ಸದ್ಯ ಎಲ್ಲೆಲ್ಲೂ ಕೆಜಿಎಫ್​ 2 ದರ್ಬಾರ್​. ಕನ್ನಡ ಚಿತ್ರರಂಗದ ಹೆಮ್ಮೆ ಕೆಜಿಎಫ್​​ 2 ಸಿನಿಮಾದಲ್ಲಿ ಕೆಜಿಎಫ್‌1 ರಲ್ಲಿದ್ದ ಈ ನಾಲ್ಕು ಪಾತ್ರಗಳು ಮಾಯವಾಗಿವೆ. ಕೆಜಿಎಫ್​ ಚಾಪ್ಟರ್​​ 1 ಕನ್ನಡ ಸಿನಿಮಾದ ಗತ್ತನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿತ್ತು. ಕೆಜಿಎಫ್​ 2 ಸಿನಿಮಾ ಸ್ಯಾಂಡಲ್‌ವುಡ್‌ನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ಯಿತು. 


COMMERCIAL BREAK
SCROLL TO CONTINUE READING

ಕೆಜಿಎಫ್ 2 ಚಿತ್ರ ಈಗಾಗಲೇ ಬಿಡುಗಡೆ ಆಗಿ ವಿಶ್ವದ ಮೂಲೆ ಮೂಲೆಯಲ್ಲೂ ಅಬ್ಬರಿಸುತ್ತಿದೆ. ಅಲ್ಲದೇ ಬಾಕ್ಸ್​ ಆಫೀಸ್​ ನಲ್ಲಿ ಎಲ್ಲ ದಾಖಲೆಗಳನ್ನು ಧೂಳಿಪಟ ಮಾಡಿದೆ. ಕೆಜಿಎಫ್​ ಸಿನಿಮಾದ ಯಶಸ್ಸಿಗೆ ತಾರಾಗಣವೂ ಪ್ರಮುಖ ಪಾತ್ರ ವಹಿಸಿದೆ. ಪ್ರಶಾಂತ್‌ ನೀಲ್‌ ಅವರ ನಿರ್ದೇಶನಕ್ಕೆ ಪ್ರೇಕ್ಷಕ ಪ್ರಭು ಫುಲ್‌ ಫಿದಾ ಆಗಿದ್ದಾರೆ. 


ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ರನ್ನು ಅಮಿತಾಬ್ ಬಚ್ಚನ್ ಗೆ ಹೋಲಿಸಿದ ಬಾಲಿವುಡ್ ನಟಿ ಕಂಗನಾ ರನೌತ್


ನರಾಚಿಯೆಂಬ ನರಕದಲ್ಲಿಯೇ ಒಂದಕ್ಕಿಂತ ಒಂದು ಭಿನ್ನವಾದ ಪಾತ್ರಗಳ ಸೃಷ್ಟಿಯಾಗಿತ್ತು, ಅವುಗಳಲ್ಲಿ ಹಲವು ಪಾತ್ರಗಳು ಕೆಜಿಎಫ್ ಚಾಪ್ಟರ್‌ 2 ರಲ್ಲಿ ಮುಂದುವರೆದಿವೆ. ಆದರೆ, ಇನ್ನೂ ಕೆಲ ಪಾತ್ರಗಳು ಕೆಜಿಎಫ್​ 2 ನಿಂದ ಮಿಸ್​ ಆಗಿವೆ.


ಅನಂತ್​ ನಾಗ್ ಜಾಗಕ್ಕೆ ಪ್ರಕಾಶ್​ ರಾಜ್‌: ಕೆಜಿಎಫ್1 ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅನಂತ್‌ನಾಗ್  ಕೆಜಿಎಫ್ 2 ರಲ್ಲಿ ಮಿಸ್‌ ಆಗಿದ್ದಾರೆ. ಕೆಜಿಎಫ್‌ ಚಾಪ್ಟರ್‌ 1 ರಲ್ಲಿ ಆನಂದ್ ಇಂಗಳಗಿ ಪಾತ್ರದಲ್ಲಿ ಅನಂತ್​ ನಾಗ್​ ನಟಿಸಿದ್ದು,  ಪಾರ್ಟ್ 2ನಲ್ಲಿ ಈ ಪಾತ್ರದಲ್ಲಿ ಅನಂತ್​ ನಾಗ್  ಇಲ್ಲ. ಆದರೆ ಅವರ ಬದಲಾಗಿ ಆನಂದ್​ ಇಂಗಳಗಿ ಮಗನ ಪಾತ್ರದಲ್ಲಿ ಪ್ರಕಾಶ್​ ರಾಜ್‌ ನಟಿಸಿದ್ದಾರೆ.  


