COVID-19 ಹಿನ್ನಲೆಯಲ್ಲಿ ಸಿಂಪಲ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಕಿಚ್ಚ ಸುದೀಪ್ ನಿರ್ಧಾರ, ಅಭಿಮಾನಿಗಳಿಗೂ ಮನವಿ
ಸೆಪ್ಟೆಂಬರ್ 2ನೇ ತಾರೀಖು ಸುದೀಪ್ (Sudeep) ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ `ಸಣ್ಣದೊಂದು ಮನವಿ` ಎಂದು ಟ್ವೀಟ್ ಮಾಡಿರುವ ಕಿಚ್ಚ, COVID- 19 ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: COVID- 19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಅವರು ಈ ಬಾರಿಯ ತಮ್ಮ ಹುಟ್ಟಿದಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 2ನೇ ತಾರೀಖು ಸುದೀಪ್ (Sudeep) ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ 'ಸಣ್ಣದೊಂದು ಮನವಿ' ಎಂದು ಟ್ವೀಟ್ ಮಾಡಿರುವ ಕಿಚ್ಚ, COVID- 19 ಅಟ್ಟಹಾಸ ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದ್ದಾರೆ.
ಅಭಿಮಾನಿಗಳಿಗೆ ಪತ್ರಬರೆದು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನಾವೆಲ್ಲರೂ COVID- 19 ವಿರುದ್ಧ ಹೋರಾಡ್ತಾ ಇದ್ದೇವೆ. ಇನ್ನೂ ಹೋರಾಡ ಬೇಕಾಗಿದೆ. ಇಂತಹ ಸಮಯದಲ್ಲಿ ಜನರನ್ನ ಒಟ್ಟುಗೂಡಿಸೋದು ಎಂದರೆ ಹತ್ತು ಹೆಜ್ಜೆ ಹಿಂದೆ ಇಟ್ಟಂತೆ! ಆದುದರಿಂದ ಈ ಸಮಯದಲ್ಲಿ ಸಂಭ್ರಮಿಸುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ.
'ನಿಮ್ಮ ಫ್ಯಾಮಿಲಿ, ನನ್ನ ಫ್ಯಾಮಿಲಿಯಂತೆ' ಎಂದು ಅಭಿಮಾನಿಗಳನ್ನು ಉದ್ದೇಶಿಸಿ ಭಾವುಕರಾಗಿ ಮಾತನಾಡಿರುವ ಕಿಚ್ಚ ಸುದೀಪ್, 'ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆ ಬಳಿ ಯಾರೂ ಬರಬೇಡಿ. ಯಾವುದಾದರೂ ರೀತಿಯಲ್ಲಿ ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಿ' ಎಂದು ಸಲಹೆ ಮಾಡಿದ್ದಾರೆ.
ಅದೇ ರೀತಿಯಲ್ಲಿ ಖಂಡಿತ ನಿಮ್ಮ ಭೇಟಿಗಾಗಿ ನನ್ನ ಮನಸ್ಸು ಯಾವಾಗಲೂ ತುಡಿಯುತ್ತಿರುತ್ತೆ. ನಿಮ್ಮ ಭೇಟಿಗಿಂತ ಹರ್ಷ ಬೇರೊಂದಿಲ್ಲ. ಆದರೆ ಈ ಬಾರಿ ಆಚರಣೆ ಬೇಡ ಅಂತ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.