ಬೆಂಗಳೂರು: ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈಗ ಕನ್ನಡದ ಕೆಜಿಎಫ್ ಚಿತ್ರದ ನಂತರ ಸುದೀಪ್ ಅವರ ಈ ಚಿತ್ರ ಈಗ ಭಾರಿ ಸುದ್ಧಿ ಮಾಡುತ್ತಿದೆ.ಈಗಾಗಲೇ ಈ ಚಿತ್ರದ ಟೀಸರ್ ಗೆ ಬಾಲಿವುಡ್ ನ ಹಲವಾರು ಖ್ಯಾತ ನಟರು ಟ್ವೀಟ್ ಮಾಡುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



COMMERCIAL BREAK
SCROLL TO CONTINUE READING

ಅದರಲ್ಲೂ ಕುಸ್ತಿಗೆ ಸಂಬಂಧಿಸಿದ ಸುಲ್ತಾನ್ ಸಿನಿಮಾ ಮಾಡಿ ಗಮನ ಸೆಳೆದಿದ್ದ ಸಲ್ಮಾನ್ ಖಾನ್ ಈಗ ಟ್ವೀಟ್ ಮಾಡುತ್ತಾ " ಕಿಚ್ಚ ಸುದೀಪ್ ನಾವು ಪ್ರಾರಂಭಿಸಿದ್ದನ್ನು ನೀವು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಿರಿ, ಆಲ್ ದಿ ಬೆಸ್ಟ್, ಮ್ಯಾನ್ ನಿಂದ ಪೈಲ್ವಾನ್ ಆಗಿ ಪರಿವರ್ತನೆಯಾಗಿದ್ದಕ್ಕೆ " ಎಂದು ಟ್ವೀಟ್ ಮಾಡಿದ್ದಾರೆ.  


ಕೇವಲ ಸಲ್ಮಾನ್ ಖಾನ್ ಮಾತ್ರವಲ್ಲದೆ ಸೋನು ಸೂದ್, ಪ್ರಭುದೇವ, ಧನುಶ್, ರಾಮ್ ಗೋಪಾಲ್ ವರ್ಮಾ ಕೂಡ ಕಿಚ್ಚನ್ ಪೈಲ್ವಾನ್ ಖದರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಿಶೇಷವೆಂದರೆ ಇದೇ ಮೊದಲ ಬಾರಿಗೆ ಸುನಿಲ್ ಶೆಟ್ಟಿ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. 




ಭಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಈಗ ಕೇವಲ ಟೀಸರ್ ಮೂಲಕವೇ ರೋಮಾಂಚನ ಹುಟ್ಟಿಸಿದೆ.ಇದರಿಂದ ಕನ್ನಡದ ಮತ್ತೊಂದು ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವುದು ಗ್ಯಾರಂಟಿ ಎನ್ನುವುದನ್ನು ಈ ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆ ತಿಳಿಸುತ್ತದೆ.