ರಕ್ತದೊತ್ತಡದಲ್ಲಿ ಏರಿಳಿತ Superstar Rajinikanth ಆಸ್ಪತ್ರೆಗೆ ದಾಖಲು
ತಲೈವ ರಜನೀಕಾಂತ್ ಡಿಸೆಂಬರ್ 13 ರಂದು (ಅವರ ಜನ್ಮದಿನದ ಒಂದು ದಿನದ ನಂತರ) ಹೈದರಾಬಾದ್‌ನಲ್ಲಿ ಶೂಟಿಂಗ್‌ಗೆ ತೆರಳಿದ್ದರು.
ನವದೆಹಲಿ: ರಕ್ತದೊತ್ತಡದಲ್ಲಿ ತೀವ್ರ ಏರಿಳಿತದ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಹೈದರಾಬಾದ್‌ನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ರಜನೀಕಾಂತ್ ಅವರಿಗೆ ಕರೋನಾವೈರಸ್ ನ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಲಾಗಿದೆ.
ಸೂಪರ್ ಸ್ಟಾರ್ ರಜನೀಕಾಂತ್ (Rajinikanth) ಅವರ ಆರೋಗ್ಯದ ಬಗ್ಗೆ ಎಎನ್‌ಐ ಅಪೊಲೊ ಆಸ್ಪತ್ರೆಯ ಆರೋಗ್ಯ ಬುಲೆಟಿನ್ ಹಂಚಿಕೊಂಡಿದ್ದು ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಕಂಡು ಬಂದ ಬಳಿಕ ರಜನಿಕಾಂತ್ ಅವರನ್ನು ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದ ಬಗ್ಗೆ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದೆ.
Covid 19) ಪಾಸಿಟಿವ್ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ಬುಧವಾರ (ಡಿಸೆಂಬರ್ 23) ಚಿತ್ರೀಕರಣವನ್ನು ರದ್ದುಗೊಳಿಸಲಾಯಿತು. ಬಳಿಕ ರಜನೀಕಾಂತ್ ಅವರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಅವರ ವರದಿ ನೆಗೆಟಿವ್ ಬಂದಿದ್ದರಿಂದ ಥಲೈವ ತಮ್ಮ ಫಾರ್ಮ್ ಹೌಸ್ ನಲ್ಲಿ ಸ್ವಯಂ ಪ್ರತ್ಯೇಕತೆಯಲ್ಲಿದ್ದರು.
ಇದನ್ನೂ ಓದಿ: ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗೆ Rajinikanth ಬಗೆಗಿನ ಗೊತ್ತಿರದ ವಿಷಯಗಳಿವು
ತಲೈವ ರಜನೀಕಾಂತ್ ಡಿಸೆಂಬರ್ 13 ರಂದು (ಅವರ ಜನ್ಮದಿನದ ಒಂದು ದಿನದ ನಂತರ) ಹೈದರಾಬಾದ್‌ನಲ್ಲಿ ಶೂಟಿಂಗ್‌ಗೆ ತೆರಳಿದ್ದರು. 'ಹೈದರಾಬಾದ್‌ನ ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಅನ್ನಾಥೆ ಚಿತ್ರೀಕರಣ ನಡೆಯುತ್ತಿತ್ತು.
ಈ ಚಿತ್ರದಲ್ಲಿ ನಯನತಾರಾ, ಕೀರ್ತಿ ಸುರೇಶ್, ಪ್ರಕಾಶ್ ರಾಜ್, ಖುಷ್ಬು ಸುಂದರ್ ಕೂಡ ಈ ನಟಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.