ಬೆಂಗಳೂರು: ಇಡೀ ಭಾರತದಲ್ಲಿಯೇ ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಬಿಟ್ಟರೆ ಅತಿ ಹೆಚ್ಚು ಜನಪ್ರಿಯವಾಗಿರುವುದೆಂದರೆ ಅದು ಕನ್ನಡದಲ್ಲಿ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್, ಆದರೆ ಈಗ ಈ ವಾರದ ಎಪಿಸೋಡ್ ನಲ್ಲಿ ಅವರು ಭಾಗವಹಿಸುತ್ತಿಲ್ಲ ಎನ್ನುವುದು ಎಲ್ಲಾ ಅಭಿಮಾನಿಗಳಿಗೆ ಅಚ್ಚರಿ ತರಿಸಿದೆ.
ಇದನ್ನೂ ಓದಿ: Kiccha sudeep: ತವರು ಜಿಲ್ಲೆಯಲ್ಲಿ ಗ್ರಾಮವೊಂದನ್ನು ದತ್ತು ಪಡೆದ 'ಕಿಚ್ಚ' ಸುದೀಪ್..!
ಹೌದು, ಈಗ ಅವರು ಅನಾರೋಗ್ಯದ ಕಾರಣದಿಂದಾಗಿ ಈ ವಾರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಕಲರ್ಸ್ ಕನ್ನಡದ ಬುಸಿನೆಸ್ ಮುಖಸ್ಥರಾಗಿರುವ ಪರಮೇಶ್ವರ ಗುಂದಕಲ್ ಅವರು ತಮ್ಮ ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
Been unwell n was hoping to recover bfr the weekend. But on my docs advice I need to gv myself a bit more rest n hence Will be missing this weekends episode of BB.
Curious to know the innovative plan which the creative team'll come out with, for this week's elimination. 🤗🤗🥂— Kichcha Sudeepa (@KicchaSudeep) April 16, 2021
ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ.ಆದರೆ ನಾಳೆ ಮತ್ತು ರವಿವಾರ ಬಿಗ್ ಬಾಸ್ ಎಪಿಸೋಡುಗಳು ರಾತ್ರಿ ಒಂಬತ್ತು ಗಂಟೆಗೆ ಎಂದಿನಂತೆ ಪ್ರಸಾರ ಆಗಲಿವೆ. ಜೊತೆಯಲ್ಲಿ ಈ ವಾರ ಅತಿಕಡಿಮೆ ಮತಗಳನ್ನು ಪಡೆದ ಒಬ್ಬರು ಕಂಟೆಸ್ಟೆಂಟ್ ಮನೆಯಿಂದ ಹೊರಹೋಗಲಿದ್ದಾರೆ. ಈ ಎಲಿಮಿನೇಷನ್ ಹೇಗೆ ನಡೆಯುತ್ತದೆ ಎನ್ನುವ ಕುತೂಹಲ ನಿಮಗಿದ್ದರೆ ಹೇಗೆಲ್ಲಾ ಮಾಡಬಹುದು ಎಂಬ ಆಯ್ಕೆಗಳನ್ನು ಎದುರಿಗೆ ಇಟ್ಟುಕೊಂಡು ಬಿಗ್ ಬಾಸ್ ತಂಡ ಕೆಲಸ ಮಾಡುತ್ತಿದೆ. ನಿಮ್ಮ ಕುತೂಹಲಕ್ಕೆ, ಪ್ರೀತಿಗೆ ಮತ್ತು ಶುಭ ಹಾರೈಕೆಗಳಿಗೆ ಧನ್ಯವಾದಗಳು!" ಎಂದು ಬರೆದುಕೊಂಡಿದ್ದಾರೆ.
ಇಷ್ಟು ಸೀಸನ್ನುಗಳಲ್ಲಿ ಇಂಥ ಸಂದರ್ಭ ಎದುರಾಗುತ್ತಿರುವುದು ಇದೇ ಮೊದಲು. ಆರೋಗ್ಯದ ತೊಂದರೆ ಇರುವುದರಿಂದ ಕಿಚ್ಚ ಸುದೀಪ್ ಅವರು ಈ ವಾರ ಬಿಗ್ ಬಾಸ್...
Posted by Parameshwar Gundkal on Friday, 16 April 2021
ಇದನ್ನೂ ಓದಿ: Big Boss 8: ಅನಾರೋಗ್ಯದಿಂದ ಬಳಲುತ್ತಿರುವ ಕಿಚ್ಚ ಸುದೀಪ್: ಈ ವಾರ BG ಮನೆಗೆ ಬೇರೆ ನಿರೂಪಕ?
ಇನ್ನೊಂದೆಡೆಗೆ ಸುದೀಪ್ ಕೂಡ ಟ್ವೀಟ್ ಮಾಡಿ ಅನಾರೋಗ್ಯದ ಕಾರಣದಿಂದಾಗಿ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಬೇಕಾಗಿದೆ.ಆದ್ದರಿಂದ ಈ ವಾರದ ಬಿಗ್ ಬಾಸ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.