Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ರಾಮ್ ಚರಣ್ ಹೊಸ ಸಿನಿಮಾ 'RC 15' ನಲ್ಲಿ ಕರ್ನಾಟಕದ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಜೋಡಿ

Last Updated : Apr 15, 2021, 02:28 PM IST
  • ರಾಮ್ ಚರಣ್ ಹೊಸ ಸಿನಿಮಾ 'RC 15' ನಲ್ಲಿ ಕರ್ನಾಟಕದ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಜೋಡಿ
  • ರಶ್ಮಿಕಾ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ
  • ಈ ಸಿನಿಮಾವನ್ನು ದಿಲ್ ರಾಜು ನಿರ್ಮಿಸುತ್ತಿದ್ದಾರೆ.
Rashmika Mandanna: 'RC 15' ಚಿತ್ರದಲ್ಲಿ ಪತ್ರಕರ್ತೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ಬೆಂಗಳೂರು: ತೆಲಗು ಸ್ಟಾರ್ ನಟ ರಾಮ್ ಚರಣ್ ಅವರ ಹೊಸ ಸಿನಿಮಾ 'RC 15' ನಲ್ಲಿ ಕರ್ನಾಟಕದ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವು ರಾಜಕೀಯ ಕಥೆ ಹೊಂದಿದೆ. ಆದ್ದರಿಂದ ರಶ್ಮಿಕಾ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಈ ಸಿನಿಮಾವನ್ನು ದಿಲ್ ರಾಜು(Duil Raju) ನಿರ್ಮಿಸುತ್ತಿದ್ದಾರೆ. ರಶ್ಮಿಕಾ ಪಾತ್ರದ ಸ್ಕೆಚ್ ಮತ್ತು ಶಂಕರ್ ಅವರ ನಿರೂಪಣೆಯ ಶೈಲಿಯಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ.

ಇದನ್ನೂ ಓದಿ : OMG! ಈ ವ್ಯಕ್ತಿ ನೋಡೋಕೆ ಸೇಮ್ ಸುಶಾಂತ್ ಸಿಂಗ್ ತರಾನೆ ಇದಾನೆ..!!

ದಿಲ್ ರಾಜು ನಿರ್ಮಿಸುತ್ತಿರುವ RC 15 ಚಿತ್ರವೂ ಜುಲೈನಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ರಾಮ್ ಚರಣ್(Ram Charan) ಐಎಎಸ್ ಅಧಿಕಾರಿಯಾಗಿ ಮತ್ತು ಮುಖ್ಯಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ವದಂತಿಗಳ ಪ್ರಕಾರ ನಿರ್ಮಾಪಕರು ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿದ್ದಾರೆ ಮತ್ತು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ ಎಂಬುದು ಇತ್ತೀಚಿನ ಸುದ್ದಿ. ಈ ಚಿತ್ರವು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ಈ ಚಿತ್ರವೂ 2022 ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : ಕುಂಭ ಮೇಳವನ್ನು ಕೊರೊನಾ ಅಣುಬಾಂಬ್ ಎಂದ ರಾಮ್ ಗೋಪಾಲ್ ವರ್ಮಾ

ರಶ್ಮಿಕಾ(Rashmika Mandanna) ಆರ್‌ಸಿ 15 ಅಲ್ಲದೆ, ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಮತ್ತು ಶರ್ವಾನಂದ್ ಅವರ ಫ್ಯಾಮಿಲಿ ಎಂಟರ್‌ಟೈನರ್ ಆಡವಲ್ಲು ಮೀಕು ಜೋಹಾರ್ಲು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ : Ramayan is Back: ಸಾರ್ವಜನಿಕರ ಒತ್ತಾಯದ ಮೇರೆಗೆ ಮತ್ತೆ TVಯಲ್ಲಿ ಮರು ಪ್ರಸಾರವಾಗಲಿದೆ 'ರಾಮಾಯಣ'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News