Bigg Boss OTT: ಪತ್ನಿ ನೆನೆದು ಕಣ್ಣೀರಿಟ್ಟ ಸೋಮಣ್ಣ ಮಾಚಿಮಾಡ
ಪ್ರತಿನಿತ್ಯ ಕೆಲಸಕ್ಕೆ ಹೆಚ್ಚು ಸಮಯ ಮೀಸಲಿಟ್ಟು ನಾನು ನನ್ನ ವಯಕ್ತಿಕ ಬದುಕನ್ನು ಹಾಳು ಮಾಡಿಕೊಂಡೆ ಎಂದು ನಿರೂಪಕ ಸೋಮಣ್ಣ ಮಾಚಿಮಾಡ ಹೇಳಿದ್ದಾರೆ.
ಬೆಂಗಳೂರು: ಬಿಗ್ ಬಾಸ್… ದಿನೇ ದಿನೇ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿರೋ ಕನ್ನಡದ ರಿಯಾಲಿಟಿ ಶೋ. ಈ ಬಾರಿ ‘ಬಿಗ್ ಬಾಸ್’ ಮನೆಗೆ ಕಾಲಿಟ್ಟಿರುವ ಸ್ಪರ್ಧಿಗಳ ಆಯ್ಕೆ ಸರಿಯಿಲ್ಲವೆಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಅದರೆ ಈ ಶೋ ನೋಡದನ್ನು ಮಾತ್ರ ಮಿಸ್ ಮಾಡುತ್ತಿಲ್ಲ.
ದೊಡ್ಡ ಮನೆಯಲ್ಲಿ ನಿತ್ಯವೂ ಸಾಕಷ್ಟು ವಿಚಾರಗಳನ್ನು ಸ್ಪರ್ಧಿಗಳು ಹಂಚಿಕೊಳ್ಳುತ್ತಿದ್ದಾರೆ. ವೈಯಕ್ತಿಕ ವಿಚಾರಗಳಿಗೆ ಈ ಬಾರಿಯ ‘ಬಿಗ್ ಬಾಸ್’ ವೇದಿಕೆಯಾಗಿದ್ದೀಯಾ? ಅಂತಾ ಜನ ಮಾತನಾಡಿಕೊಳ್ಳುತ್ತಿದ್ದಾರೆ. 2ನೇ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಸೋನು ಶ್ರೀನಿವಾಸ ಗೌಡ ಈ ಶೋನಲ್ಲಿ ಇರಬಾರ್ದು ಅಂತಾ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Crazy Star: ‘ರವಿ ಬೋಪಣ್ಣ’ನಾಗಿ ಕಮಾಲ್ ಮಾಡಲು ಸಜ್ಜಾದ ಕ್ರೇಜಿ ಸ್ಟಾರ್ ರವಿಚಂದ್ರನ್!
ಪ್ರತಿಯೊಬ್ಬ ಕಂಟೆಸ್ಟೆಂಟ್ ಕೂಡ ತಮ್ಮ ಜೀವನದ ನೋವನ್ನು ಶೋನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ನಿರೂಪಕ ಸೋಮಣ್ಣ ಮಾಚಿಮಾಡ ತಮ್ಮ ಜೀವನದ ಕಹಿ ಸತ್ಯವನ್ನು ಹೊರಹಾಕಿದ್ದಾರೆ. ‘ಪ್ರತಿನಿತ್ಯ ಕೆಲಸಕ್ಕೆ ಹೆಚ್ಚು ಸಮಯ ಮೀಸಲಿಟ್ಟು ನಾನು ನನ್ನ ವಯಕ್ತಿಕ ಬದುಕನ್ನು ಹಾಳು ಮಾಡಿಕೊಂಡೆ. ನನ್ನ ಪತ್ನಿಯನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆ ನನ್ನನ್ನು ಬಿಟ್ಟು ಹೋದ ನೋವನ್ನು ಮರೆಯಲು ಸಾಧ್ಯವಿಲ್ಲ. ನನ್ನ ಪತ್ನಿಗೆ ನಾನು ಸಮಯವನ್ನೇ ಕೊಡಲಿಲ್ಲ. ಆ ನೋವು ನನಗೆ ನಿರಂತರವಾಗಿ ಕಾಡುತ್ತಿದೆ’ ಎಂದು ಹೇಳಿದ್ದಾರೆ.
‘ಬಿಗ್ ಬಾಸ್’ ಮನೆಗೆ ಬರೋವಾಗಲು ನಾನು ನನ್ನ ಪತ್ನಿ ಬಳಿ ಮಾತನಾಡಿ ಬಂದೆ. ಈಗ ನನಗೆ ನನ್ನ ಕೆಲಸ ಮಾತ್ರ ಉಳಿದುಕೊಂಡಿದೆ ಎಂದು ಸೋಮಣ್ಣ ಮಾಚಿಮಾಡ ಎಲ್ಲರ ಮುಂದೆ ಕಣ್ಣೀರು ಹಾಕಿದರು. ಈ ವೇಳೆ ಅವರಿಗೆ ಇನ್ನುಳಿದ ಸ್ಪರ್ಧಿಗಳು ಸಮಾಧಾನಪಡಿಸಿದರು. ಇದಲ್ಲದೇ ನಾವು ನಿಮ್ಮನ್ನು ಮತ್ತೇ ಒಂದು ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ ಮಾಚಿಮಾಡ ‘ದಯವಿಟ್ಟು.. ಅದು ಆಗ ಮಾತು’ ಅಂತಾ ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: BBK OTT : ರಾಕೇಶ್ - ರೂಪೇಶ್ ನಡುವೆ ನಿಜವಾಗ್ಲೂ ನಡೀತಾ ಕಿರಿಕ್!?
ಪ್ರತಿಯೊಬ್ಬರ ಬಾಳಿನಲ್ಲೂ ಸಾವಿರ ನೋವಿರುತ್ತದೆ. ನೋವಿಲ್ಲದ ಮನುಷ್ಯ ಈ ಭೂಮಿ ಮೇಲೆ ಯಾರು ಇಲ್ಲ ಬಿಡಿ. ಹೀಗೆ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ವಿಚಾರಗಳನ್ನು ಎಲ್ಲಾ ಸ್ಪರ್ಧಿಗಳು ಮುಚ್ಚುಮರೆ ಇಲ್ಲದೆ ಹಂಚಿಕೊಂಡಿದ್ದಾರೆ. ಪ್ರತಿದಿನ ಹೊಸ ವಿಚಾರಗಳಿಂದ ಕುತೂಹಲ ಮೂಡಿಸುತ್ತಿರುವ ‘ಬಿಗ್ ಬಾಸ್’ ಬಗ್ಗೆ ಜನರ ಅಷ್ಟೇ ಕುತೂಹಲ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಬೆಳವಣಿಗೆ ಮತ್ತು ಬದಲಾವಣೆಗೆ ‘ಬಿಗ್ ಬಾಸ್’ ಸಾಕ್ಷಿಯಾಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.