ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..?

ನಟ ರಜನಿಕಾಂತ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ಮಕ್ಕಲ್ ನೀಧಿ ಮಯಂ ಮುಖ್ಯಸ್ಥ ಕಮಲ್ ಹಾಸನ್ ಮಂಗಳವಾರ ಸೌಹಾರ್ದಯುತ ಪರಿಹಾರವನ್ನು ಸೂಚಿಸಿದ್ದಾರೆ.

Last Updated : Dec 15, 2020, 10:09 PM IST
ತಮಿಳುನಾಡಿನಲ್ಲಿ ರಜನಿಕಾಂತ್ ಜೊತೆ ಕೈ ಜೋಡಿಸುತ್ತಾರಾ ಕಮಲ್ ಹಾಸನ್..? title=
file photo

ನವದೆಹಲಿ: ನಟ ರಜನಿಕಾಂತ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೀರಾ? ಎಂದು ಕೇಳಿದ ಪ್ರಶ್ನೆಗೆ ಮಕ್ಕಲ್ ನೀಧಿ ಮಯಂ ಮುಖ್ಯಸ್ಥ ಕಮಲ್ ಹಾಸನ್ ಮಂಗಳವಾರ ಸೌಹಾರ್ದಯುತ ಪರಿಹಾರವನ್ನು ಸೂಚಿಸಿದ್ದಾರೆ.

'ನಮ್ಮ ಸಿದ್ಧಾಂತವು ಹೋಲುತ್ತಿದ್ದರೆ ಮತ್ತು ಅದು ಜನರಿಗೆ ಪ್ರಯೋಜನವಾಗಿದ್ದರೆ, ನಮ್ಮ ಅಹಂಕಾರವನ್ನು ಬದಿಗಿಟ್ಟು ಪರಸ್ಪರ ಸಹಕರಿಸಲು ನಾವು ಸಿದ್ಧರಿದ್ದೇವೆ, ಇದಕ್ಕಾಗಿ ಕೇವಲ ನಮಗೆ ಒಂದು ಪೋನ್ ಕರೆ ಸಾಕು' ಎಂದು ರಜನಿಕಾಂತ್ ಅವರೊಂದಿಗೆ ಕೈಜೋಡಿಸುತ್ತೀರಾ? ಎನ್ನುವ ಪ್ರಶ್ನೆಗೆ ಕಮಲ್ ಹಾಸನ್ ಈ ರೀತಿ ಉತ್ತರಿಸಿದರು.

ಬಾಲ್ಕನಿ ಸರ್ಕಾರಕ್ಕೆ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವಿರಲಿ-ಕಮಲ್ ಹಾಸನ್

ಮುಂದಿನ ವರ್ಷ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮಿಳುನಾಡಿನಲ್ಲಿ ರಾಜಕೀಯ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹಾಸನ್ ಈ ಹಿಂದೆ ಸುಳಿವು ನೀಡಿದ್ದರು, ಆದರೆ ಶೀಘ್ರದಲ್ಲೇ ತಮ್ಮ ಪಕ್ಷವನ್ನು ಘೋಷಿಸಲು ಸಜ್ಜಾಗಿರುವ ನಟ ರಜನಿಕಾಂತ್ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಂಗತಿಯನ್ನು ಅವರು ತಳ್ಳಿಹಾಕಲಿಲ್ಲ.

ಭಾರತದ ಅರ್ಧದಷ್ಟು ಜನರು ಹಸಿವಿನಿಂದಿರುವಾಗ 1000 ಕೋಟಿ ರೂ.ಗಳ ಹೊಸ ಸಂಸತ್ತಿನ ಕಟ್ಟಡವಾದರೂ ಏಕೆ?

ಕಮಲ್ ಹಾಸನ್  ಡಿಸೆಂಬರ್ 13 ರಂದು 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು, ಡಿಸೆಂಬರ್ 13-16ರ ನಡುವೆ ತಮ್ಮ ಮೊದಲ ಹಂತದ ಅಭಿಯಾನವನ್ನು ಪ್ರಾರಂಭಿಸಿದರು. ಈ ನಾಲ್ಕು ದಿನಗಳ ಕಮಲ್ ಹಾಸನ್ ಅಭಿಯಾನದ ವೇಳಾಪಟ್ಟಿಯಲ್ಲಿ ಮಧುರೈ, ಥೇನಿ, ದಿಂಡುಗುಲ್, ವಿರುಧುನಗರ, ತಿರುನೆಲ್ವೇಲಿ, ಟುಟಿಕೊರಿನ್ ಮತ್ತು ಕನ್ನಿಯಕುಮಾರಿ ಜಿಲ್ಲೆಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ.

ಕಮಲ್ ಹಾಸನ್ ಫೆಬ್ರವರಿ 2018 ರಲ್ಲಿ ಎಂಎನ್‌ಎಂ ಅನ್ನು ಪ್ರಾರಂಭಿಸಿದ್ದರು ಮತ್ತು ಪಕ್ಷವು ಕಳೆದ ವರ್ಷದ ಲೋಕಸಭಾ ಚುನಾವಣೆಯನ್ನು ಎದುರಿಸಿತ್ತು ಆದರೆ ಯಾವುದೇ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ.

Trending News