Viral video : ನಡೆದೇ ಹೋಯಿತಾ ಗಾಯಕ ರಾಹುಲ್ ವೈದ್ಯ, ದಿಶಾ ಪರ್ಮಾರ್ ವಿವಾಹ ..!
ದಿಶಾ ಪರ್ಮಾರ್ ಮತ್ತು ರಾಹುಲ್ ವೈದ್ಯ ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ವಧು ವರರ ಅಲಂಕಾರದಲ್ಲಿರುವುದು ಕಾಣುತ್ತದೆ.
ನವದೆಹಲಿ : ಹಿಂದಿ ಬಿಗ್ ಬಾಸ್ ನ (Biggboss) ಈ ಸೀಜನ್ ನಲ್ಲಿ ಸಿಂಗರ್ ರಾಹುಲ್ ವೈದ್ಯ (Rahul Vaidya) ಮತ್ತು ಅವರ ಗೆಳತಿ ದಿಶಾ ಪರ್ಮಾರ್ (Disha Parmar)ಪ್ರೀತಿಯ ವಿಷಯ ಬಹಳ ಚರ್ಚೆಗೆ ಗ್ರಾಸವಾಗಿತ್ತು. ರಾಹುಲ್ ವೈದ್ಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಟಿವಿ ಮೂಲಕವೇ ದಿಶಾ ಪರ್ಮರ್‌ಗೆ ತಮ್ಮ ಮನದ ಮಾತನ್ನು ಹೇಳಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆಯೇ ವಿವಾಹವಾಗಲು ಇಬ್ಬರೂ ನಿರ್ಧರಿಸಿದ್ದರು.
ಇದೀಗ ದಿಶಾ ಪರ್ಮಾರ್ ಮತ್ತು ರಾಹುಲ್ ವೈದ್ಯ (Rahul Vaidya) ಅವರ ಫೋಟೋ ಮತ್ತು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ವಧು ವರರ ಅಲಂಕಾರದಲ್ಲಿರುವುದು ಕಾಣುತ್ತದೆ. ರಾಹುಲ್ ವೈದ್ಯ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ (Social Media) ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ 'ನ್ಯೂ ಬಿಗಿನಿಂಗ್' ಎಂದು ಕೂಡಾ ಬರೆದಿದ್ದಾರೆ.
ಇದನ್ನೂ ಓದಿ : Janhvi Kapoor Hot Photos: 'ಬಿಕಿನಿ ಫೋಟೋ ಶೇರ್' ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!
ಇನ್ನು ವೈರಲ್ ಆಗುತ್ತಿರುವ ವೀಡಿಯೊದಲ್ಲಿ (Viral Video) ಎರಡೂ ಒಟ್ಟಿಗೆ ಕಂಡುಬರುತ್ತಾರೆ. ಇಬ್ಬರು ಕೈ ಕೈ ಹಿಡಿದು ಹೆಜ್ಜೆ ಹಾಕುತ್ತಿರುವುದು ಕಾಣುತ್ತದೆ. ಈ ವೀಡಿಯೊ ದಲ್ಲಿ ದಿಶಾ ಪರ್ಮಾರ್ ಗಾಢ ಗುಲಾಬಿ ಬಣ್ಣದ ಲೆಹೆಂಗಾ ಮತ್ತು ರಾಹುಲ್ ಆಫ್ ವೈಟ್ ಬಣ್ಣದ ಶೆರ್ವಾನಿ ಧರಿಸಿದ್ದಾರೆ. ಇನ್ನು ಈ ವೀಡಿಯೊದಲ್ಲಿ ರಾಹುಲ್ , ದಿಶಾ ಗೆಳೆಯರಾದ ಅಲಿ ಗೋನಿ ಮತ್ತು ಜಾಸ್ಮಿನ್ ಭಾಸಿನ್ ಕೂಡ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ರಾಹುಲ್ ವೈದ್ಯ ಮತ್ತು ದಿಶಾ ಪರ್ಮಾರ್ ಅವರ ಹೊಸ ಮ್ಯೂಸಿಕ್ ವಿಡಿಯೋ (Music Video) ಹೊರ ಬರಲಿದೆ. ಇದು ಅದೇ ವೀಡಿಯೊದ ತುಣುಕುಗಳು ಎನ್ನಲಾಗಿದೆ. ಈ ವೀಡಿಯೊ ನೋಡಿದ ರಾಹುಲ್ ದಿಶಾ ಅಭಿಮಾನಿಗಳು ಶೀಘ್ರ ಇವರಿಬ್ಬರ ಮದುವೆಯಾಗಲಿ ಎಂದು ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ವೈವಾಹಿಕ ವಿವಾದ ; ಆತ್ಮಹತ್ಯೆಗೆ ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕೊಟ್ಟೂರು ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.