‘Unlocked’ ಕೊರಿಯನ್ ಥ್ರಿಲ್ಲರ್ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ

Unlocked release : ಕಿಮ್ ಟೇ ಜೂನ್ ನಿರ್ದೇಶನದ  ಅನ್‌ಲಾಕ್ಡ್ ಕೊರಿಯನ್ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗಿದೆ. ಮೊಬೈಲ್ ಕಳೆದುಕೊಂಡು  ಮತ್ತೆ ಅದನ್ನು ಪಡೆದ ಬಳಿಕ ನಾಯಕಿಯ ಜೀವಾದಲ್ಲಾಗುವ ಬದಲಾವಣೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. 

Written by - Ranjitha R K | Last Updated : Feb 17, 2023, 01:14 PM IST
  • ಅನ್‌ಲಾಕ್ಡ್ ಕೊರಿಯನ್ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆ
  • ಬಹುನಿರೀಕ್ಷೆಯ ಥ್ರಿಲ್ಲರ್ ಕೊರಿಯನ್ ಚಿತ್ರ
  • ನೆಟ್‌ಫ್ಲಿಕ್ಸ್ ನಲ್ಲಿ ಆಗುತ್ತಿದೆ ಸ್ಟ್ರೀಮಿಂಗ್
‘Unlocked’ ಕೊರಿಯನ್ ಥ್ರಿಲ್ಲರ್ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ title=
( Photo - Netflix)

ಬೆಂಗಳೂರು :  Unlocked release : ಕಿಮ್ ಟೇ ಜೂನ್ ನಿರ್ದೇಶನದ  ಅನ್‌ಲಾಕ್ಡ್  ಕೊರಿಯನ್ ಸಿನಿಮಾ ನೆಟ್‌ಫ್ಲಿಕ್ಸ್ ನಲ್ಲಿ ಇಂದು ಬಿಡುಗಡೆಯಾಗಿದೆ. ಇದು ಜಪಾನೀಸ್ ಚಲನಚಿತ್ರ ಸ್ಟೋಲನ್ ಐಡೆಂಟಿಟಿಯ  ಕೊರಿಯನ್ ಆವೃತಿಯಾಗಿದೆ. 

ಅನ್‌ಲಾಕ್‌ನ  ಕಥಾ ವಸ್ತು : 
ಕೆಲಸದಿಂದ ಮನೆಗೆ ಹೋಗುವಾಗ, ನಾಯಕಿ ನಾ-ಮಿ ತನ್ನ ಸ್ಮಾರ್ಟ್‌ಫೋನ್ ಅನ್ನು ಕಳೆದುಕೊಳ್ಳುತ್ತಾಳೆ. ಆ ಸ್ಮಾರ್ಟ್ ಫೋನ್ ನಲ್ಲಿ ತನ್ನ ಬಗೆಗಿನ ಎಲ್ಲಾ ವಿವರಗಳನ್ನು ಹೊಂದಿರುತ್ತಾಳೆ. ಜುನ್-ಯೊಂಗ್ ಗೆ ನಾ-ಮಿಯ ಫೋನ್  ಸಿಕ್ಕಿ ಅದನ್ನು ಆತನ ಹಿಂದಿರುಗಿಸುತ್ತಾನೆ. ಆದರೆ ಫೋನ್ ಹಿಂದಿರುಗಿಸುವ ಮುನ್ನ ಆ ಫೋನ್ ನಲ್ಲಿ ಸ್ಪೈವೇರ್ ಅನ್ನು ಇನ್ಸ್ಟಾಲ್ ಮಾಡಿರುತ್ತಾನೆ. ಈ ಮೂಲಕ ನಾಯಕಿಯ ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡಿ, ಅವಳ ಹವ್ಯಾಸಗಳು, ಅಭಿರುಚಿಗಳು, ಜೀವನ ಶೈಲಿ, ಹಣಕಾಸು ಮತ್ತು ಸಾಮಾಜಿಕ ನೆಟ್‌ವರ್ಕ್ ಕುರಿತು ಮಾಹಿತಿ ಕಲೆ ಹಾಕುತ್ತಾನೆ. ಇಷ್ಟಾದ ಮೇಲೆ ತನ್ನ ನಿಜವಾದ ಗುರುತನ್ನು ಮರೆಮಾಚುವ ಮೂಲಕ ನಾಯಕಿಯನ್ನು ಸಂಪರ್ಕಿಸುತ್ತಾನೆ.

ಇದನ್ನೂ ಓದಿ : The Girl and an Astronaut ವೆಬ್ ಸೀರಿಸ್ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

ಈ ಮಧ್ಯೆ, ಪೊಲೀಸ್ ಪತ್ತೇದಾರಿ ಜಿ-ಮ್ಯಾನ್ ತನ್ನ ಮಗ ಜುನ್-ಯೊಂಗ್‌ನ  ಕೃತ್ಯಗಳ ಬಗೆಗಿನ ಸುಳಿವು ಪಡೆದುಕೊಂಡು ಮಗನ  ಬಗ್ಗೆ ರಹಸ್ಯವಾಗಿ ತನಿಖೆ ಮಾಡಲು ಆರಂಭಿಸುತ್ತಾನೆ.  

ಮತ್ತೊಂದೆಡೆ,  ನಾಯಕಿ ನಾ- ಮಿಗೆ ತನ್ನ  ತನ್ನ ಫೋನ್ ಸಿಕ್ಕಿರುವ ಬಗ್ಗೆ ಸಮಾಧಾನವಿರುತ್ತದೆ. ಆದರೆ ಅವಳ ಜೀವನ ಬುಡಮೇಲಾಗುತ್ತದೆ . ತನ್ನ ಜೀವನದ ಮೇಲಿನ ನಿಯಂತ್ರಣವನ್ನು ಆಕೆ ಕಳೆದುಕೊಳ್ಳುತ್ತಾಳೆ. 

ಚಲನಚಿತ್ರದ ರನ್‌ಟೈಮ್ 117 ನಿಮಿಷಗಳಾಗಿವೆ.  

ಇದನ್ನೂ ಓದಿ : Sudeep Politics Entry: "ಎರಡೂ ಪಕ್ಷಗಳಿಂದ ಆಫರ್‌ಗಳಿವೆ, ಆದರೆ ನನಗೆ 3ನೇ ಪಕ್ಷ ಮುಖ್ಯ" ಎಂದ ಕಿಚ್ಚ ಸುದೀಪ್

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News