Kantara: ಅತಿ ಕಡಿಮೆ ಬಜೆಟ್‌, ಕಾಡಿನಲ್ಲಿ‌ ಶೂಟಿಂಗ್.. ವಿಶಿಷ್ಟ ದಾಖಲೆ ಬರೆದ ಕನ್ನಡದ ಸಿನಿಮಾ!

Low Budget Hit Movie Kantara : ಕಳೆದ ವರ್ಷ ಅಂದರೆ 2022 ರಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ 'ಕಾಂತಾರ' ಹಲವು ದಾಖಲೆಗಳನ್ನು ಬರೆಯಿತು. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿತ್ತು ಮತ್ತು ಕಥೆಯು ತುಂಬಾ ವಿಶಿಷ್ಟವಾಗಿತ್ತು.  

Written by - Chetana Devarmani | Last Updated : Jul 26, 2023, 12:00 PM IST
  • ಅತಿ ಕಡಿಮೆ ಬಜೆಟ್‌, ಕಾಡಿನಲ್ಲಿ‌ ಶೂಟಿಂಗ್
  • ವಿಶಿಷ್ಟ ದಾಖಲೆ ಬರೆದ ಕನ್ನಡದ ಸಿನಿಮಾ!
  • ಹಲವು ದಾಖಲೆಗಳನ್ನು ಬರೆದ 'ಕಾಂತಾರ'
Kantara: ಅತಿ ಕಡಿಮೆ ಬಜೆಟ್‌, ಕಾಡಿನಲ್ಲಿ‌ ಶೂಟಿಂಗ್.. ವಿಶಿಷ್ಟ ದಾಖಲೆ ಬರೆದ ಕನ್ನಡದ ಸಿನಿಮಾ!  title=

Kantara Movie: ಬಾಲಿವುಡ್ ಹೊರತುಪಡಿಸಿ, ಸೌತ್ ಇಂಡಸ್ಟ್ರಿಯ ಪ್ರಾಬಲ್ಯ ಈಗ ನಿರಂತರವಾಗಿ ಹೆಚ್ಚುತ್ತಿದೆ. ಹಲವು ಬಾರಿ ಈ ಚಿತ್ರಗಳು ಹಿಂದಿ ಚಿತ್ರಗಳನ್ನು ಹಿಂದಿಕ್ಕಿ ಬಾಕ್ಸ್ ಆಫೀಸ್‌ನಲ್ಲಿ ಗಳಿಕೆ ಮಾಡುತ್ತಿದ್ದು, ಸೌತ್ ಚಿತ್ರಗಳ ಗ್ರಾಫ್ ನೋಡಿ ಬಾಲಿವುಡ್ ಮೇಕರ್‌ಗಳ ಬೆವರಿಳಿದಿದೆ. ಕಳೆದ ವರ್ಷ ಅಂದರೆ 2022 ರಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ 'ಕಾಂತಾರ' ಹಲವು ದಾಖಲೆಗಳನ್ನು ಬರೆಯಿತು. ಈ ಚಿತ್ರದ ಬಜೆಟ್ ತುಂಬಾ ಕಡಿಮೆಯಾಗಿತ್ತು ಮತ್ತು ಕಥೆಯು ತುಂಬಾ ವಿಶಿಷ್ಟವಾಗಿತ್ತು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಚಿತ್ರಗಳನ್ನು ಸೋಲಿಸಿತು. 

ಇದನ್ನೂ ಓದಿ: ಶಾರುಖ್ ಅಭಿನಯದ 'ಜವಾನ್' ಚಿತ್ರದಲ್ಲಿ ದಳಪತಿ ವಿಜಯ್!

