ನವದೆಹಲಿ: Nattu Kaka No More - 'Taarak Mehta Ka Ooltah Chashmah' ಖ್ಯಾತಿಯ ಹಿರಿಯ ನಟ, ನಟ್ಟು ಕಾಕಾ ಅಂದರೆ ಡಾ. ಘನಶ್ಯಾಮ್ ನಾಯಕ್ ನಿಧನರಾಗಿದ್ದಾರೆ. ಘನಶ್ಯಾಮ್ ನಾಯಕ್ (Ghanshyam Nayak) ಕಳೆದ ಹಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಇದೀಗ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ (Ghanshyam Nayak Death). ಅವರು ಕೆಲವು ತಿಂಗಳ ಹಿಂದೆ ಎರಡು ಆಪರೇಷನ್ ಕೂಡ ಮಾಡಿಕೊಂಡಿದ್ದರು. ಅವರಿಗೆ 77 ವರ್ಷ ವಯಸ್ಸಾಗಿತ್ತು (Ghanshyam Nayak Died). ವಯಸ್ಸಿನ ಕಾರಣ, ಅವರು ಪ್ರತಿದಿನ ಶೂಟಿಂಗ್‌ಗೆ ಹೋಗಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರು ಇನ್ನೂ ತಾರಕ್ ಮೆಹ್ತಾ ತಂಡದಲ್ಲಿದ್ದರು.


COMMERCIAL BREAK
SCROLL TO CONTINUE READING

ಮಾಹಿತಿ ಹಂಚಿಕೊಂಡ ಅಸಿತ್ ಮೋದಿ
ಘನಶ್ಯಾಮ್ ನಾಯಕ್ ಮೇ 12, 1944 ರಂದು ಜನಿಸಿದ್ದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ತಾರಕ್ ಮೆಹ್ತಾ ತಂಡವು ನಟನ ಸಾವಿನಿಂದ ತೀವ್ರ ದುಃಖಕ್ಕೆ ಒಳಗಾಗಿದೆ. ಕಾರ್ಯಕ್ರಮದ ನಿರ್ಮಾಪಕ ಅಸಿತ್ ಕುಮಾರ್ ಮೋದಿ ಘನಶ್ಯಾಮ್ ನಾಯಕ್ ಅವರ ಫೋಟೋವನ್ನು ಹಂಚಿಕೊಂಡು - 'ನಮ್ಮ ಪ್ರೀತಿಯ ನಾಟು ಕಾಕಾ ಇನ್ನು ನಮ್ಮೊಂದಿಗೆ ಇಲ್ಲ' ಎಂದು ಬರೆದುಕೊಂಡಿದ್ದಾರೆ.


Sharukh Khan Old Viral Statement:'ನನ್ನ ಮಗ ಡ್ರಗ್ಸ್ ಸೇವಿಸಬೇಕು, ಹುಡುಗಿಯರ ಹಿಂದೆ ಬೀಳಬೇಕು', ವೈರಲ್ ಆದ ಶಾರುಕ್ ಹಳೆ ಹೇಳಿಕೆ


ಘನಶ್ಯಾಮ್ ನಾಯಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು 
ಘನಶ್ಯಾಮ್ ನಾಯಕ್ ಅಂದರೆ 'ತಾರಕ್ ಮೆಹ್ತಾ' ಖ್ಯಾತಿಯ ನಟ್ಟು ಕಾಕಾ ತನ್ನ 77 ನೇ ವಯಸ್ಸಿನಲ್ಲಿಯೂ ಕೂಡ ತನ್ನ ಕೆಲಸದಲ್ಲಿ ಸಕ್ರೀಯರಾಗಿದ್ದರು ಮತ್ತು ಅವರ ಅಭಿಮಾನಿಗಳನ್ನು ತುಂಬಾ ಮನರಂಜಿಸುತ್ತಿದ್ದರು. ಅವರ ಅನಾರೋಗ್ಯದ ಸುದ್ದಿ ಜೂನ್ ತಿಂಗಳಲ್ಲಿ ಮುಂಚೂಣಿಗೆ ಬಂದಿತ್ತು. ಅವರು ಕೆಲವು ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು.


ಇದನ್ನೂ ಓದಿ-ಅಕ್ಟೋಬರ್ 4 ವರೆಗೆ ಶಾರುಖ್ ಖಾನ್ ಪುತ್ರ ಆರ್ಯನ್ NCB ಕಸ್ಟಡಿಗೆ


ಈ ಚಿತ್ರಗಳಲ್ಲಿ ನಟಿಸಿದ್ದರು
'ನಟ್ಟು ಕಾಕಾ' ಪಾತ್ರದಿಂದ ಅವರು ಖ್ಯಾತಿಗೆ ಬಂದರೂ ಕೂಡ ಘನಶ್ಯಾಮ್ ನಾಯಕ್ ತನ್ನ ಆರು ದಶಕಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವು ಅವಿಸ್ಮರಣೀಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರು ಹಲವು ದೊಡ್ಡ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ನಟಿಸಿರುವ ಚಿತ್ರಗಳಲ್ಲಿ 'ಬೇಟಾ', ಕ್ರಾಂತಿವೀರ್, ಲಾಡಲಾ, ಬರಸಾತ್, ಘಾತಕ್, ಚೈನಾ ಗೇಟ್, ಹಮ್ ದಿಲ್ ದೆ ಚುಕೆ ಸನಮ್, ಲಜ್ಜಾ, ತೆರೆ ನಾಮ್, ಖಾಕಿ ಹಾಗೂ ಚೋರಿ ಚೋರಿ ಚಿತ್ರಗಳು ಶಾಮೀಲಾಗಿವೆ.


ಇದನ್ನೂ ಓದಿ-ಸಮಂತಾ ಮತ್ತು ನಾಗಚೈತನ್ಯ ವಿಚ್ಚೇದನಕ್ಕೆ ನಾಗಾರ್ಜುನ್ ಹೇಳಿದ್ದೇನು ಗೊತ್ತೇ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.