ನವದೆಹಲಿ: ಇತ್ತೀಚಿಗೆ ಹಿಂದಿ ಭಾಷಾ ವಿಚಾರವಾಗಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ನಡೆದ ಟ್ವಿಟ್ಟರ್ ಸಮರದ ಬೆನ್ನಲ್ಲೇ ಈಗ ಹಿನ್ನಲೆ ಗಾಯಕ ಸೋನು ನಿಗಮ್ ಭಾಷೆಯ ವಿಚಾರದಲ್ಲಿ ಯಾರ ಮೇಲೂ ಒತ್ತಡ ಹೇರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸುದೀಪ್ ಅವರ ಬೆಂಬಲಕ್ಕೆ ಧಾವಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಫ್‌ಐಸಿಸಿಐ ಫ್ಲೋ ಸಮಾರಂಭದಲ್ಲಿ ಮಾತನಾಡುತ್ತಾ, ಜನರು ಈಗಾಗಲೇ ದೇಶಾದ್ಯಂತ ವಿವಿಧ ರೀತಿಯಲ್ಲಿ ವಿಭಜನೆಯಾಗಿದ್ದಾರೆ, ಆದ್ದರಿಂದ ಇಂತಹ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಬೆಂಕಿಗೆ ಇನ್ನಷ್ಟು ಇಂಧನವನ್ನು ಸೇರಿಸುವುದು ಅರ್ಥಹಿನವಾಗಿದೆ ಮತ್ತು ಇದು ದೇಶದ ಸಮಗ್ರತೆಯನ್ನು ಹದಗೆಡಿಸಿ ಸಮಾಜವನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದರು.


ಇದನ್ನೂ ಓದಿ: ಹಿಂದಿ ದಾಷ್ಟ್ಯ ಮೆರೆಯುವ ಬಾಲಿವುಡ್ ಗೆ ರಾಮ್ ಗೋಪಾಲ್ ವರ್ಮಾ ಹಾಕಿದ ಸವಾಲೇನು ಗೊತ್ತೇ?


'ಭಾರತೀಯ ಸಂವಿಧಾನದ ತಜ್ಞರ ಮೂಲಕ ನನಗೆ ತಿಳಿದಿರುವಂತೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಪರಿಗಣಿಸುವುದಿಲ್ಲ, ಮತ್ತು ಸಂವಿಧಾನದಲ್ಲಿ ರಾಷ್ಟ್ರೀಯ ಭಾಷೆ ಎಂದು ಎಲ್ಲಿಯೂ ಬರೆದಿಲ್ಲ, ಅದು ಹೆಚ್ಚು ಮಾತನಾಡುವ ಭಾಷೆಯಾಗಿರಬಹುದು, ಆದರೆ ಅದು ರಾಷ್ಟ್ರಭಾಷೆಯಲ್ಲ, ವಾಸ್ತವವಾಗಿ, ತಮಿಳು ಅತ್ಯಂತ ಹಳೆಯ ಭಾಷೆ.ಈ ವಿಚಾರವಾಗಿ ಸಂಸ್ಕೃತ ಮತ್ತು ತಮಿಳು ನಡುವೆ ಚರ್ಚೆ ಇದೆ.ಆದರೆ, ಇಡೀ ಪ್ರಪಂಚದಲ್ಲಿ ತಮಿಳು ಅತ್ಯಂತ ಹಳೆಯ ಭಾಷೆ ಎಂದು ಜನರು ಹೇಳುತ್ತಾರೆ' ಎಂದು ಸೋನು ನಿಗಮ್ ಹೇಳಿದರು.


'ಕಿಚ್ಚ ಸುದೀಪ್ ಹೇಳಿದ್ದರಲ್ಲಿ ತಪ್ಪಿಲ್ಲ, ಆದರೆ ಸಂಸ್ಕೃತ ರಾಷ್ಟ್ರ ಭಾಷೆಯಾಗಲಿ'


ದೇಶವು ಈಗಾಗಲೇ ಇತರ ರಾಷ್ಟ್ರಗಳೊಂದಿಗೆ ಪರಿಹರಿಸಬೇಕಾದ ಸಾಕಷ್ಟು ಸಮಸ್ಯೆಗಳಿಂದ ತತ್ತರಿಸುತ್ತಿದೆ ಮತ್ತು ದೇಶದೊಳಗೆ ಹೊಸ ಸಮಸ್ಯೆಯನ್ನು ಪ್ರಾರಂಭಿಸುವುದು ಜನರು ಈಗಾಗಲೇ ಇರುವ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಸೋನು ನಿಗಮ್ ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.