ಒಂದೆಡೆ ಚಿತ್ರಗಳಲ್ಲಿ ಗ್ಲಾಮರ್ ಹೆಚ್ಚಾಗುತ್ತಿದ್ದರೆ, ಇನ್ನೊಂದೆಡೆ 'ಕಾಂತಾರ'ದ ಕಥೆ ದಟ್ಟಕಾಡಿನದ್ದು. ಈ ಚಿತ್ರದ ಕಥೆ ಕಾಡಿನಲ್ಲಿ ಶಾಂತಿಯನ್ನು ಹುಡುಕುತ್ತಾ ಅಲೆದಾಡುವ ರಾಜನಿಗೆ ಸಂಬಂಧಿಸಿದೆ. ಕಾಡಿನಲ್ಲಿ ಕಲ್ಲಿನ ರೂಪದಲ್ಲಿ ದೇವರನ್ನು ಕಂಡ ರಾಜನಿಗೆ ಶಾಂತಿಯ ಅನುಭವ ಆಗುತ್ತದೆ. ದೈವವನ್ನು ಯನಗೆ ನೀಡಲು ಗ್ರಾಮಸ್ಥರನ್ನು ಕೇಳಿದಾಗ, ದೈವ ಒಂದು ಷರತ್ತು ಹಾಕುತ್ತದೆ. ತನ್ನ ಕೂಗು ಎಲ್ಲಿಯವರೆಗೂ ಕೇಳುತ್ತೋ ಅಲ್ಲಿಯವರೆಗಿನ ಜಾಗ ಊರ ಜನರಿಗೆ ಸೇರಬೇಕು ಎನ್ನುತ್ತದೆ. ಈ ಮಾತಿನ ಮೇಲೆ ಸಿನಿಮಾ ಶುರುವಾಗುತ್ತದೆ. ನಿರ್ದೇಶಕ ರಿಷಬ್ ಶೆಟ್ಟಿ ಈ ವಿಶಿಷ್ಟ ಕಥೆಯನ್ನು ತೆರೆಗೆ ತಂದಿದ್ದಾರೆ.

ಪ್ರತಿ ಭಾಷೆಯಲ್ಲೂ ಉತ್ತಮ ಗಳಿಕೆ

‘ಕಾಂತಾರ’ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ಹಿಂದಿ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಕೂಡ ಮಾಡಿದೆ. ‘ಕಾಂತಾರ’ ಚಿತ್ರದಲ್ಲಿ ಸ್ವತಃ ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿದ್ದಾರೆ. ಇದಲ್ಲದೇ ಸಪ್ತಮಿ ಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಮಾನ್ಸಿ ಸುಧೀರ್ ಸೇರಿದಂತೆ ಹಲವು ತಾರೆಯರಿದ್ದಾರೆ.

16 ಕೋಟಿ ಬಜೆಟ್, ಬಿಗ್ ಬ್ಯಾಂಗ್

‘ಕಾಂತಾರ’ ಚಿತ್ರದ ಕಥೆ ಮಾತ್ರವೇ ವಿಶಿಷ್ಟವಲ್ಲ, ಚಿತ್ರದ ಹೆಸರೂ ವಿಭಿನ್ನವಾಗಿತ್ತು. ಚಿತ್ರದ ಕೆಲವು ದೃಶ್ಯಗಳು ಕೂಡ ನಿಮ್ಮನ್ನು ಬೆಚ್ಚಿಬೀಳಿಸುವಂತಿದ್ದವು. ವಿಶೇಷವೆಂದರೆ ಚಿತ್ರದ ಎಲ್ಲಾ ದೃಶ್ಯಗಳನ್ನು ಕಾಡಿನಲ್ಲಿಯೇ ತೋರಿಸಲಾಗಿದೆ. ಬಜೆಟ್ ಬಗ್ಗೆ ಹೇಳುವುದಾದರೆ, ಈ ಚಿತ್ರದ ಬಜೆಟ್ ಕೇವಲ 16 ಕೋಟಿ ಆದರೆ ಕಲೆಕ್ಷನ್ ವಿಷಯದಲ್ಲಿ ಇದು ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿತು. ಭಾರತದಲ್ಲಿ ಈ ಚಿತ್ರ ಸುಮಾರು 300 ಕೋಟಿ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 400 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಈ ಚಿತ್ರದ ಹೆಸರು ಕೂಡ ಕಡಿಮೆ ಬಜೆಟ್ ಬ್ಲಾಕ್‌ಬಸ್ಟರ್‌ಗಳ ಪಟ್ಟಿಯಲ್ಲಿ ಸೇರಿದೆ.

ಇದನ್ನೂ ಓದಿ: ಈ ನಟಿಯರ ಅಂದಕ್ಕೆ ಕುತ್ತು ತಂದ ಪ್ಲಾಸ್ಟಿಕ್ ಸರ್ಜರಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News