Stars Suffering From Serious Disease :  ತೆರೆಯ ಮೇಲೆ ಅತ್ಯುತ್ತಮ ಅಭಿನಯ ನೀಡಿ ಪ್ರೇಕ್ಷಕರ ಮನ ಗೆದ್ದ ಹಲವು ತಾರೆಯರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲವು ನಟ ನಟಿಯರು ಈ ಕಾಯಿಲೆಗಳ ಹಿಡಿತದಿಂದ ಹೊರಬಂದಿದ್ದರೆ, ಕೆಲವರು ಈ ಕಾಯಿಲೆಯೊಂದಿಗೆಯೇ ತಮ್ಮ ಮುಂದಿನ ಜೀವನವನ್ನು ಸವೆಸಬೇಕು. ಅಂದರೆ ಜೀವನ ಪರ್ಯಂತ ಈ ಕಾಯಿಲೆ ಅವರನ್ನು ಕಾಡುತ್ತಲೇ ಇರುತ್ತದೆ.  


COMMERCIAL BREAK
SCROLL TO CONTINUE READING

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ನಟ ನಟಿಯರು : 
ಸಲ್ಮಾನ್ ಖಾನ್ :
ಚಿತ್ರಗಳಲ್ಲಿ  ಅತ್ಯಂತ ಅಪಾಯಕಾರಿ ಸಾಹಸ ದೃಶ್ಯಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮಾಡಿರುವ ಸಲ್ಮಾನ್ ಖಾನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ದಬಾಂಗ್ ಖಾನ್ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದು ನರವೈಜ್ಞಾನಿಕ ಕಾಯಿಲೆಯಾಗಿದ್ದು, ಈ ಕಾರಣದಿಂದಾಗಿ ವ್ಯಕ್ತಿಗೆ  ಆತ್ಮಹತ್ಯೆಯ ಯೋಚನೇ ಬರುತ್ತಿರುತ್ತದೆ. 


ಇದನ್ನೂ ಓದಿ :  Kantara: ಅತಿ ಕಡಿಮೆ ಬಜೆಟ್‌, ಕಾಡಿನಲ್ಲಿ‌ ಶೂಟಿಂಗ್.. ವಿಶಿಷ್ಟ ದಾಖಲೆ ಬರೆದ ಕನ್ನಡದ ಸಿನಿಮಾ!


ಹೃತಿಕ್ ರೋಷನ್ : 
ಹೃತಿಕ್ ರೋಷನ್ ಕೂಡ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೌದು ಈ ಖ್ಯಾತ ನಟ  ಸ್ಕೋಲಿಯೋಸಿಸ್ ಎಂಬ ರೋಗದಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಹಲವು ಬಾರಿ ಮಾತನಾಡಲು ತೊಂದರೆಯಾಗುತ್ತದೆ.


 ಅಮಿತಾಬ್ ಬಚ್ಚನ್ : 
ಬಿಗ್ ಬಿ (ಅಮಿತಾಭ್ ಬಚ್ಚನ್) ಕೂಡಾ ತಮ್ಮ ತೀವ್ರ ಅನಾರೋಗ್ಯದಿಂದ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಸ್ತವವಾಗಿ, ಅಮಿತಾಬ್ ಗೆ ಯಕೃತ್ತಿನ ಸಿರೋಸಿಸ್ ಇದೆ. ಈ ಕಾಯಿಲೆಯಿಂದಾಗಿ ಅಮಿತಾಬ್ ಬಚ್ಚನ್ ಅವರ ಲಿವರ್ 75% ದಷ್ಟು ಹಾನಿಗೊಳಗಾಗಿದೆ. ಈ ಕಾರಣಕ್ಕಾಗಿ ಅಮಿತಾಭ್ ಬಚ್ಚನ್ ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುತ್ತಾರೆ.


ಸಮಂತಾ ಪ್ರಭು : 
ಸೌತ್‌ನ ಸೂಪರ್‌ಸ್ಟಾರ್ ನಟಿ ಸಮಂತಾ ಪ್ರಭು ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದರು. ಈ ಕಾಯಿಲೆಯ ಹೆಸರು ಪಾಲಿಮಾರ್ಫ್ಸ್ ಲೈಟ್ ಇರ್ಪಾಶಾ ಆಗಿದೆ. ಇದು ಚರ್ಮದ ಕಾಯಿಲೆ.


ಇದನ್ನೂ ಓದಿ :  ಶಾರುಖ್ ಅಭಿನಯದ 'ಜವಾನ್' ಚಿತ್ರದಲ್ಲಿ ದಳಪತಿ ವಿಜಯ್!


ಶಾರುಖ್ ಖಾನ್ : 
ಬಾಲಿವುಡ್ ಕಿಂಗ್ ಶಾರುಖ್ ಖಾನ್ ಕೂಡಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕಿಂಗ್ ಖಾನ್ ಐದು ಬಾರಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದಲ್ಲದೆ, ಬೆನ್ನು ಮತ್ತು ಕೈಗಳು ಸಹ ನೋವಿನಿಂದ ತೊಂದರೆಗೊಳಗಾಗುತ್ತವೆ. ‘ದಿಲ್ ಸೇ’ ಚಿತ್ರದ ‘ಚೈಯ್ಯಾ ಚೈಯ್ಯಾ’ ಹಾಡಿನ ಚಿತ್ರೀಕರಣದ ವೇಳೆಯಿಂದ  ಶಾರುಖ್ ಗೆ ಬೆನ್ನು ನೋವಿನ ಸಮಸ್ಯೆ ಶುರುವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.