Tanisha Kuppanda : ʼಮಂಗಳ ಗೌರಿ ಮದುವೆ' ಧಾರಾವಾಹಿ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟಿ ತನಿಷಾ ಕುಪ್ಪಂಡ ಇದೀಗ 'ಪೆಂಟಗನ್' ಸಿನಿಮಾದಲ್ಲಿ ಹಾಟ್‌ ಅವತಾರ ತಾಳಿದ್ದಾರೆ. ಸಾಮಾಜಿಕ ಜಾಲತಾಣದ ಮೋಸ, ಅಪರಾಧ ಜಗತ್ತು, ಯವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲುವ ಈ ಸಿನಿಮಾದಲ್ಲಿ ತನಿಷಾ ಸಖತ್ ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಸಿನಿಮಾಗೆ ರಾಘು ಶಿವಮೊಗ್ಗ ಆಕ್ಷನ್‌ ಕಟ್‌ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಲಿಪ್‌ಲಾಕ್‌, ಬ್ಯಾಕ್‌ಲೆಸ್‌ನಲ್ಲಿ ತನಿಷಾ ಮಿಂಚಿದ್ದಾರೆ. ಪ್ರಕಾಶ್ ಬೆಳವಾಡಿ, ಪ್ರೇರಣಾ, ಸಾಗರ್, ರಾಕೇಶ ಸೇರಿದಂತೆ ಹಲವರು ದಿಗ್ಗಜ ನಟರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಟ್ಟಿರುವ ತನಿಷಾ, 'ಈ ಸಿನಿಮಾದಲ್ಲಿ ಒಂದು ಸ್ಕ್ಯಾಮ್‌ ಇರುತ್ತದೆ. ಆ ಕಥೆಯ ಜೊತೆಗೆ ನಾನು ಇರುತ್ತೇನೆ. ಇಲ್ಲಿ ಆ ಸ್ಕ್ಯಾಮ್‌ ನನಗೆ ಸಂಬಂಧಿಸಿರುವುದಿಲ್ಲ. ಆದ್ರೆ ನನಗೆ ಸಂಬಂಧಪಟ್ಟವರಿಗೆ ಸ್ಕ್ಯಾಮ್‌ ಕನೆಕ್ಷನ್ ಇರುತ್ತದೆ. ಆ ಸ್ಕ್ಯಾಮ್‌ ಏನೂ ಅನ್ನೋದನ್ನು ಸಿನಿಮಾದಲ್ಲೇ ನೋಡಬೇಕು.


ಇದನ್ನೂ ಓದಿ: ಗರ್ಲ್ಸ್‌ ಗಮನಿಸಿ : ಅರ್ಜುನ್ ಜನ್ಯ ನಿರ್ದೇಶನದ ʼ45ʼ ಚಿತ್ರಕ್ಕೆ ನಾಯಕಿ ಬೇಕಾಗಿದ್ದಾರೆ..!


ನನ್ನ ಪಾತ್ರ ನೆಗೆಟಿವ್‌ ಅಲ್ಲ. ಆದರೆ ಇದರ ಬಗ್ಗೆ ಜಾಸ್ತಿ ಹೇಳೋದಕ್ಕೆ ಆಗುವುದಿಲ್ಲ. ನನಗಿಂತ ಚಿಕ್ಕ ವಯಸ್ಸಿನ ಹುಡುಗನ ಜೊತೆಗೆ ಪ್ರೀತಿಯಾಗಿರುತ್ತದೆ. ರಾಘು ಶಿವಮೊಗ್ಗ ನಿರ್ದೇಶನದ ಕಥೆಯಲ್ಲಿ ನಾನು ನಟಿಸಿದ್ದೇನೆ. ನನ್ನ ಪಾತ್ರ ಸಖತ್ ಬೋಲ್ಡ್ ಆಗಿದೆ. ಕಿಸ್ಸಿಂಗ್, ರೊಮ್ಯಾನ್ಸ್ ದೃಶ್ಯಗಳು ಎಲ್ಲ ಇರತ್ತೆ..' ಅನ್ನೋದನ್ನ ಜೀ ಕನ್ನಡ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ತಾನಿಷಾ ಕುಪ್ಪಂಡ. 


ಬಾಲಿವುಡ್‌ನಿಂದ ಕರ್ಕೊಂಡು ಬಂದು ಕುಣಿಸಿದ್ರೆ ಜನ ಖುಷಿ ಪಡ್ತಾರೆ. ಅದೇ ನಾವು ಸ್ವಲ್ಪ ಬೋಲ್ಡ್ ಆಗಿ ನಟಿಸಿದ್ರೆ ನಗೆಟಿವ್ ಮಾತಾಡ್ತಾರೆ ಅನ್ನೋದನ್ನ ನಟಿ ತಾನಿಷಾ ಹೇಳಿಕೊಂಡಿದ್ದಾರೆ. ನಾನು ಇಲ್ಲಿ ನನ್ನ ಪಾತ್ರಕ್ಕೆ ಜೀವ ತುಂಬಿದ್ದೇನೆ. ನನಗೆ ನಾನು ಏನೂ ಅಂತ ಗೊತ್ತು, ಯಾರು ಏನ್ ಬೇಕಾದ್ರೂ ಮಾತಾಡಲಿ ನಾನು ತಲೆಕೆಡಿಸಿಕೊಳ್ಳಲ್ಲ ಅಂತಾರೆ ತಾನಿಷಾ. ಇನ್ನೂ ಪೆಂಟಗನ್ ಸಿನಿಮಾ ಇದೇ ಏಪ್ರಿಲ್ 7ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಸಿನಿಮಾದ ಹಾಡು ಮತ್ತು ಟ್ರೀಲರ್, ಟೀಸರ್ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.