Drugs Case: ಭಾರತಿ ಹಾಗೂ ಹರ್ಷ್ ಗೆ ಭಾರಿ ಹಿನ್ನಡೆ, 14 ದಿನಗಳ ನ್ಯಾಯಾಂಗ ವಶಕ್ಕೆ

 ಖ್ಯಾತ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಇಂದು ಮುಂಬೈನ ಕಿಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಇಬ್ಬರ ಮೇಲೆ ಗಾಂಜಾ ಸೇವನೆಯ ಆರೋಪವಿದೆ. ಇಬ್ಬರನ್ನು ಕೂಡ NDPS ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಬಂಧಿಸಲಾಗಿದೆ.

Last Updated : Nov 22, 2020, 03:39 PM IST
  • ಡ್ರಗ್ಸ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ.
  • ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ.
  • ಮುಂಬೈ NDPS ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ.
Drugs Case: ಭಾರತಿ ಹಾಗೂ ಹರ್ಷ್ ಗೆ ಭಾರಿ ಹಿನ್ನಡೆ, 14 ದಿನಗಳ ನ್ಯಾಯಾಂಗ ವಶಕ್ಕೆ

ಮುಂಬೈ: ಬಿಟೌನ್ ನ ಮಹತ್ವದ ಬೆಳವಣಿಗೆಯೊಂದರಲ್ಲಿ ಖ್ಯಾತ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಈ ಇಬ್ಬರ ಮೇಲೆ ಗಾಂಜಾ ಸೇವನೆಯ ಆರೋಪವಿದೆ.

ಮುಂಬೈನ ಕಿಲಾ ಕೋರ್ಟ್ ನಲ್ಲಿ ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಚಿಯಾ ಅವರನ್ನು ಹಾಜರುಪಡಿಸಲಾಗಿದೆ. ಪತಿ-ಪತ್ನಿಯ ಮೇಲೆ ಗಾಂಜಾ ಸೇವನೆಯ ಆರೋಪವಿದೆ. ಈ ಇಬ್ಬರನ್ನು NDPS ಕಾಯ್ದೆಯ ಸೆಕ್ಷನ್ 27ರ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಇದನ್ನು ಓದಿ- Drugs Case: ಕಾಮಿಡಿಯನ್ Bharti Singh ಪತಿ Harsh Limbachiyaaನನ್ನು ಬಂಧಿಸಿದ NCB

ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಶನಿವಾರ ಬಂಧಿಸಿದ್ದರು. ಬಳಿಕ ಭಾನುವಾರ ಅವರ ಪತಿ ಹಾಗೂ ಕಿರುತೆರೆ ನಿರೂಪಕ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಲಾಗಿತ್ತು. ಹರ್ಷ ಲಿಂಬಾಚಿಯಾ ಅವರನ್ನು ಅವರ ಮನೆಯಲ್ಲಿ 86.5 ಗ್ರಾಂ. ಗಾಂಜಾ ಜೊತೆಗೆ ಬಂಧಿಸಲಾಗಿದೆ. ಹರ್ಷ್ ಹಾಗೂ ಭಾರತಿ ತಮ್ಮ ಮನೆ ಮತ್ತು ಕಚೇರಿಯಲ್ಲಿ ಗಾಂಜಾ ಸೇವಿಸಿರುವುದಾಗಿ NCB ಅಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ-ಫುಡ್ ಡಿಲೇವರಿ ಹೆಸರಿನಲ್ಲಿ ಮುಂಬೈನಲ್ಲಿ ಡ್ರಗ್ಸ್ ಪೂರೈಕೆ... Bollywood ಜೊತೆಗೆ ನಂಟು

ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ಪುತ್ ಸಾವು ಪ್ರಕರಣದಲ್ಲಿ ಆರಂಭಗೊಂಡ ತನಿಖೆಯಲ್ಲಿ ಡ್ರಗ್ಸ್ ಆಂಗಲ್ (Drugs Case) ಬೆಳಕಿಗೆ ಬಂದ ಬಳಿಕ NCB ಅಧಿಕಾರಿಗಳು ಬಾಲಿವುಡ್ ಖ್ಯಾತನಾಮರ ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಹಲವು ಖ್ಯಾತನಾಮಾರ ವಿಚಾರಣೆ ನಡೆದಿದೆ. ಇದೀಗ ತನಿಖೆಯ ಕೊಂಡಿಗಳು ಒಂದಕ್ಕೊಂದು ಸೇರಿ ಭಾರತಿ ಸಿಂಗ್ ಹಾಗೂ ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂದು ತಲುಪಿದೆ.

ಕಳೆದ ಒಂದು ತಿಂಗಳಿನಲ್ಲಿ NCB 4-5 ದೊಡ್ಡ ಡ್ರಗ್ಸ್ ಪೆಡ್ಲರ್ ಗಳ ಮೇಲೆ ತಮ್ಮ ಪಟ್ಟು ಬಿಗಿಗೊಳಿಸಿದ್ದು, ಇವರೆಲ್ಲರೂ ಮುಂಬೈನ ಅಂಧೇರಿ ಹಾಗೂ ಬಾಂದ್ರಾ ನಡುವೆ ಬಂಧಿಸಲಾಗಿದೆ. ಅವರ ವಿಚಾರಣೆಯ ವೇಳೆ ಹೊರಬಂದ ಮಾಹಿತಿಯ ಆದಾರದ ಮೇಲೆ ಇದಕ್ಕೂ ಮೊದಲು ಖ್ಯಾತ ನಟ ಅರ್ಜುನ್ ರಾಮ್ ಪಾಲ್ ಅವರನ್ನು ಕೂಡ ವಿಚಾರಣೆ ನಡೆಸಲಾಗಿದೆ.

More Stories

Trending News