Vani Jayaram passed away : ಜನಪ್ರಿಯ ಗಾಯಕಿ ವಾಣಿ ಜಯರಾಮ್ ನಿಧನ

Chennai : ಜನಪ್ರಿಯ ಗಾಯಕಿ ವಾಣಿ ಜಯರಾಮ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Written by - Channabasava A Kashinakunti | Last Updated : Feb 4, 2023, 03:17 PM IST
  • ಜನಪ್ರಿಯ ಗಾಯಕಿ ವಾಣಿ ಜಯರಾಮ್ ನಿಧನ
  • ಇವರಿಗೆ 78 ವರ್ಷ ವಯಸ್ಸಾಗಿತ್ತು
  • ಸುಮಾರು ಹತ್ತು ಸಾವಿರ ಹಾಡುಗಳನ್ನು ಹಾಡಿದ್ದಾರೆ
Vani Jayaram passed away : ಜನಪ್ರಿಯ ಗಾಯಕಿ ವಾಣಿ ಜಯರಾಮ್ ನಿಧನ title=

Chennai : ಜನಪ್ರಿಯ ಗಾಯಕಿ ವಾಣಿ ಜಯರಾಮ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರಿಗೆ 78 ವರ್ಷ ವಯಸ್ಸಾಗಿತ್ತು. ಇವರು ಇತ್ತೀಚೆಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಗಾಯಕಿ ವಾಣಿ ಜಯರಾಮ್ ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬೆಂಗಾಲಿ, ಭೋಜ್‌ಪುರಿ, ತುಳು ಮತ್ತು ಒರಿಯಾ ಭಾಷೆಗಳು ಸೇರಿ ಸುಮಾರು ಹತ್ತು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅವರು ದೇಶ ಮತ್ತು ಪ್ರಪಂಚದಾದ್ಯಂತ ಪ್ರದರ್ಶನ ನೀಡಿದ್ದಾರೆ. ಅವರು ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರು ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ಒಡಿಶಾದಿಂದ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ವಾಣಿ ಜಯರಾಮ್ ಇತ್ತೀಚೆಗೆ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದಾರೆ. ಅವರು ಎಂಎಸ್ ಇಳಯರಾಜ, ಆರ್‌ಡಿ ಬರ್ಮನ್, ಕೆವಿ ಮಹದೇವನ್, ಒಪಿ ನಯ್ಯರ್ ಮತ್ತು ಮದನ್ ಮೋಹನ್ ಸೇರಿದಂತೆ ಇತರ ಪ್ರಸಿದ್ಧ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News