ಮುಂಬೈ : ಬಾಲಿವುಡ್ ನಟ ಸೋನು ಸೂದ್ ಗೆ  ಕೊರೋನಾ ಪಾಸಿಟಿವ್ ಆಗಿದೆ. ಈ ಕುರಿತು ಇಂದು ತಮ್ಮ ಟ್ವಿಟರ್ ಮೂಲಕ ಮಾಹಿತಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಕಳೆದ ವರ್ಷ ಕರೋನಾದಿಂದಾದ ಲಾಕ್‌ಡೌನ್ ಸಂದರ್ಭದಲ್ಲಿ ಸೋನು ಸೂದ್(Sonu Sood) ವಲಸಿಗರಿಗೆ ತುಂಬಾ ಸಹಾಯ ಮಾಡಿದ್ದರು. ಮನಸ್ಥಿತಿ ಮತ್ತು ಮನೋಭಾವವು "ಸೂಪರ್ ಪಾಸಿಟಿವ್" ಎಂದು ಟ್ವಿಟರ್ ನಲ್ಲಿ ಬರೆದು   ಮಾಹಿತಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Tamil actor Vivek: ಎದೆನೋವಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ನಟ ವಿವೇಕ್ ನಿಧನ


ಟ್ವಿಟ್(Tweet) ನಲ್ಲಿ ಸೋನು  "ಕೋವಿಡ್ - ಪಾಸಿಟಿವ್. ಮೂಡ್ & ಸ್ಪಿರಿಟ್ - ಸೂಪರ್ ಪಾಸಿಟಿವ್. ಎಲ್ಲರಿಗೂ ನಮಸ್ಕಾರ, ನನಗೆ ಇಂದು ಬೆಳಿಗ್ಗೆ ಕೋವಿಡ್ ಪಾಸಿಟಿವ್ ಆಗಿದೆ.  ಮುನ್ನೆಚ್ಚರಿಕಾ ಕ್ರಮವಾಗಿ ನಾನು ಮನೆಯಲ್ಲಿ ಶೆಲ್ಫ್ ಕ್ವಾರಂಟೈನ್ ಆಗಿದ್ದೇನೆ. ನನ್ನ ಆರೋಗ್ಯದ ಬಗ್ಗೆ ನಾನು ಹೆಚ್ಚಿನ ಕಾಳಜಿಯನ್ನು ವಹಿಸಿದ್ದೇನೆ. ಆದರೆ, ನೀವು ಚಿಂತಿಸಬೇಡಿ ಇದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ನನಗೆ ಸಾಕಷ್ಟು ಸಮಯವನ್ನು ನೀಡುತ್ತದೆ ಎಂದು ನೆನಪಿರಲಿ ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಈ ವಾರದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಗೈರು...!


ಸೋನು ಸೂದ್ ಸುದ್ದಿ ಹಂಚಿಕೊಂಡ ಕೂಡಲೇ, ಅವರ ಅಭಿಮಾನಿಗಳು ಟ್ವಿಟ್ಟರ್(Twitter) ನಲ್ಲಿ ಕಾಮೆಂಟ್ ಗಳ ಸುರಿ ಮಳೆ ಸುರಿಸುತ್ತಿದ್ದಾರೆ. ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತಿದ್ದಾರೆ.


ಇದನ್ನೂ ಓದಿ: Big Boss 8: ಅನಾರೋಗ್ಯದಿಂದ ಬಳಲುತ್ತಿರುವ ಕಿಚ್ಚ ಸುದೀಪ್: ಈ ವಾರ BG ಮನೆಗೆ ಬೇರೆ ನಿರೂಪಕ?


"Get well soon v@SonuSood, ನಿಜವಾಗಿಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದರೆ  ಅದು ನಿಮ್ಮಿಂದಲೇ, ನಮ್ಮ ದೇಶಕ್ಕೆ ನಿಮ್ಮ ಅಗತ್ಯ ಹೆಚ್ಚಾಗಿದೆ. ಆ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ, ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.