ಬೆಂಗಳೂರು: ಸರಳತೆ, ಸಜ್ಜನಿಕೆಗೆ ಮತ್ತೊಂದು ಹೆಸರು ಸುಧಾಮೂರ್ತಿ. ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದರೂ ಅವರ ಜೀವನಶೈಲಿ ಎಲ್ಲರಿಗೂ ಮಾಧರಿ.ಈಗಿನ ಮಕ್ಕಳು ಹೆಚ್ಚು ಮೊಬೈಲ್ ಬಳಸುವುದರಿಂದ ಆಗುವ ಪರಿಣಾಮಗಳ ಸುತ್ತ ಹೆಣೆಯಲಾಗಿರುವ, ಮಧುಚಂದ್ರ ನಿರ್ದೇಶನದಲ್ಲಿ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ನಟಿಸಿರುವ "ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ" ಚಿತ್ರವನ್ನು ಸುಧಾಮೂರ್ತಿ ಅವರು ಇತ್ತೀಚೆಗೆ ವೀಕ್ಷಿಸಿದರು.


COMMERCIAL BREAK
SCROLL TO CONTINUE READING

ಈ ಸಿನಿಮಾವು ಒಂದು ಹೊಸ ರೀತಿಯ ಪ್ರಯೋಗ, ನಾನು ನಿಜ ಜೀವನದಲ್ಲಿ ನೋಡಿದ್ದೀನಿ.ನಾವು ಈಗ ಮಕ್ಕಳ ಅಡಿಕ್ಷನ್ ನೋಡಿ ಅಯ್ಯೋ ಮಕ್ಕಳು ಅಂದುಕೊಳ್ಳುತ್ತೇವೆ.ಆದರೆ ನಿಜವಾಗಲೂ ಅದು ಸಮಸ್ಯೆ ಆಗುತ್ತಿದೆ.ನಮ್ಮ ಸಮಾಜದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯ ಪ್ರಯತ್ನ ಮಾಡಿದ್ದಾರೆ. ಸಿನಿಮಾ ಬಹಳ ಚೆನ್ನಾಗಿದೆ, ಹ್ಯೂಮರ್ ಆಗಿ ಮಾಡಿದ್ದಾರೆ, ಒಳ್ಳೆಯ ಕಾನ್ಸೆಪ್ಟ್. ಮತ್ತೆ ಸದ್ಯದ ಸಾಮಾಜಿಕ ಪರಿಸ್ಥಿತಿ ಕುರಿತಾಗಿ ಮಾಡಿರೋದಿಕ್ಕೆ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ."ಅಲ್ಪಸಂಖ್ಯಾತರು, ದಲಿತರನ್ನು ಬಳಸಿಕೊಂಡು ಸಿದ್ದರಾಮಯ್ಯ ಸಿಎಂ ಆದರು"


ಇನ್ನೂ ಮುಂದುವರೆದು ಮಾತನಾಡಿದ ಅವರು ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ, ನಿರ್ದೇಶಕರಿಗೆ ವಿಶೇಷವಾಗಿ ಅಭಿನಂದನೆಗಳು ಯಾಕೆ ಅಂದರೆ, ಇದರಲ್ಲಿ ಲವ್ ಸ್ಟೋರಿ ಅಲ್ಲ, ರೊಮ್ಯಾಂಟಿಕ್ ಸೀನ್ಸ್ ಇಲ್ಲ, ಹೊಸ ತರ ಇದೆ.ಒಂದು ಅದ್ಭುತವಾದ ಕಲ್ಪನಾಶಕ್ತಿ ಹಾಗೂ ಕಠಿಣವಾದ ಸಮಸ್ಯೆಗೆ ಅದ್ಭುತವಾದ ಸೊಲ್ಯೂಷನ್ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!?


ಅಲ್ಲದೆ ಈ ಸಿನಿಮಾ ಬೇರೆ ಭಾಷೆಗಳಲ್ಲಿಯೂ ಕೂಡ ಬಿಡುಗಡೆಯಾಗಬೇಕು ಎಂದು ಅವರು ಹೇಳಿದರು.ಇದು ಬೇರೆ ಬೇರೆ ಭಾಷೆಯಲ್ಲಿ ಬರಬೇಕು ಅಂತ ನನ್ನ ಅಭಿಪ್ರಾಯ. ಹಿಂದಿ ,ಬೆಂಗಾಲಿ,ಮರಾಠಿ ,ತಮಿಳು, ತೆಲುಗು, ಕಾಶ್ಮೀರ ಯಿಂದ ಕನ್ಯಾಕುಮಾರಿಯ ವರೆಗೂ ಇದು ಸಾಮಾನ್ಯ ಸಮಸ್ಯೆ, ಅದಕ್ಕೆ ಇದೇ ತರ ಹೊಸ ಹೊಸ ಪ್ರಯೋಗಗಳು ಸಿನೆಮಾ ಮೂಲಕ ಹೊರ ಬರಲಿ ಅಂತ ನಾನು ಆಶಿಸುತ್ತೇನೆ, ಇಡೀ ತಂಡಕ್ಕೆ ಅಭಿನಂದನೆಗಳು ಎಂದು ಅವರು ಚಿತ್ರವನ್ನು ಶ್ಲಾಘಿಸಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.