Highest Paid South Actress: ಕಳೆದ ಕೆಲವು ವರ್ಷಗಳಲ್ಲಿ, ಹಿಂದಿ ಪ್ರೇಕ್ಷಕರಲ್ಲಿ ದಕ್ಷಿಣದ ಚಿತ್ರಗಳು, ನಟ-ನಟಿಯರ ಕ್ರೇಜ್ ಹೆಚ್ಚಾಗಿದೆ. 'ಬಾಹುಬಲಿ', 'ಕೆಜಿಎಫ್' ಮತ್ತು 'ಪುಷ್ಪ' ಚಿತ್ರಗಳು ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರದಲ್ಲೂ ಭಾರಿ ಗಳಿಕೆ ಮಾಡಿವೆ. ಇಂದು ನಾವು ದಕ್ಷಿಣದ ಈ ನಟಿಯು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಎರಡು ಮಕ್ಕಳ ತಾಯಿ ಆದರೂ ಇವರ ಬ್ಯೂಟಿ ಮಾತ್ರ ಕಡಿಮೆಯಾಗಿಲ್ಲ. 


COMMERCIAL BREAK
SCROLL TO CONTINUE READING

ಅನುಷ್ಕಾ ಶೆಟ್ಟಿ ಮತ್ತು ಸಮಂತಾ ತಮ್ಮ ಪ್ಯಾನ್ ಇಂಡಿಯಾ ಐಡೆಂಟಿಟಿ ಪಡೆದಿದ್ದಾರೆ. ಆದರೆ ಈ ಇಬ್ಬರೂ ನಟಿಯರನ್ನು ಸಂಭಾವನೆಯ ವಿಚಾರದಲ್ಲಿ ಈ ತಾರೆ ಹಿಂದಿಕ್ಕಿದ್ದಾರೆ. ಈ ನಟಿ ಕೇವಲ ಒಂದು ಪ್ಯಾನ್ ಇಂಡಿಯಾ ಚಲನಚಿತ್ರವನ್ನು ಮಾಡಿದ್ದಾರೆ. ಈ ನಟಿ ಇಬ್ಬರು ಮಕ್ಕಳ ತಾಯಿಯೂ ಹೌದು. 


ಇದನ್ನೂ ಓದಿ: ಪ್ರವೀಣ್ ತೇಜ್ 'ಜಿಗರ್‌'ಗೆ ಧ್ವನಿಯಾದ ಸಂಚಿತ್ ಹೆಗ್ಡೆ: ರೊಮ್ಯಾಂಟಿಂಕ್ ಹಾಡು ರಿಲೀಸ್


ಸಮಂತಾ ರುತ್‌ ಪ್ರಭು ಅವರು 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅದೇ ಸಮಯದಲ್ಲಿ ಅನುಷ್ಕಾ ಶೆಟ್ಟಿ 6 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಸಮಂತಾ ಮತ್ತು ಅನುಷ್ಕಾ ಶೆಟ್ಟಿಗಿಂತ ಹೆಚ್ಚು ಜನಪ್ರಿಯತೆ ಪಡೆದ ನಟಿ ನಯನತಾರಾ. ನಯನತಾರಾ ಅವರನ್ನು ಸೌತ್‌ನ ಲೇಡಿ ಸೂಪರ್‌ಸ್ಟಾರ್ ಎಂದು ಕರೆಯುತ್ತಾರೆ.  


ಇತ್ತೀಚೆಗೆ ಬಿಡುಗಡೆಯಾದ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಎದುರು ನಯನತಾರಾ ನಾಯಕಿಯಾಗಿ ನಟಿಸಿದ್ದಾರೆ. 'ಜವಾನ್' ಅವರ ಮೊದಲ ಹಿಂದಿ ಚಿತ್ರ. ಅವರು ತಮ್ಮ ಮೊದಲ ಚಿತ್ರದಿಂದ ಹಿಂದಿ ಪ್ರೇಕ್ಷಕರ ಮೇಲೆ ಆಳವಾದ ಪ್ರಭಾವ ಬೀರಿದ್ದಾರೆ. ಈ ಚಿತ್ರಕ್ಕಾಗಿ ಅವರು 1೦ ರಿಂದ 13 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ನಯನತಾರಾ ನಿರ್ದೇಶಕ ಶಿವನ್ ವಿಘ್ನೇಶ್ ಅವರ ಪತ್ನಿ ಮತ್ತು ಬಾಡಿಗೆ ತಾಯ್ತನದ ಮೂಲಕ ಎರಡು ಅವಳಿ ಮಕ್ಕಳ ತಾಯಿ ಆಗಿದ್ದಾರೆ.


ಇದನ್ನೂ ಓದಿ:  ತೆಲುಗು ಗೊಂಬೆ ಅಂದಕ್ಕೆ ಕನ್ನಡಿಗರೂ ಫಿದಾ..! ಡಿಂಪಲ್‌ ಹಯಾತಿ ಹಾಟ್‌ ಫೋಟೋಸ್‌ ಇಲ್ಲಿವೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.