Vani Jayaram Death : ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಅವರು ಶನಿವಾರ, ಫೆಬ್ರವರಿ 4 ರಂದು ಮನೆಯಲ್ಲಿ ಶವವಾಗಿ ಪತ್ತೆಯಾದ ನಂತರ ತಮಿಳುನಾಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ. 2018 ರಲ್ಲಿ ಪತಿ ಜಯರಾಮ್ ನಿಧನರಾದ ನಂತರ ವಾಣಿ ಜಯರಾಮ್ ಚೆನ್ನೈನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. 


COMMERCIAL BREAK
SCROLL TO CONTINUE READING

ಅವರ ನಿವಾಸದಲ್ಲಿ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಮನೆಗೆಲಸದಾಕೆ ಬೆಳಿಗ್ಗೆ 11 ಗಂಟೆಗೆ ಮನೆಗೆ ಬಂದರು ಮತ್ತು ಪದೇ ಪದೇ ಬೆಲ್ ಬಾರಿಸಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಆಕೆ ವಾಣಿ ಜಯರಾಮ್‌ ಅವರ ಸಹೋದರಿ ಉಮಾ ಅವರಿಗೆ ತಿಳಿಸಿದರು. ಬಳಿಕ ಇಬ್ಬರೂ ನಕಲಿ ಕೀಯಿಂದ ಬೀಗ ತೆಗೆದು ಮನೆ ಒಳಗೆ ಹೋಗಿದ್ದಾರೆ. ಆಗ ಮಲಗುವ ಕೋಣೆಯಲ್ಲಿ ವಾಣಿ ಜಯರಾಮ್‌ ಅವರ ಶವ ಪತ್ತೆಯಾಗಿದೆ. ಈ ವೇಳೆ ಅವರ ಹಣೆಯ ಮೇಲೆ ಗಾಯದ ಗುರುತುಗಳಿದ್ದವು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಕಿಲ್ಪಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.


ಇದನ್ನೂ ಓದಿ : Pawan Kalyan: ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು.. ಆತ್ಮಹತ್ಯೆಗೆ ಯತ್ನಿಸಿದ್ದರಂತೆ.!


ತಮಿಳುನಾಡು ಪೊಲೀಸರ ವಿಧಿವಿಜ್ಞಾನ ತಂಡ ವಾಣಿ ಜಯರಾಂ ಅವರ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದೆ. ಡಿಸಿಪಿ ಶೇಖರ್ ದೇಶಮುಖ್, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಮತ್ತು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ವಿವರಗಳನ್ನು ತಿಳಿಯಲಾಗುವುದು ಎಂದು ಹೇಳಿದರು.


ಇದೀಗ ವಾಣಿ ಅವರ ನಿಧನದ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಸ್ಥಳೀಯ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಗೆಲಸದವಳು, "ನಾನು ಇಂದು ಕಾಲಿಂಗ್‌ ಬೆಲ್ ಬಾರಿಸಿದಾಗ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ‌ ಅವರ ಸೋದರಿ ಜೊತೆ ಒಳಗೆ ಹೋದಾಗ, ಮುಖದ ಮೇಲೆ ಗಂಭೀರವಾದ ಗಾಯಗಳನ್ನು ಕಂಡೆವು. ನಾವು ತಕ್ಷಣ ಪೊಲೀಸರನ್ನು ಸಂಪರ್ಕಿಸಿದೆವು" ಎಂದಿದ್ದಾರೆ. 


ಇದನ್ನೂ ಓದಿ : Vani Jayaram passed away : ಜನಪ್ರಿಯ ಗಾಯಕಿ ವಾಣಿ ಜಯರಾಮ್ ನಿಧನ


ಈ ಹೇಳಿಕೆಯನ್ನು ಬಳಸಿಕೊಂಡು ಪೊಲೀಸರು ನಿಗೂಢ ಸಾವಿನ ಪ್ರಕರಣ ದಾಖಲಿಸಿದ್ದಾರೆ. ಸದ್ಯ ವಿಧಿವಿಜ್ಞಾನ ತಜ್ಞರು ವಾಣಿ ಜಯರಾಮ್ ಅವರ ನಿವಾಸದಲ್ಲಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಬೇಕು ಎಂದು ನಿರ್ಧರಿಸಲಾಗಿದ್ದು, ಚೆನ್ನೈನ ಓಮಂದೂರಾರ್ ಆಸ್ಪತ್ರೆಯಲ್ಲಿ ಅದೇ ರೀತಿ ನಡೆಯುತ್ತಿದೆ ಮತ್ತು ಪೂರ್ಣಗೊಂಡ ನಂತರ ಪ್ರಕರಣದಲ್ಲಿ ಮುನ್ನಡೆ ಸಿಗಬಹುದು. ಸಾವಿನ ಸ್ವರೂಪದ ಬಗ್ಗೆ ಈಗ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಹೆಚ್ಚಿನ ತನಿಖೆಯ ಬಳಿಕವೇ ನಿಜವಾಗಿ ಏನಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.