Sonu Sood ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭ
Sonu Sood Ambulance Service - ಈ ಸಂದರ್ಭದಲ್ಲಿ ಮಾತನಾಡಿರುವ ಸೋನು, `ನಾನು ಈ ಆಂಬುಲೆನ್ಸ್ ಉದ್ಘಾಟನೆಗೆ ಬಂದಿರುವುದಕ್ಕೆ ಹೆಮ್ಮೆಪಡುತ್ತೇನೆ. ಶಿವ ಅವರಿಗೆ ಧನ್ಯವಾದಗಳು. ಜನರ ಪ್ರಾಣ ಉಳಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನಮ್ಮ ಸಮಾಜಕ್ಕೆ ಶಿವನಂತಹ ಜನರು ಬೇಕು ಇದರಿಂದ ಎಲ್ಲರೂ ಮುಂದೆ ಬಂದು ಇತರರಿಗೆ ಸಹಾಯ ಮಾಡಬಹುದು` ಎಂದು ಹೇಳಿದ್ದಾರೆ.
Sonu Sood Ambulance Service - ಹೈದ್ರಾಬಾದ್: ಕೊರೊನಾ ಮಹಾಮಾರಿಯ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಲಾಕ್ಡೌನ್ ನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ಸಹಾಯ ಹಸ್ತ ಚಾಚಿ ಸೋನು ಸೂದ್ ಸಾಕಷ್ಟು ಹೆಡ್ ಲೈನ್ ಗಿಟ್ಟಿಸಿದ್ದರು. ಜನರೂ ಕೂಡ ಸೋನು ಅವರ ಕಾರ್ಯವನ್ನು ಶ್ಲಾಘಿಸಿದ್ದರು. ಅಷ್ಟೇ ಯಾಕೆ ಸೋನು ಅವರಿಂದ ಪ್ರೇರಣೆ ಪಡೆದು ಹಲವರು ಜನರ ಸಹಾಯಕ್ಕೆ ಮುಂದೆ ಬಂದರು. ಸೋನು ಅವರಂತೆಯೇ ಸುಹೃತ ವ್ಯಕ್ತಿಯೊಬ್ಬರು ಸೋನು ಸೂದ್ ಅವರಿಂದ ಪ್ರೇರಣೆ ಪಡೆದು 'ಸೋನು ಸೂದ್ ಆಂಬುಲೆನ್ಸ್ ಸೇವೆ' ಆರಂಭಿಸಿದ್ದಾರೆ. ಈ ವ್ಯಕ್ತಿಯ ಹೆಸರು ಶಿವಾ ಹಾಗೂ ವೃತ್ತಿಯಲ್ಲಿ ಅವರೊಬ್ಬ ಈಜುಪಟುವಾಗಿದ್ದಾರೆ.
ಜನರಿಗೆ ಹೊಸ ಜೀವನ ನೀಡುತ್ತಾರೆ ಶಿವಾ
ಹೈದ್ರಾಬಾದ್ ನ ಹುಸೈನ್ ಸಾಗರ್ ದಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವ ನೂರಕ್ಕೂ ಅಧಿಕ ಜನರ ಪ್ರಾಣ ಉಳಿಸಿರುವುದಾಗಿ ಶಿವಾ ಹೇಳುತ್ತಾರೆ. ಅವರ ಈ ನಿಸ್ವಾರ್ಥ ಸೇವೆಯನ್ನು ಕಂಡು ಜನರು ಅವರಿಗೆ ಕೊಡುಗೆ ನೀಡಲು ಆರಂಭಿಸಿದ್ದಾರೆ. ಈ ಹಣದಲ್ಲಿ ಶಿವಾ ಆಂಬುಲೆನ್ಸ್ ಒಂದನ್ನು ಖರೀದಿಸಿದ್ದಾರೆ ಹಾಗೂ ಅದಕ್ಕೆ ಸೋನು ಸೂದ್ ಹೆಸರಿಟ್ಟಿದ್ದಾರೆ.
ಇದನ್ನು ಓದಿ-ನಾರ್ವೆ ಬಾಲಿವುಡ್ ಫಿಲ್ಮ್ ಫೆಸ್ಟಿವಲ್ ನಲ್ಲಿ Sonu Sood ಅವರಿಗೆ Humanitarian Award 2020 ಗೌರವ
ದಾನದಿಂದ ಸಂಗ್ರಹವಾದ ಹಣದಿಂದ ಆಂಬುಲೆನ್ಸ್ ಖರೀದಿ
ಈ ಕುರಿತು ಮಾತನಾಡುವ ಶಿವಾ, ನನ್ನ ಸೇವೆಯನ್ನು ನೋಡಿ ಜನರು ನನಗೆ ಹಾಗೂ ನನ್ನ ಕುಟುಂಬ ಸದಸ್ಯರಿಗೆ ದಾನ ನೀಡಲು ಆರಂಭಿಸಿದರು . ಆದರೆ ತಾವು ಆ ಹಣವನ್ನು ಆಂಬುಲೆನ್ಸ್ ಖರೀದಿಗಾಗಿ ಬಳಸಿರುವುದಾಗಿ ಹೇಳುತ್ತಾರೆ. ಸೋನು ಸೂದ್ ಅವರಿಂದ ಪ್ರೇರಣೆ ಪಡೆದು ನಾನು ನನ್ನ ಆಂಬುಲೆನ್ಸ್ ಗೆ ಅವರ ಹೆಸರನ್ನೇ ಇಟ್ಟಿದ್ದೇನೆ.
ಇದನ್ನು ಓದಿ-ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರಿಗೆ ನಟ ಸೋನು ಸೂದ್ ನಿಂದ ಈ ಧಮಾಕಾ...!
ಖುದ್ದು ಸೋನು ಸೂದ್ ಅವರಿಂದ ಆಂಬುಲೆನ್ಸ್ ಸೇವೆ ಉದ್ಘಾಟನೆ
ಇಲ್ಲಿ ವಿಶೇಷತೆ ಎಂದರೆ, ಶಿವಾ ಅವರ ಈ ಆಂಬುಲೆನ್ಸ್ ಸೇವೆಯ ಉದ್ಘಾಟನೆಯನ್ನು ಖುದ್ದು ಸೋನು ಸೂದ್ (Sonu Sood) ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಸೋನು, 'ನಾನು ಈ ಆಂಬುಲೆನ್ಸ್ ಉದ್ಘಾಟನೆಗೆ ಬಂದಿರುವುದಕ್ಕೆ ಹೆಮ್ಮೆಪಡುತ್ತೇನೆ. ಶಿವ ಅವರಿಗೆ ಧನ್ಯವಾದಗಳು. ಜನರ ಪ್ರಾಣ ಉಳಿಸಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನಮ್ಮ ಸಮಾಜಕ್ಕೆ ಶಿವನಂತಹ ಜನರು ಬೇಕು ಇದರಿಂದ ಎಲ್ಲರೂ ಮುಂದೆ ಬಂದು ಇತರರಿಗೆ ಸಹಾಯ ಮಾಡಬಹುದು" ಎಂದು ಹೇಳಿದ್ದಾರೆ.
ಇದನ್ನು ಓದಿ-ಎಲೆಕ್ಷನ್ ಗೆ ಸ್ಪರ್ಧಿಸಲು ಟಿಕೆಟ್ ಕೊಡಿಸಿ ಎಂದ ಬಳಕೆದಾರ, Sonu Sood ಉತ್ತರ ಕೇಳಿ ಫಿದಾ ಆದ ಅಭಿಮಾನಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.