Pawan Kalyan: ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು.. ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೂಪರ್‌ ಸ್ಟಾರ್‌!

Unstoppable With NBK 2: ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಸಂಚಿಕೆ ಹೊರಬಂದಿದೆ. ಪವನ್ ಕಲ್ಯಾಣ್ ಮೊದಲ ಬಾರಿಗೆ ಚಾಟ್ ಶೋನಲ್ಲಿ ಭಾಗವಹಿಸಿದರು ಮತ್ತು ಅವರ ವೈಯಕ್ತಿಕ ಜೀವನ, ನಟನೆ, ಖಿನ್ನತೆ ಮತ್ತು ಹೆಚ್ಚಿನವುಗಳ ಬಗ್ಗೆ ಸ್ಪಷ್ಟತೆಯನ್ನು ನೀಡಿದರು. 

Written by - Chetana Devarmani | Last Updated : Feb 5, 2023, 08:41 AM IST
  • ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು
  • ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೂಪರ್‌ ಸ್ಟಾರ್‌!
  • ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್
Pawan Kalyan: ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು.. ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೂಪರ್‌ ಸ್ಟಾರ್‌!  title=
pawan kalyan in nbk show

Pawan Kalyan in Unstoppable With NBK 2 : ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಸಂಚಿಕೆ ಹೊರಬಂದಿದೆ. ಪವನ್ ಕಲ್ಯಾಣ್ ಮೊದಲ ಬಾರಿಗೆ ಚಾಟ್ ಶೋನಲ್ಲಿ ಭಾಗವಹಿಸಿದರು ಮತ್ತು ಅವರ ವೈಯಕ್ತಿಕ ಜೀವನ, ನಟನೆ, ಖಿನ್ನತೆ ಮತ್ತು ಹೆಚ್ಚಿನವುಗಳ ಬಗ್ಗೆ ಸ್ಪಷ್ಟತೆಯನ್ನು ನೀಡಿದರು. ತಮ್ಮ ಮೂರು ಮದುವೆಗಳು ಮತ್ತು ಖಿನ್ನತೆಯ ವಿರುದ್ಧ ಹೋರಾಡಿದ ವಿಚಾರವಾಗಿ ಮಾತನಾಡುತ್ತಾ ಅವರು ಭಾವುಕರಾದರು. 

ಪವನ್ ಕಲ್ಯಾಣ್ ಅವರು ಬಾಲ್ಯದಿಂದಲೂ ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿದ್ದಾರೆ ಮತ್ತು ಖಿನ್ನತೆಗೆ ಜಾರುತ್ತಿರುವ ಬಗ್ಗೆ ಮಾತನಾಡಿದರು. ಟಾಲಿವುಡ್ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್ ‌ ಚಾಟ್‌ ಶೋನಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. "ನಾನು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೆ. ಅಣ್ಣ ಚಿರಂಜೀವಿ ಅವರ ಕೊಠಡಿಯಿಂದ ಪರವಾನಗಿ ಪಡೆದ ರಿವಾಲ್ವರ್ ಎತ್ತಿಕೊಂಡು ಬಂದಿದ್ದೆ" ಎಂದು ಈ ಚಾಟ್‌ ಶೋನಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ : Naguvina Hoogala Mele : ʼನಗುವಿನ ಹೂಗಳ ಮೇಲೆʼ ಮೊದಲ ಹಾಡು ರಿಲೀಸ್..! 

ಜನಸೇನಾ ಪಕ್ಷದ ಮುಖ್ಯಸ್ಥರಾಗಿರುವ ಪವನ್ ಕಲ್ಯಾಣ್‌, "ನಾನು ಮೂವರನ್ನೂ ಒಂದೇ ಬಾರಿಗೆ ಮದುವೆಯಾಗಲಿಲ್ಲ, ಕೆಲವು ಕಾರಣಗಳಿಂದ, ಮದುವೆ ಕಾರ್ಯರೂಪಕ್ಕೆ ಬರಲು ಸಾಧ್ಯವಾಗಲಿಲ್ಲ. ನಾವು ಬೇರ್ಪಟ್ಟಿದ್ದೇವೆ. ನಾನು ಒಮ್ಮೆಯೂ ಮದುವೆಯಾಗಲು ಉದ್ದೇಶಿಸಿರಲಿಲ್ಲ ಆದರೆ ಅದು ಸಂಭವಿಸಿದೆ. ವಿರೋಧ ಪಕ್ಷಗಳು ಆಗಾಗ್ಗೆ ಈ ವಿಚಾರವನ್ನು ಕೆದಕಿ ಮಾತನಾಡುತ್ತವೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಸಾಕಷ್ಟು ತಿಳಿದಿದೆ ಆದರೆ ನನ್ನ ನೈತಿಕತೆ ಮತ್ತು ಮೌಲ್ಯಗಳು ಇನ್ನೊಬ್ಬರ ಜೀವನದ ಬಗ್ಗೆ ಮಾತನಾಡಲು ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ. 

ಕಾರ್ಯಕ್ರಮದಲ್ಲಿ ನಿರೂಪಕ ನಂದಮೂರಿ ಬಾಲಕೃಷ್ಣ ಅವರು ಪವನ್ ಕಲ್ಯಾಣ್ ಈಗಲೂ ಅವರ ಮಾಜಿ ಪತ್ನಿಯರೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಿದಾಗ, ನಟ ಸಕಾರಾತ್ಮಕವಾಗಿ ಉತ್ತರಿಸಿದರು. ನಾನು ಅವರೊಂದಿಗೆ ಮಾತನಾಡುತ್ತೇನೆ ಮತ್ತು ಅವರ ಜೀವನದ ಬಗ್ಗೆ ತಿಳಿದಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಕಬ್ಜ ಸಿನಿಮಾದ ಟೈಟಲ್ ಟ್ರ್ಯಾಕ್ ಸಪ್ತಸಾಗರದಾಚೆ ಸೌಂಡ್ ಮಾಡೋದು ಪಕ್ಕಾ..!

ಪವನ್ ಕಲ್ಯಾಣ್ ಮೊದಲಿಗೆ 19 ವರ್ಷದ ನಂದಿನಿ ಎಂಬ ಯುವತಿಯೊಂದಿಗೆ ಅರೇಂಜ್ಡ್ ಮ್ಯಾರೇಜ್ ಆಗಿದ್ದರು. ನಂತರ, ಅವರು ನಟಿ ರೇಣು ದೇಸಾಯಿ ಅವರೊಂದಿಗೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದರು. ಅವರು 2008 ರಲ್ಲಿ ನಂದಿನಿಯಿಂದ ವಿಚ್ಛೇದನ ಪಡೆದು, 2009 ರಲ್ಲಿ ರೇಣು ದೇಸಾಯಿ ಅವರನ್ನು ವಿವಾಹವಾದರು. ದಂಪತಿಗೆ ಅಕಿರಾ ನಂದನ್ ಮತ್ತು ಆಧ್ಯ ಎಂಬ ಇಬ್ಬರು ಮಕ್ಕಳಿದ್ದರು. ನಂತರ 2012 ರಲ್ಲಿ ವಿಚ್ಛೇದನ ಪಡೆದರು. ಬಳಿಕ ಡಿಸೆಂಬರ್ 2013 ರಲ್ಲಿ ರಷ್ಯಾದ ಹುಡುಗಿ ಅನ್ನಾ ಲೆಜ್ನೆವಾ ಅವರನ್ನು ವಿವಾಹವಾದರು. ಈ ದಂಪತಿಗೂ ಇಬ್ಬರು ಮಕ್ಕಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News