ಬಿ.ಸುರೇಶ್​ ಪಾತ್ರ ಮಿಸ್ಸಿಂಗ್: ಕೆಜಿಎಫ್​ 1ರಲ್ಲಿ ಮುಖ್ಯ ಪೋಷಕ ಪಾತ್ರದಲ್ಲಿ ನಟಿಸಿದ್ದ ಬಿ.ಸುರೇಶ್, ಕೆಜಿಎಫ್‌ ಚಾಪ್ಟರ್‌ ಎರಡರಲ್ಲಿ ಮಿಸ್‌ ಆಗಿದ್ದಾರೆ. ನರಾಚಿಯ ನರಕದಲ್ಲಿ ಜನರಿಗೆ ತಕ್ಕಮಟ್ಟಿಗೆ ಸಹಾಯ ಮಾಡುತ್ತಾ, ಮುಂದಾಳತ್ವ ವಹಿಸಿರುವ ವಿಠಲ್ ಪಾತ್ರದಲ್ಲಿ ಬಿ.ಸುರೇಶ್ ನಟಿಸಿದ್ದರು. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಬಿ ಸುರೇಶ್ ನಟಿಸಿಲ್ಲ. 


ಇದನ್ನೂ ಓದಿ: ಕೇವಲ ಮೂರು ದಿನಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ 419 ಕೋಟಿ ರೂ.ಗಳಿಸಿದ ಕೆಜಿಎಫ್ 2..!


ಕೆಜಿಎಫ್‌2 ನಲ್ಲಿ ಮಾಯವಾಯ್ತು ಕುಲಕರ್ಣಿ ಪಾತ್ರ: ಕೆಜಿಎಫ್ 1 ರಲ್ಲಿ ಸದಾ ಗರುಡನ ಜೊತೆ ಇರುತ್ತಿದ್ದ ಪಾತ್ರವೇ ಕುಲಕರ್ಣಿ. ಕೊನೆಗೆ ಗರುಡನ ಜೊತೆಯಾಗಿದ್ದುಕೊಂಡೆ ಅವನನ್ನು ಹೊಡೆಯಲು ಸ್ಕೆಚ್ ಹಾಕಿದ್ದ ತಂಡಕ್ಕೆ ಬೆಂಬಲ ನೀಡುತ್ತಿದ್ದ ಪಾತ್ರವೇ ಕುಲಕರ್ಣಿ. ಈ ಕುಲಕರ್ಣಿ ಪಾತ್ರದಲ್ಲಿ ಅಶ್ವತ್ಥ ನೀನಾಸಂ ಜೀವ ತುಂಬಿದ್ದರು. ಆದರೆ ಈ ಪಾತ್ರ ಸಹ 'ಕೆಜಿಎಫ್ 2' ಸಿನಿಮಾದಲ್ಲಿ ಇಲ್ಲ.  


ರಣ ಬೇಟೆಗಾರನ ಕತೆ ಹೇಳುವ ಹುಚ್ಚನ ಮಿಸ್ಸಿಂಗ್‌:  ಕೆಜಿಎಫ್‌1 ರಲ್ಲಿ ರಣಬೇಟೆಗಾರನ ಕತೆ ಹೇಳುವ ಹುಚ್ಚನ ಪಾತ್ರ ಕೆಜಿಎಫ್ 2 ಸಿನಿಮಾದಲ್ಲಿಲ್ಲ. ಈ ಹುಚ್ಚನ ಪಾತ್ರದಲ್ಲಿ ನಟಿಸಿದ್ದ ವ್ಯಕ್ತಿ ನಿಧನ ಹೊಂದಿದ ಕಾರಣ ಆ ಪಾತ್ರವನ್ನು ಮುಂದುವರೆಸಲು ನಿರ್ದೇಶಕರಿಂದ ಸಾಧ್ಯವಾಗಲಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.