The Girl and an Astronaut ವೆಬ್ ಸೀರಿಸ್ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ

The Girl and an Astronaut : ಬಾರ್ಟೆಕ್ ಪ್ರೊಕೊಪೊವಿಚ್ ನಿರ್ದೇಶಿಸಿದ 'ಎ ಗರ್ಲ್ ಅಂಡ್ ಆನ್ ಆಸ್ಟ್ರೋನಾಟ್' ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದೆ. ಎ ಗರ್ಲ್ ಅಂಡ್ ಆಸ್ಟ್ರೋನಾಟ್ ವೆಬ್ ಸೀರೀಸ್ ಅನ್ನು 30 ವರ್ಷಗಳ ಅಂತರದ ಎರಡು ವಿಭಿನ್ನ ಟೈಮ್‌ಲೈನ್‌ಗಳಲ್ಲಿ ಹೇಳಲಾಗಿದೆ. 

Written by - Ranjitha R K | Last Updated : Feb 17, 2023, 11:03 AM IST
  • ದಿ ಗರ್ಲ್ ಅಂಡ್ ಅನ್ ಆಸ್ಟ್ರೋನಾಟ್ ವೆಬ್ ಸಿರೀಸ್ ಇಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆ
  • ತ್ರಿಕೋನ ಪ್ರೇಮ ಕತೆಯ ರೋಚಕ ಸರಣಿ
  • 30 ವರ್ಷಗಳ ಅಂತರದ ಎರಡು ವಿಭಿನ್ನ ಟೈಮ್‌ಲೈನ್‌ಗಳಲ್ಲಿ ಹೆಣೆಯಲಾದ ಕತೆ
The Girl and an Astronaut ವೆಬ್ ಸೀರಿಸ್ ಇಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ  title=

The Girl and an Astronaut : ಬಹು ನಿರೀಕ್ಷಿತ ವೆಬ್ ಸಿರೀಸ್ ದಿ ಗರ್ಲ್  ಅಂಡ್  ಅನ್ ಆಸ್ಟ್ರೋನಾಟ್ ವೆಬ್ ಸಿರೀಸ್ ಇಂದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗುವುದು. ಇದು ಒಟ್ಟು 6 ಕಂತುಗಳನ್ನು ಒಳಗೊಂಡಿದೆ. 30 ವರ್ಷಗಳವರೆಗೆ ಕಣ್ಮರೆಯಾದ ನಂತರ ಹಿಂದಿರುಗುವ  ಗಗನಯಾತ್ರಿಯ ಕತೆಯನ್ನು ಈ ಸರಣಿಯಲ್ಲಿ ಹೆಣೆಯಲಾಗಿದೆ.  

ಒಂದು ಹುಡುಗಿ ಮತ್ತು ಗಗನಯಾತ್ರಿಯ ಕಥಾಹಂದರವನ್ನು ಈ ವೆಬ್ ಸಿರಿಸ್ ಒಳಗೊಂಡಿದೆ. ಮಾರ್ಟಾ, ನಿಕೊ ಮತ್ತು ಬೊಗ್ಡಾನ್ ಎಂಬ ಮೂವರ ನಡುವಿನ   ತ್ರಿಕೋನ ಪ್ರೇಮ  ಕತೆಯನ್ನು ಈ ಸರಣಿ ತೋರಿಸುತ್ತದೆ. 30 ವರ್ಷಗಳ ಬಳಿಕ  ನಾಪತ್ತೆಯಾಗಿದ್ದ ಗಗನಯಾತ್ರಿ ಆಶ್ಚರ್ಯಕರ ರೀತಿಯಲ್ಲಿ ಹಿಂತಿರುಗುವ ರೋಚಕ ಕತೆಯನ್ನು ಈ ಸರಣಿ ಒಳಗೊಂಡಿದೆ. ಆದರೆ 30 ವರ್ಷಗಳ ಹಿಂದೆ ಹೇಗೆ ಕಾಣುತ್ತಿದ್ದರೋ ಅದೇ ರೀತಿ ಈಗಲೂ ನಾಯಕ ಕಾಣುವ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಈ ಸರಣಿಯು ನೋವು, ದುಃಖ, ಪ್ರೀತಿ, ಕೋಪ ಮತ್ತು ಕಳೆದುಹೋದ ಪ್ರೀತಿಯ ಸುತ್ತ ಸುತ್ತುತ್ತದೆ. 

ಇದನ್ನೂ ಓದಿ : ವೈ-ಫೈ ಪಾಸ್‌ವರ್ಡ್ ಮರೆತಿದ್ದೀರಾ? ಚಿಂತೆಬಿಡಿ, ಈ ರೀತಿ ಮಾಡಿ

ಸರಣಿಯ ತಾರಾ ಬಳಗದ ಬಗ್ಗೆ ಹೇಳುವುದಾದರೆ ಇದರಲ್ಲಿ ಜೆಡ್ರ್ಜೆಜ್ ಹೈಕ್ನಾರ್, ಜಾಕುಬ್ ಸಸಾಕ್, ಮ್ಯಾಗ್ಡಲೇನಾ ಸಿಲೆಕಾ, ಆಂಡ್ರೆಜ್ ಚೈರಾ, ಝೋಫಿಯಾ ಜಸ್ಟ್ರೆಜ್ಬ್ಸ್ಕಾ, ಅನ್ನಾ ಸಿಯೆಸ್ಲಾಕ್, ಡೇರಿಯಾ ಪೊಲುನಿನಾ, ಮ್ಯಾಗ್ಡಲೇನಾ ಬೊಕ್ಜಾರ್ಸ್ಕಾ, ಗ್ರ್ಜೆಗೊರ್ಜ್ ಡಾಮಿಕಿ, ಆಂಡ್ರ್ಯೂಸ್ಕಾ ಝುಲೋವ್ಜಾಯ್, ಆಂಡ್ರ್ಯೂ ಝುಲೋವ್ಜಾಯ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ : ಸಿಎನ್ ಜಿ ರೂಪಾಂತರದಲ್ಲಿ ಮಾರುಕಟ್ಟೆಗೆ ಬರಲಿವೆ ಮಾರುತಿಯ ಮೂರು ಕಾರುಗಳು! ಬೆಲೆ ಕೂಡಾ ಅಗ್ಗ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News