Sushant Singh Drugs Case: ಆರೋಪ ಪಟ್ಟಿ ದಾಖಲಿಸಿದೆ NCB, 33 ಜನರ ಹೆಸರು ಶಾಮೀಲು
Sushant Singh Rajput Drug Case Charge Sheet - NCB ದಾಖಲಿಸಿರುವ ಆರೋಪಪಟ್ಟಿಯಲ್ಲಿ ಒಟ್ಟು 33 ಜನರ ಹೆಸರಿದೆ. ಈ ಆರೋಪ ಪಟ್ಟಿಯಲ್ಲಿ NCB ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಅವರ ಹೇಳಿಕೆಗಳನ್ನು ಕೂಡ ದಾಖಲಿಸಿದೆ.
ಮುಂಬೈ: Sushant Singh Rajput Drug Case Charge Sheet -ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ (Sushant Singh Rajput) ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನ್ನ ಆರೋಪಪಟ್ಟಿ ದಾಖಲಿಸಿದೆ. NCB ತನ್ನ ಚಾರ್ಜ್ ಶೀಟ್ ನಲ್ಲಿ ಒಟ್ಟು 33 ಆರೋಪಿಗಳ ಹೆಸರನ್ನು ಶಾಮೀಲುಗೊಳಿಸಿದೆ. ಈ ಚಾರ್ಚ್ ಶೀಟ್ ನಲ್ಲಿ NCB, ಖ್ಯಾತ ಬಾಲಿವುಡ್ ನಟಿಮಣಿಯರಾಗಿರುವ ದೀಪೀಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಅವರ ಹೇಳಿಕೆಗಳನ್ನು ಕೂಡ ಶಾಮೀಲುಗೊಳಿಸಿದೆ. ಆದರೆ, ಇವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿಲ್ಲ ಹಾಗೂ ಕೇವಲ ಅವರ ಹೇಳಿಕೆಗಳನ್ನು ಮಾತ್ರ ದಾಖಲಿಸಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
30 ಸಾವಿರ ಪುಟಗಳ ಚಾರ್ಜ್ ಶೀಟ್
ಸುಶಾಂತ್ ಸಿಂಗ್ ರಾಜ್ಪುತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣದ (Drugs Case) ತನಿಖೆ ನಡೆಸುತ್ತಿರುವ ನಡೆಸುತ್ತಿರುವ ಅಧಿಕಾರಿಗಳು ಆರೋಪ ಪಟ್ಟಿ ದಾಖಲಿಸಲು ಸೆಷನ್ಸ್ ಕೋರ್ಟ್ ತಲುಪಿದ್ದರು. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಈ ಚಾರ್ಜ್ ಶೀಟ್ 30 ಸಾವಿರಕ್ಕೂ ಅಧಿಕ ಪುಟಗಳದ್ದಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ ಸುಶಾಂತ್ ಜೊತೆ ನಿಕಟ ಸಂಪರ್ಕ ಹೊಂದಿರುವ ನಟಿ ಸೇರಿದಂತೆ ಆಕೆಯ ಸಹೋದರ, ಮ್ಯಾನೇಜರ್, ಡ್ರಗ್ಸ್ ಪೆಡ್ಲರ್ ಸೇರಿದಂತೆ ಒಟ್ಟು 33 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ. ತೆನಿಖೆಯ ವೇಳೆ ಜಪ್ತಿ ಮಾಡಲಾಗಿರುವ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಇತರೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಆರೋಪಿಗಳ ಹೆಸರು ಇಂತಿದೆ
33 ಆರೋಪಿಗಳ ಪಟ್ಟಿಯಲ್ಲಿ ನಟಿ ಹಾಗೂ ಸುಶಾಂತ್ ಸಿಂಗ್ ಗರ್ಲ್ ಫ್ರೆಂಡ್ ಎನ್ನಲಾಗಿರುವ ರಿಯಾ ಚಕ್ರವರ್ತಿ(Rhea Chakraborty), ಆಕೆಯ ಸಹೋದರೆ ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ಜೈದ್ ವೆಲಾತ್ರಾ, ಬಾಸಿತ್ ಪರಿಹಾರ, ಸುರ್ಯದೀಪ್ ಮಲ್ಹೊತ್ರಾ, ಕೈಜಾನ್ ಇಬ್ರಾಹಿಮ್, ಅಬ್ಬಾಸ್ ಲಖಾನಿ, ಕರಣ್ ಆರೋರಾ ಹಾಗೂ ಗೌರವ್ ಆರ್ಯ ಅವರುಗಳ ಹೆಸರು ಶಾಮೀಲಾಗಿದೆ.
ನಟಿಮಣಿಯರ ಹೇಳಿಕೆಗಳು
ಈ ಚಾರ್ಜ್ ಶೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 33 ಜನರ ಹೆಸರು ಶಾಮೀಲಾಗಿದ್ದು, ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿ ಖಾನ್ ಹೇಳಿಕೆಗಳನ್ನು (Bollywood Drug Connection) ಶಾಮೀಲುಗೊಳಿಸಲಾಗಿದೆ. ಆದರೆ, ಇವರನ್ನು ಆರೋಪಿಗಳ ಪಟ್ಟಿಯಿಂದ ಹೊರಗಿಡಲಾಗಿದ್ದು, ಕೇವಲ ಅವರ ಹೇಳಿಕೆಗಳನ್ನು ಮಾತ್ರ ಶಾಮೀಲುಗೊಳಿಸಲಾಗಿದೆ.
ಇದನ್ನೂ ಓದಿ-Drugs Case: Sushant Singh Rajput ಆಪ್ತ ಸ್ನೇಹಿತನನ್ನು ಬಂಧಿಸಿದ NCB
ಕಳೆದ ವರ್ಷ ಜೂನ್ 14 ರಂದು ಸುಶಾಂತ್ ಸಿಂಗ್ ರಾಜ್ ಪುಟ್ ತಮ್ಮ ಮುಂಬೈ ಫ್ಲಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ. ಈ ಪ್ರಕರಣದ ತನಿಖೆ CBI ನಡೆಸುತ್ತಿದ್ದು, NCB ಹಾಗೂ EDಗಳಂತಹ ಕೇಂದ್ರೀಯ ಏಜೆನ್ಸಿ ಗಳು ಕೂಡ ತನಿಖೆಯಲ್ಲಿ ಸಾಥ್ ನೀಡುತ್ತಿವೆ.
ಇದನ್ನೂ ಓದಿ-Drugs Case: ಡ್ರಗ್ಸ್ ಪೆಡ್ಲರ್ ಬಂಧಿಸಲು ಹೋದ NCB ತಂಡದ ಮೇಲೆ ದಾಳಿ, 2 ಅಧಿಕಾರಿಗಳಿಗೆ ಗಾಯ
ಈ ಪ್ರಕರಣದಲ್ಲಿ ಕಳೆದ ಸೆಪ್ಟಂಬರ್ ನಲ್ಲಿ ಮೊದಲ ಬಂಧನ ನಡೆಸಲಾಗಿತ್ತು. ಆ ಬಳಿಕ ಚಾರ್ಜ್ ಶೀಟ್ ದಾಖಲಿಸಲು NCB ಬಳಿ 6 ತಿಂಗಳ ಕಾಲಾವಕಾಶ ಇತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Drugs Case: ಭಾರತಿ ಹಾಗೂ ಹರ್ಷ್ ಗೆ ಭಾರಿ ಹಿನ್ನಡೆ, 14 ದಿನಗಳ ನ್ಯಾಯಾಂಗ ವಶಕ್ಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.