‌ ಸಜ್ಜು ಅವ್ರ ಕಂಠದಲ್ಲಿ ಕೇಳುವ ಮಜಾನೇ ಬೇರೆ. ಮೂಲತಃ ಮೈಸೂರು ಭಾಗದವರಾದ ನವೀನ್‌ ಸಜ್ಜು ಸದ್ಯ ಮೈಸೂರಿನಲ್ಲಿಯೆ ಹೊಸ ಮನೆಯೊಂದನ್ನ ಖರಿದೀ ಮಾಡಿದ್ದಾರೆ. ನಿನ್ನೆ ನವೀನ್‌ ಅವ್ರ ಹೊಸ ಮನೆಯ ಗೃಹಪ್ರವೇಶ ಅದ್ದೂರಿಯಾಗಿ ನೆಡೆದಿದ್ದು ಕುಟುಂಬದವ್ರು ಸ್ನೇಹಿತರು ಹಾಗೂ ಇಂಡಸ್ಟ್ರಿಯ ಕೆಲವು ಸ್ನೇಹಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನೂ ನವೀನ್‌ ಅವ್ರಿಗೆ ತನ್ನದೆ ಆದ ಅಭಿಮಾನಿ ಬಳಗವಿದ್ದು ಸಾಕಷ್ಟು ಅಭಿಮಾನಿಗಳು  ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ. ನವೀನ್‌ ಸಜ್ಜು ಅವ್ರ ಹೊಸ ಮನೆಗೆ ಬಿಗ್‌ಬಾಸ್‌ ಖ್ಯಾತಿಯ ಅಕ್ಷತಾ ಪಾಂಡವ್‌ಪುರ ಭೇಟಿ ನೀಡಿ ಶುಭಾಶಯ ಕೋರಿ, ನವೀನ್ ಜೊತೆಗಿರುವ ಮನೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು, ಮೈಸೂರಿನಲ್ಲಿ ನವೀನನ ಮನೆಯ ಓಪನಿಂಗ್ ಇತ್ತು ಚಂದದ ಮನೆ ಮುಂದಿನ ಎಲ್ಲಾ ದಿನಗಳು ಹೀಗೆ ಮನೆಯಷ್ಟೇ ಚಂದವಾಗಿರಲಿ ನವೀನ್ ಗೆ ಸಜ್ಜು ಒಳ್ಳೆದಾಗಲಿ ಎಂದು ಬರೆದುಕೊಂಡಿದ್ದಾರೆ. 


ಇದನ್ನೂ ಓದಿ : ನಾಗಚೈತನ್ಯ ಜೊತೆಗಿನ ಬ್ರೇಕಪ್‌ ಬಳಿಕ ಗುಡ್‌ನ್ಯೂಸ್‌ ಕೊಟ್ಟ ಸಮಂತಾ!


ನವೀನ್‌ ಹಾಗೂ ಅಕ್ಷತಾ ಅವ್ರು ಬಿಗ್‌ಬಾಸ್‌ ನಿಂದಲೂ ಆತ್ಮಿಯ ಸ್ನೇಹಿತರು.. ಅವ್ರ ಸ್ನೇಹ ಬಿಗ್‌ಬಾಸ್‌ ನಂತರವು ಮುಂದುವರೆದಿದ್ದು.. ಹೀಗೇ ವಿಶೇಷ ಸಂದರ್ಭಗಳಲ್ಲಿ ಭೇಟಿಯಾಗ್ತಾನೆ ಇರ್ತಾರೆ.. ಇತ್ತಿಚೆಗೆ ಅಕ್ಷತಾ ಅವ್ರ ಮಗುವಿನ ಹುಟ್ಟು ಹಬ್ಬಕ್ಕೆ ನವೀನ್‌ ಭೇಟಿ ನೀಡಿದ್ದರು.


[[{"fid":"245882","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇನ್ನೂ ಮತ್ತೊಂದು ವಿಚಾರ ಅಂದ್ರೆ ನವೀನ್‌ ಸಜ್ಜು ಅವ್ರು ತಮ್ಮ ಅದ್ದೂರಿ ಮನೆಗೆ ಮಾನಸು ಎಂಬ ಹೆಸರಿಟ್ಟಿದ್ದಾರೆ. ಮಾನಸು ಎಂದ್ರೆ ಏನು ಅನ್ನು ಪ್ರಶ್ನೆ ಜೊತೆಗೆ ಕುತೂಹಲ ನಿಮಗೆ ಮೂಡೊದು ಸಹಜ.. ಈ ಬಗ್ಗೆ ನವೀನ್‌ ಸಜ್ಜು ಅವ್ರು ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡ್ತಾ.. ಮಾನಸು ಅಂದ್ರೆ ʻಮಾʼಮಾದೇಗೌಡ, ʻನʼ ಅಂದ್ರೆ ನವೀನ್‌ ಹಾಗೂ ʻಸುʼಅಂದ್ರೆ ಸುಮಿತ್ರ.. ತಂದೆ ತಾಯಿ ಹಾಗೂ ತನ್ನ ಹೆಸರಿನ ಮೊದಲ ಅಕ್ಷರವನ್ನು ತೆಗೆದು ಜೋಡಿಸಿ ಮನೆಗೆ ಆ ಹೆಸರನ್ನು ಇಡಲಾಗಿದೆ. ಮನೆ ಖರೀದಿ ಮಾಡಬೇಕು ಎಂಬುವುದು ಬಹಳ ದಿನದ ಕನಸು ಸದ್ಯ ಆ ಕನಸು ಈಡೇರಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.. 


ಇನ್ನೂ ನವೀನ್‌ ಅವ್ರು ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇತ್ತೀಚೆಗಷ್ಟೆ ನವೀನ್‌ ಸಜ್ಜು ಅವ್ರು ಪವರ್‌ ಸ್ಟಾರ್‌ ಪುನಿತ್‌ ರಾಜ್‌ಕುಮಾರ್‌ ಕುರಿತು ದೊಡ್ಮನೆ ದೊರೆಯೇ ಎಂಬ ಹಾಡೊಂದನ್ನ ಹಾಡಿದ್ದರು...  ಈ ಹಾಡನ್ನು ‘ಜೇಮ್ಸ್‌’ಸಿನಿಮಾದ ನಿರ್ದೇಶಕ ಚೇತನ್‌ ಕುಮಾರ್‌ ಬರೆದಿದ್ದರು.. ಹಾಡಿಗೆ ನವೀನ್‌ ಸಜ್ಜು ಅವರೇ ಸ್ವತಃ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು ಹಾಗೂ ವಿಭಿನ್ನವಾದ ಕಾನ್ಸೆಪ್ಟ್‌ ವಿಡಿಯೋವನ್ನು ಕೂಡಾ ಮಾಡಿದ್ದರು.. ಆ ಹಾಡು ಬಿಡುಗಡೆಯಾಗಿ ಸಖತ್‌ ವೈರಲ್‌ ಆಗಿತ್ತು.. ಪ್ರತಿಯೊಬ್ಬರೂ ಕೂಡಾ ಆ ಹಾಡನ್ನು ಕೇಳಿ ಭಾವುರಾಗಿದ್ದರು.


ಇದನ್ನೂ ಓದಿ : ವಿಕ್ರಾಂತ್ ರೋಣ ಚಿತ್ರದ ಇಂಗ್ಲಿಷ್ ಟ್ರೈಲರ್‌ಗೆ ಹಾಲಿವುಡ್ ಅಭಿಮಾನಿ ಬಳಗವೂ ಫಿದಾ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.