ಬೆಂಗಳೂರು: ಒಂದು ವರ್ಷದ ಹಿಂದಷ್ಟೇ ಖುಷಿ ಖುಷಿಯಾಗಿ ದಾಪಂತ್ಯ ಜೀವನಕ್ಕೆ ಕಾಲಿಟ್ಟ ದಂಪತಿಯ ಬಾಳಲ್ಲಿ ವಿಧಿ ಘೋರ ಆಟವಾಡಿದೆ. ಮದುವೆಯಾದ ಒಂದೇ ವರ್ಷಕ್ಕೆ ಖ್ಯಾತ ಕಿರುತೆರೆ ನಟಿ ಪತಿಯನ್ನು ಕಳೆದುಕೊಂಡಿದ್ದಾಳೆ.


COMMERCIAL BREAK
SCROLL TO CONTINUE READING

ಹೌದು, 'ಕಲ್ಯಾಣಿ ಪರಿಸು', 'ವಾಣಿ ರಾಣಿ', 'ಭಾರತಿ ಕಣ್ಣಮ್ಮ' ತಮಿಳು ಧಾರಾವಾಹಿಗಳ ಮೂಲಕ ಅಪಾರ ಮೆಚ್ಚುಗೆ ಗಳಿಸಿದ್ದ ನಟಿ ಶ್ರುತಿ ಷಣ್ಗುಗ ಪ್ರಿಯಾ ಅವರ ಪತಿ ಅರವಿಂದ್ ಶೇಖರ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬಾಡಿ ಬಿಲ್ಡರ್ ಆಗಿದ್ದ ಅರವಿಂದ್ ಕೇವಲ 30 ವರ್ಷ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ.


ಇದನ್ನೂ ಓದಿ:  ಸಿನಿರಸಿಕರ ಮನಗೆದ್ದ "ಕೌಸಲ್ಯ ಸುಪ್ರಜಾ ರಾಮ"


ಫಿಟ್‍ನೆಸ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಿದ್ದ ಅರವಿಂದ್ ಅವರು ದೇಹದ ತೂಕ ಇಳಿಸಿಕೊಳ್ಳಲು ತರಬೇತಿ ನೀಡುತ್ತಿದ್ದರು. 2022ರ ‘ಮಿಸ್ಟರ್ ತಮಿಳುನಾಡು’ ಸಹ ಆಗಿದ್ದ ಅವರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಕಳೆದ ವರ್ಷವಷ್ಟೇ ಶ್ರುತಿ ಷಣ್ಗುಗ ಪ್ರಿಯಾ ಮತ್ತು ಅರವಿಂದ್ ಖುಷಿ ಖುಷಿಯಿಂದ ಮದುವೆಯಾಗಿದ್ದರು.


ಇತ್ತೀಚೆಗಷ್ಟೇ ಈ ಜೋಡಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು. ಶ್ರುತಿ ಷಣ್ಗುಗ ಪ್ರಿಯಾ ಸೀರಿಯಲ್‍ಗಳಲ್ಲಿ ಬ್ಯುಸಿಯಾಗಿದ್ದರೆ, ಅರವಿಂದ್ ಫಿಟ್‍ನೆಸ್ ಕೋಚ್ ಆಗಿ ಖುಷಿಯಿಂದಲೇ ಜೀವನ ನಡೆಸುತ್ತಿದ್ದರು. ಆದರೆ ಹಠಾತ್ ಹೃದಯಾಘಾತಕ್ಕೆ ಒಳಗಾದ ಅರವಿಂದ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ತೋತಾಪುರಿ ಒಂದು ತಿಂದಾಯ್ತು...! ಎರಡನೇ ತೋತಾಪುರಿ ಸವಿಯಲು ನೀವು ರೆಡಿನಾ..?  


ನಟಿ ಶ್ರುತಿ ಷನ್ಮುಗ ಪ್ರಿಯಾ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಜೋಡಿ ರೀಲ್ಸ್‍ಗಳ ಮೂಲಕ ಫೇಮಸ್ ಆಗಿತ್ತು. ಪ್ಯಾರಿಸ್‍ನಲ್ಲಿ ಇತ್ತೀಚೆಗಷ್ಟೇ ಈ ಜೋಡಿ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡಿತ್ತು.


ಶ್ರುತಿ ಹಾಗೂ ಅರವಿಂದ್ ಹಲವು ಕಾಲ ಡೇಟಿಂಗ್ ಮಾಡಿ, ಕಳೆದ ವರ್ಷ ಮೇ ತಿಂಗಳಲ್ಲಿ ಮದುವೆ ಆಗಿದ್ದರು. ರಂಗಭೂಮಿ ಹಿನ್ನೆಲೆಯಿಂದ ಬಂದ ಶ್ರುತಿ ನಂತರ ಕಿರುತೆರೆ ಲೋಕಕ್ಕೆ ಕಾಲಿಟ್ಟು ತಮ್ಮ ವಿಭಿನ್ನ ಅಭಿನಯದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇದೀಗ ಪತಿ ಅರವಿಂದ್ ಶೇಖರ್ ನಿಧನದಿಂದ ನಟಿ ಮತ್ತು ಅವರ ಕುಟುಂಬಕ್ಕೆ ದೊಡ್ಡ ಆಘಾತವುಂಟಾಗಿದೆ. ಈ ಜೋಡಿಯ ಫ್ಯಾನ್ಸ್ ಕೂಡ ದುಃಖ ವ್ಯಕ್ತಪಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.