Kannada film director Dorai Bhagavan : ಹಿರಿಯ ನಿರ್ದೇಶಕ ಎಸ್‌.ಕೆ. ಭಗವಾನ್‌ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ಪೂರ್ಣ ಹೆಸರು ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್. ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಿರ್ದೇಶಕರು ಹಾಗೂ ನಿರ್ಮಾಪಕರು ಭಗವಾನ್‌. ಮತ್ತೊಬ್ಬ ಹಿರಿಯ ನಿರ್ದೇಶಕ ದೊರೈರಾಜ್ ಅವರೊಡನೆ ಸೇರಿ ಇವರು ದೊರೈ ಭಗವಾನ್‌ ಎಂದೇ ಖ್ಯಾತಿ ಪಡೆದವರು. ದೊರೈ ಭಗವಾನ್ ಎಂದೇ ಪ್ರಸಿದ್ಧರಾಗಿದ್ದರು. 55 ಕನ್ನಡ ಚಿತ್ರಗಳನ್ನು ದೊರೈ ಭಗವಾನ್‌ ಜೋಡಿ ನಿರ್ದೇಶಿಸಿದ್ದಾರೆ. 24 ಕಾದಂಬರಿಗಳನ್ನು ಸಿನೆಮಾ ಮಾಡಿದ ಖ್ಯಾತಿ ಅವರದು. 


COMMERCIAL BREAK
SCROLL TO CONTINUE READING

933 ಜುಲೈ 3ರಂದು ತಮಿಳು ಬ್ರಾಹ್ಮಣ ಅಯ್ಯರ್ ಕುಟುಂಬದಲ್ಲಿ ಎಸ್.ಕೆ. ಭಗವಾನ್ ಜನಿಸಿದರು. ಬೆಂಗಳೂರು ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದರು, ಯುವಕರಾಗಿದ್ದಾಗ ’ಹಿರಣ್ಣಯ್ಯ ಮಿತ್ರ ಮಂಡಳಿ’ಯಲ್ಲಿ ನಾಟಕಗಳನ್ನು ಮಾಡುತ್ತ ಸಿನಿರಂಗದ ಒಲವು ಬೆಳೆಸಿಕೊಂಡರು. 1956 ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ತಮ್ಮ ಸಿನಿಮಾ ವೃತ್ತಿ ಜೀವನವನ್ನು ಆರಂಬಿಸಿದರು. 


ಇದನ್ನೂ ಓದಿ : SK Bhagavan : ಡಾ. ರಾಜ್‌ ಮೇಲೆ ಹಲ್ಲೆ ಬಳಿಕ 8 ವರ್ಷ ದೂರವಾಗಿದ್ದ ಭಗವಾನ್‌..!


ಎಂ.ಸಿ. ನರಸಿಂಹಮೂರ್ತಿಯರ ಜೊತೆಗೆ ಸಂಧ್ಯಾರಾಗ ಸಿನಿಮಾ ನಿರ್ದೇಶಿಸಿದರು. ಆ ಬಳಿಕ ದೊರೈ ಭಗವಾನ್ ಜೋಡಿ ರಾಜಕುಮಾರ್ ಅಭಿನಯಿಸಿದ ’ಜೇಡರ ಬಲೆ’ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿದರು. ಇದು ಕನ್ನಡದಲ್ಲಿ ಜೇಮ್ಸ್ ಬಾಂಡ್‌ ಮಾದರಿಯ ಮೊಟ್ಟ ಮೊದಲ ಸಿನಿಮಾ. ಹೀಗಾಗಿ ಕನ್ನಡದಲ್ಲಿ ಮೊಟ್ಟಮೊದಲ ಬಾಂಡ್ ಶೈಲಿ ಸಿನಿಮಾ ತಯಾರಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ. 


ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿ ಕನ್ಯೆ, ಆಪರೇಷನ್ ಡೈಮಂಡ್ ರಾಕೆಟ್ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ಬೆಳ್ಳಿತೆರೆಗೆ ತಂದರು. ಇವರು ನಿರ್ದೇಶಿಸಿರುವ 30 ಚಿತ್ರಗಳಲ್ಲಿ ಡಾ.ರಾಜಕುಮಾರ್ ನಾಯಕರಾಗಿ ಅಭಿನಯಿಸಿದ್ದಾರೆ. ಎಸ್.ಕೆ ಭಗವಾನ್ 65 ವರ್ಷದ ಸುದೀರ್ಘ ಸಿನಿಮಾ ರಂಗದ ಅನುಭವ ಹೊಂದ್ದ ದಿಗ್ಗಜರಾಗಿದ್ದರು. 


2017 ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಕಾಡಮಿ ಪ್ರಶಸ್ತಿ, 1995 - 96 ನೇ ಸಾಲಿನ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, 2010 ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿಗೆ ಭಗವಾನ್‌ ಭಾಜನರಾಗಿದ್ದಾರೆ. 


ಇದನ್ನೂ ಓದಿ : Guess Who: ಗುಂಗುರು ಕೂದಲಿನ ಈ ಮುದ್ದಾದ ಬಾಲಕಿ ಇಂದು ಬಾಲಿವುಡ್‌ನ 'ಕ್ವೀನ್'.!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.