Shilpa Shetty: ಬಾಲಿವುಡ್ ತಾರೆಯೊಬ್ಬರು ಹೀರೋಯಿನ್ ಜೊತೆಗಿನ ಅಫೇರ್ ಅನ್ನು ಬಹಿರಂಗ ಪಡಿಸಿದ್ದಲ್ಲದೇ, ಅವರಿಂದಲೇ ಅವರ ಕೆರಿಯರ್ ಹಾಳಾಗಿದೆ ಎಂದು ಬಹಿರಂಗವಾಗಿ ಹೇಳಿದ್ದು ಸೆನ್ಸೇಷನ್ ಆಗಿದೆ... ಆ ನಾಯಕಿ ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋಯಿನ್ ಶಿಲ್ಪಾ ಶೆಟ್ಟಿ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸಂಪೂರ್ಣ ವಿವರವನ್ನು ನೋಡುವುದಾದರೇ.. ಬಳುಕುವ ಬಳ್ಳಿ ಶಿಲ್ಪಾ ಶೆಟ್ಟಿ ಬಾಲಿವುಡ್ ಹಾಗೂ ತೆಲುಗಿನಲ್ಲಿ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.. ತೆಲುಗಿನಲ್ಲಿ ಹೆಚ್ಚು ಅವಕಾಶಗಳು ಸಿಗದ ಕಾರಣ ಶಿಲ್ಪಾಶೆಟ್ಟಿ ಹಿಂದಿ ಚಿತ್ರಕ್ಕಷ್ಟೇ ಸೀಮಿತವಾಗಿದ್ದರು. 48ರ ಹರೆಯದಲ್ಲೂ ಈ ಹಾಟ್ ಬೆಡಗಿ ತನ್ನ ಅಚ್ಚಳಿಯದ ಸೌಂದರ್ಯದಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಆದ್ರೆ ಶಿಲ್ಪಾ ಶೆಟ್ಟಿ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಆಕೆ ಹಲವು ಬಾರಿ ಹೇಳಿಕೊಂಡಿದ್ದಾರೆ.. ಮೇಲಾಗಿ ಈ ಬ್ಯೂಟಿಯೊಂದಿಗೆ ಡೇಟ್ ಮಾಡಿದ ಮೊದಲ ನಾಯಕ ಅಕ್ಷಯ್ ಕುಮಾರ್. 


ಇದನ್ನೂ ಓದಿ-ಡಿ ಬಾಸ್‌ ಸಿನಿಮಾ ರೀ ರಿಲೀಸ್‌ಗೆ ಫ್ಯಾನ್ಸ್‌ ಪಟ್ಟು. ಈಡೇರುತ್ತಾ ಅಭಿಮಾನಿಗಳ ಬಯಕೆ..!


ಅಕ್ಷಯ್ ಕುಮಾರ್ ಅವರಿಂದ ಶಿಲ್ಪಾ ಶೆಟ್ಟಿ ಕನ್ಯತ್ವ ಕಳೆದುಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಆದರೆ ನಂತರ ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತ್ತು.. ಆದರೆ ಈ ಹಿಂದೆ ಬಿಗ್ ಬ್ರದರ್ ಶೋನಲ್ಲಿ ಭಾಗವಹಿಸಿದ್ದ ಶಿಲ್ಪಾ ಶೆಟ್ಟಿ ಅವರ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿಯಾದ ಕಾಮೆಂಟ್‌ಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಅಕ್ಷಯ್ ಕುಮಾರ್ ಜೊತೆಗಿನ ತನ್ನ ಪ್ರೀತಿಯ ಬಗ್ಗೆಯೂ ಮಾತನಾಡಿದ್ದಾಳೆ.


 ಅಕ್ಷಯ್ ಕುಮಾರ್ ತನ್ನನ್ನು ಪ್ರೀತಿಸುತ್ತಿರುವಾಗಲೇ ಟ್ವಿಂಕಲ್ ಖನ್ನಾ ಜೊತೆಗೂ ಅಫೇರ್ ಇತ್ತು ಎಂದು ನಟಿ ಹೇಳಿದ್ದಾರೆ. ತನ್ನನ್ನು ಬಿಟ್ಟು ಬೇರೆ ನಟಿಗಾಗಿ..ಪ್ರೀತಿಯ ಹೆಸರಲ್ಲಿ ಮೋಸ ಮಾಡಿದ್ದಾನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.. 


 ಇದನ್ನೂ ಓದಿ-Sonakshi Sinha: ಹಸೆಮಣೆ ಏರೋಕೆ ಸಜ್ಜಾದ ಸೋನಾಕ್ಷಿ ಸಿನ್ಹಾ! ಹುಡುಗ ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews