ಬೆಂಗಳೂರು: ‘ಗೌಳಿ’ ಶ್ರೀನಗರ ಕಿಟ್ಟಿ ನಟನೆಯ ಸಿನಿಮಾ. ಪೋಸ್ಟರ್ಸ್, ಹಾಡು ಮತ್ತು ಟೀಸರ್‍ನಿಂದ ಎಲ್ಲರ ಗಮನ ಸೆಳೆದಿತ್ತು. ಇದೀಗ ‘ಗೌಳಿ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಇಡಿ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದೆ. ಕಿಟ್ಟಿಯ ರಗಡ್ ಲುಕ್, ಭಾಷಾ ಶೈಲಿಗೆ ಸಿನಿ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Pushpa 2 : ʼಪುಷ್ಪಾ 2ʼನಲ್ಲಿ ಐಟಂ ಸಾಂಗ್‌ ಮಾಡೋಕೆ ನೋ ಎಂದ ಸ್ಯಾಮ್‌..!


ಇದೇ ಫೆಬ್ರವರಿ 24ಕ್ಕೆ ‘ಗೌಳಿ’ ಸಿನಿಮಾ ತೆರೆ ಕಾಣಲಿದ್ದು, ಟ್ರೈಲರ್ ಕಥೆ ಕುತೂಹಲ ಮೂಡಿಸಿದೆ. ‘ಗೌಳಿ’ ಜನಾಂಗದ ನೈಜ್ಯ ಘಟನೆ ಆಧಾರಿತ ಕಥೆ ಹೊತ್ತು ಬರ್ತಾಯಿರುವ ಈ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರಗಳು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿವೆ. ಕಿಟ್ಟಿಗೆ ನಾಯಕಿಯಾಗಿ ಪಾವನಗೌಡ ನಟಿಸಿದ್ದರೆ, ರಂಗಾಯಣ ರಘು, ಶರತ್ ಲೋಹಿತಾಶ್ವ, ಗೋಪಾಲ್ ದೇಶ್ಪಾಂಡೆ, ಕಾಕ್ರೋಚ್ ಸುದಿ, ಯಶ್ ಶೆಟ್ಟಿ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.


Alia Baby Photo Fact Check : ಆಲಿಯಾ ಪೋಸ್ಟ್‌ ಮಾಡಿದ್ದು ಅವರದೇ ಮಗುವಿನ ಫೋಟೋನಾ!?


ಹಳ್ಳಿ ಸೊಗಡು, ಅಪ್ಪ-ಮಗಳ ಭಾಂದವ್ಯ, ಸಸ್ಪೆನ್ಸ್ ಥ್ರಿಲ್ಲರ್, ಕಾಮಿಡಿ ಒಟ್ಟಾರೆ ಕುಟುಂಬ ಸಮೇತ ನೋಡಬಹುದಾದಂತಹ ಸಿನಿಮಾ ಎಂಬುದು ಈ ಟ್ರೈಲರ್ ನಲ್ಲೇ ಗೊತ್ತಾಗುತ್ತೆ. ಸೂರ ನಿರ್ದೇಶನದ, ರಘು ಸಿಗಂ ನಿರ್ಮಾಣದ ಈ ಸಿನಿಮಾ ಇದೇ ಫೆಬ್ರವರಿ 24ಕ್ಕೆ ಭರ್ಜರಿಯಾಗಿ ಬಿಡುಗಡೆಗೊಳ್ಳುತ್ತಿದ್ದು, ಸಕಲ ತಯಾರಿಯಲ್ಲಿ ಚಿತ್ರತಂಡ ನಿರತವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.