Keerthy Suresh: ಇತ್ತೀಚೆಗೆ ಬಿಡುಗಡೆಯಾದ ಜೈಲರ್ ಮತ್ತು ದೇವರ ಚಿತ್ರಕ್ಕೆ ಅನಿರುದ್ಧ್ ಅವರ ಬಿಜಿಎಂ ಆ ಚಿತ್ರದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಂಗೀತ ನಿರ್ದೇಶಕರಾಗಿ ಉತ್ತಮ ಕೈಚಳಕ ತೋರುವ ಅನಿರುದ್ಧ್ ಹುಡುಗಿಯರನ್ನು ಪ್ರೀತಿಸುವುದರಲ್ಲಿ ಅಷ್ಟೇ ನಿಪುಣರು ಎಂದು ತಮಿಳು ಮಾಧ್ಯಮಗಳು ಯಾವಾಗಲೂ ಹೇಳುತ್ತವೆ. ಜನಪ್ರಿಯ ನಾಯಕಿಯಾಗಿ ಜನಪ್ರಿಯರಾಗಿರುವ ಮಹಾನಟಿ ಕೀರ್ತಿ ಸುರೇಶ್ ಅವರನ್ನು ಅನಿರುದ್ಧ್ ಪ್ರೀತಿಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಈ ಹಿಂದೆ ಬಾರೀ ಸದ್ದು ಮಾಡಿತ್ತು.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಅಭಿಮಾನಿ ದೇವರುಗಳಿಗೆ ನಿತ್ಯ ದಾಸೋಹ..! ಕಾಣಲು ಬಂದವರನ್ನು ಎಂದಿಗೂ ಉಪವಾಸ ಕಳುಹಿಸಿಲ್ಲ ʼದೇವತಾಮನುಷ್ಯʼ


ಅವರಿಬ್ಬರನ್ನು ಖಾಸಗಿ ಪಾರ್ಟಿಗಳಲ್ಲಿ ಅನೇಕ ಬಾರಿ ಮಾಧ್ಯಮಗಳು ನೋಡಿರುವ ಕಾರಣ ಅವರು ಕೇವಲ ಒಳ್ಳೆಯ ಸ್ನೇಹಿತರು ಎಂದು ಹೇಳಿಕೆ ನೀಡಿದ್ದರು... ಆದರೂ ವದಂತಿಗಳು ವ್ಯಾಪಕವಾಗಿ ಹರಡಿದವು.. ಇದಕ್ಕೆ ಪ್ರತಿಕ್ರಿಯಿಸಿದ ನಟಿ "ಸೋಷಿಯಲ್ ಮೀಡಿಯಾದಲ್ಲಿ ಬರುತ್ತಿರುವ ಸುದ್ದಿಗಳೆಲ್ಲ ಸುಳ್ಳು, ಅನಿರುದ್ಧ್ ರವಿಚಂದರ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ, ನಾನು ಮತ್ತು ನಾನು ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಒಳ್ಳೆಯ ಸ್ನೇಹಿತ ಎಂಬುದನ್ನು ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತೇನೆ" ಎಂದಿದ್ದರು.. "ಸದ್ಯ ತನಗೆ ಮದುವೆಯಲ್ಲಿ ಆಸಕ್ತಿ ಇಲ್ಲ, ತನ್ನ ಸಂಪೂರ್ಣ ಗಮನ ತನ್ನ ವೃತ್ತಿಜೀವನದ ಮೇಲಿದೆ ಮತ್ತು ತಮಿಳಿನ ತೇರಿ ಚಿತ್ರದ ಹಿಂದಿ ರೀಮೇಕ್ ಬೇಬಿಜಾನ್‌ನಲ್ಲಿ ನಟಿಸುತ್ತಿದ್ದೇನೆ" ಎಂದು ಕೀರ್ತಿ ಸುರೇಶ್‌ ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟಿದ್ದರು.. 


ಇದನ್ನೂ ಓದಿ-ಖ್ಯಾತ ನಟಿಗೆ ಕಿರುಕುಳ..! ಆಫರ್‌ ನೀಡಲು ಕಚೇರಿ ಕರೆಸಿ ಆ ವ್ಯಕ್ತಿ ಮಾಡಿದ್ದೇನು.. ಗೊತ್ತೆ..? ಶಾಕ್‌ ಆಗ್ತೀರಾ..


ತಾನು ಮತ್ತು ಅನಿರುದ್ಧ್ ಮುಂದಿನ ವರ್ಷದ ಆರಂಭದಲ್ಲಿ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದಕ್ಕೆ ತನ್ನ ಪೋಷಕರು ಮತ್ತು ತನ್ನ ಕುಟುಂಬ ಸದಸ್ಯರೆಲ್ಲರೂ ಬೇಸರವಾಗಿದ್ದಾರೆ ಎಂದು ಹೇಳಿದ್ದಾರೆ. ಕೀರ್ತಿ ಸುರೇಶ್ ಇಂತಹ ಸ್ಪಷ್ಟ ವಿವರಣೆ ನೀಡಿದ ನಂತರ ಅನಿರುದ್ಧ್-ಕೀರ್ತಿ ಸುರೇಶ್ ಪ್ರಣಯಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಆದರೂ ಸುದ್ದಿ ಬರುತ್ತಲೇ ಇದೆ. ಆಕೆಯ ಬಗ್ಗೆ ಇಂತಹ ಸುದ್ದಿ ಕೇಳುವುದು ಹೊಸದೇನಲ್ಲ. ಈ ಹಿಂದೆ ತಮಿಳು ಸ್ಟಾರ್ ನಾಯಕ ವಿಜಯ್‌ಗೆ ತುಂಬಾ ಹತ್ತಿರವಾಗಿದ್ದಾರೆ ಎಂಬ ವರದಿಗಳು ಕೂಡ ಬಂದಿದ್ದವು. ಪಕ್ಷ ಸ್ಥಾಪಿಸಿ ರಾಜಕೀಯ ಪ್ರವೇಶಿಸಿದ ವಿಜಯ್ ಅವರನ್ನು ಇತರ ಪಕ್ಷಗಳು ಕೀರ್ತಿಸುರೇಶ್ ವಿಷಯ ಪ್ರಸ್ತಾಪಿಸಿ ಟ್ರೋಲ್ ಕೂಡಾ ಮಾಡಿದ್ದಾರೆ. ಪ್ರಸ್ತುತ ಬೇಬಿಜಾನ್ ಚಿತ್ರದಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್ ತಮ್ಮ ಮುಂದಿನ ಚಿತ್ರವನ್ನು ಇನ್ನೂ ಘೋಷಿಸಿಲ್ಲ. ಅದು ತೆಲುಗಿನಲ್ಲಿ ಆಗುತ್ತದೆಯೇ? ಅದು ತಮಿಳಿನಲ್ಲಿ ಆಗುತ್ತದೆಯೇ? ಎಂಬ ವಿಚಾರದಲ್ಲಿ ಸ್ಪಷ್ಟತೆ ಬರಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